More

    ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಆಸಕ್ತಿ ತೋರಬೇಕು : ಪ್ರೊ.ಎನ್.ಕೆ. ಲೋಕನಾಥ್

    ಮೈಸೂರು: ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಅಧ್ಯಯನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಕರೆ ನೀಡಿದರು.

    ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ‘ಸಾಹಿತ್ಯದ ಬೋಧನೆ’ ವಿಷಯದ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಬಳಸುತ್ತಿದ್ದು, ಮೆಸೇಜ್ ಗಳನ್ನು ಫಾರ್ವಡ್ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರ ಬಂದು ತಮ್ಮ ಗುರಿ ಸಾಧನೆಗೆ ಅಧ್ಯಯನದಲ್ಲಿ ತೊಡಬೇಕು ಎಂದರು.

    ಸ್ಪರ್ಧಾತ್ಮಕ ಜಗದಲ್ಲಿ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಿದೆ. ಇಂಗ್ಲಿಷ್ ಜಾಗತಿಕ ಭಾಷೆಯಾಗಿರುವ ಹಿನ್ನೆಲೆಯಲ್ಲಿ ಇಂಗ್ಲಿಷ್‌ಅನ್ನು ವಿದ್ಯಾರ್ಥಿಗಳು ಕಲಿಯಲೇ ಬೇಕು. ಇಲ್ಲವಾದಲ್ಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೀವು ಹಿಂದುಳಿಯುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ದಿನಕ್ಕೆ ಒಂದಾದರು ಇಂಗ್ಲಿಷ್ ಪತ್ರಿಕೆಯನ್ನು ಓದಿ, ಇದರಿಂದ ಇಂಗ್ಲಿಷ್‌ಅನ್ನು ಸುಲಭವಾಗಿ ಕಲಿಯಬಹುದು ಎಂದರು.

    ವೇದಿಕೆಯಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಅಬ್ದುಲ್ ರಹಿಮಾನ್, ಪ್ರಾಧ್ಯಾಪಕರಾದ ಡಾ.ಬಿ.ಎನ್. ಅನಂತ್ ಕುಮಾರ್, ಡಾ.ಡಿ.ಕೆ. ರವಿಶಂಕರ್, ಗೋವಿಂದರಾಜು, ಡಾ.ಬಿ.ವಿ.ಆರ್. ರಮೇಶ್ ಬಾಬು, ಡಾ.ಜಿ. ಪರಶುರಾಮಮೂರ್ತಿ, ಐಕ್ಯೂಎಸಿ ವಿಭಾಗದ ಸಂಯೋಜಕ ವಿ. ನಂದಕುಮಾರ್, ಪುಣೆಯ ಪ್ರತಾಪ್ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ.ನಿತಿನ್ ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts