More

    ಕ್ವಾರಿ ವಿರುದ್ಧ ಬಿಐಟಿ ವಿದ್ಯಾರ್ಥಿಗಳ ಪ್ರತಿಭಟನೆ

    ಉಳ್ಳಾಲ: ಕೆಂಪು ಕಲ್ಲು ಕ್ವಾರಿಯಿಂದ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಇನೋಳಿಯಲ್ಲಿರುವ ಬಿಐಟಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

    ಬೋಳಿಯಾರ್ ಮತ್ತು ಪಾವೂರು ಗ್ರಾಮ ವ್ಯಾಪ್ತಿಗೊಳಪಟ್ಟ ಇನೋಳಿಪದವಿನಲ್ಲಿ ಹಲವು ವರ್ಷಗಳಿಂದ ಕೆಂಪು ಕಲ್ಲಿನ ಕ್ವಾರಿಗಳು ಕಾರ್ಯನಿರ್ವಹಿಸುತ್ತಿವೆ. 12 ವರ್ಷಗಳ ಹಿಂದೆ ಇಲ್ಲಿ ಬಾರೀಸ್ ಇನ್‌ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ(ಬಿಐಟಿ) ಇಂಜಿನಿಯರಿಂಗ್ ಕಾಲೇಜು ಆರಂಭಗೊಂಡಿದೆ. ಇದೀಗ ಇಲ್ಲಿರುವ ಕ್ವಾರಿಗಳಿಂದ ವಾಯು ಮತ್ತು ಶಬ್ಧಮಾಲಿನ್ಯ ಉಂಟಾಗುತ್ತಿದ್ದು, ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ಸಂಸ್ಥೆ ಆರೋಪಿಸಿದ್ದು, ಶುಕ್ರವಾರ ವಿದ್ಯಾರ್ಥಿಗಳೊಂದಿಗೆ ಪ್ರಮುಖರು ಪ್ರತಿಭಟನೆ ನಡೆಸಿದರು.

    ಈ ಸಂದರ್ಭ ಪ್ರಾಂಶುಪಾಲ ಡಾ.ಅಝೀಝ್ ಮುಸ್ತಫಾ ಮಾತನಾಡಿ, ಇಲ್ಲಿ ಹಿಂದಿನಿಂದ ಕ್ವಾರಿಗಳಿದ್ದರೂ ಪ್ರಸ್ತುತ ದಿನಗಳಲ್ಲಿ ಸಂಸ್ಥೆಗೆ ಹತ್ತಿರದಲ್ಲೇ ಆರಂಭಿಸಲಾಗಿದೆ. ಇದರಿಂದ ವಿಪರೀತ ಶಬ್ಧ ಬರುತ್ತಿದ್ದು, ಮಾಲಿನ್ಯ ಆಗುತ್ತಿದೆ. ವಸತಿ ನಿಲಯಗಳಲ್ಲೂ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗುತ್ತಿದೆ. ಸಂಜೆ ಏಳು ಗಂಟೆವರೆಗೆ ಕೆಲಸ ನಡೆಯುತ್ತಿದ್ದು, ಕ್ವಾರಿಗಳ ಹೊಂಡದಿಂದ ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ನಮ್ಮ ಕ್ಯಾಂಪಸ್‌ನಲ್ಲೂ ಕ್ವಾರಿ ತೆಗೆದಿದ್ದು, ಕೇವಲ ಮೂರು ಅಡಿ ಮಾತ್ರ ಇದೆ. ಆದರೆ ಹೊರಗಡೆ 30 ಅಡಿ ಕೊರೆಯಲಾಗುತ್ತಿದೆ ಎಂದು ದೂರಿದರು.

    ಆರ್ಕಿಟೆಕ್ಟ್ ಅಶೋಕ್ ಮೆಂಡೋನ್ಸಾ ಮಾತನಾಡಿ, ನಮಗೆ ಮನೆ, ಕಟ್ಟಡದಂತಹ ಮೂಲಸೌಕರ್ಯಕ್ಕೆ ಕಲ್ಲು ಬೇಕಿದ್ದು, ಇದಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ ಸ್ಥಳೀಯ ಭಾಗದಲ್ಲಿ ಕೃಷಿಗೆ ಪರವಾನಗಿ ಪಡೆದು ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ನಾವು ಕೂಡಾ ಕ್ಯಾಂಪಸ್‌ನಲ್ಲಿ ಕಲ್ಲು ಕಡಿದಿದ್ದರೂ, ಸಮರ್ಪಕ ರೀತಿಯಲ್ಲಿ ಸಾಗಾಟ ಮಾಡಿದ್ದೇವೆ. ಆದರೆ ಹೊರಗಿನ ಕ್ವಾರಿಯಲ್ಲಿ ಆ ಕೆಲಸ ನಡೆಯುತ್ತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts