More

    ಹಳ್ಳಿಗಳಿಗೆ ಸಮರ್ಪಕ ಬಸ್ ಬಿಡಲು ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

    ಗಜೇಂದ್ರಗಡ: ತಾಲೂಕಿನ ಎಲ್ಲ ಹಳ್ಳಿಗಳಿಗೆ ಸಮರ್ಪಕ ಬಸ್ ಬಿಡಲು ಒತ್ತಾಯಿಸಿ ವಿದ್ಯಾರ್ಥಿಗಳು ಎಸ್‌ಎಫ್‌ಐ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.


    ಗಜೇಂದ್ರಗಡದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಹಳ್ಳಿಗಳಿಗೆ ಬಸ್ ಬಿಡಲು ಕೇಳಿಕೊಂಡರು 2.30ಕ್ಕೆ ಪ್ರತಿ ದಿನ ತೆರಳುವ ಗಜೇಂದ್ರಗಡ- ಬದಾಮಿ ಬಸ್ ಕಳೆದ 4-5 ದಿನದಿಂದ ಬಂದ್ ಆಗಿದೆ. ಕೇಳಿದರೆ ಇರುವ ಬಸ್ ಹತ್ತಿ ಹೋಗಿ ಎಂದು ಕಂಟ್ರೋಲರ್ ಉತ್ತರಿಸುತ್ತಾರೆ. ಇದರಿಂದ ನಮಗೆ ತುಂಬಾ ತೊಂದರೆಯಾಗಿದೆ ಎಂದು ಎಸ್‌ಎಫ್‌ಐ ನೇತೃತ್ವದಲ್ಲಿ ಶುಕ್ರವಾರ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.


    ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಗಣೇಶ ರಾಠೋಡ್ ಮಾತನಾಡಿ , ಕಳೆದ ಒಂದು ತಿಂಗಳ ಹಿಂದೆಯೇ ಹಳ್ಳಿಗಳಿಗೆ ಬಸ್ ಬಿಡಲು ಮನವಿ ನೀಡಲಾಗಿತ್ತು. ಆದರೆ, ಈವರೆಗೂ ಬಸ್ ಬಿಟ್ಟಿಲ್ಲ. ಹೀಗಾಗಿ ಬಸ್ ಸಂಚಾರ ತಡೆದು ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.


    ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಚಂದ್ರು ರಾಠೋಡ್ ಮಾತನಾಡಿದರು.


    ಹೋರಾಟದ ಸ್ಥಳಕ್ಕೆ ಡಿಪೋ ಮ್ಯಾನೇಜರ್ ಅನುಪಸ್ಥಿತಿಯಲ್ಲಿ ಸಿಬ್ಬಂದಿ ಬಂದು ನಾಳೆ ಸಭೆ ಕರೆಯುತ್ತೆವೆ. ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ ಮೇಲೆ ಹೋರಾಟ ಹಿಂಪಡೆಯಲಾಯಿತು.


    ಯೋಗಿಶ ಚಿಟಗಿ, ಮಾಂತೇಶ ಪೂಜಾರ, ನಾಗರಾಜ ಎಸ್.ಎಂ. ಅಪ್ಪು ಪೂಜಾರ, ಮುಪಯ್ಯ ಬೆಳವಣಕಿ, ಮಣಿಕಂಠ, ಸರ್ವೇಶ ಕುರಿ, ಮುತ್ತುರಾಜ ಕುದರಿ, ವೀರಪ್ಪ ನಾಯಕ, ನಾಗರಾಜ ಉಸಲಕೊಪ್ಪದ, ಶರಣಪ್ಪ ರೋಣದ, ಮುತ್ತಣ್ಣ ರೋಣದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts