More

    ವಿದ್ಯಾರ್ಥಿಗಳಿಗೆ ಬಿಜೆಪಿ ಸರ್ಕಾರದಿಂದ ವಂಚನೆ

    ಚಿತ್ರದುರ್ಗ: ರಾಜ್ಯಸರ್ಕಾರ ನಾನಾ ಸವಲತ್ತುಗಳನ್ನು ಒದಗಿಸದೆ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ವಂಚಿಸುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾ ರ‌್ಯದರ್ಶಿ ಮುರುಳೀಧರ ಹಾಲಪ್ಪ ಆರೋಪಿಸಿದರು.

    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಶಾಲೆಗಳು ಪ್ರಾರಂಭ ವಾಗಿ ಹಲವು ತಿಂಗಳುಗಳು ಕಳೆದೇ ಹೋಗಿದ್ದರೂ ಸರಿಯಾಗಿ ಪಠ್ಯಪುಸ್ತಕ ವಿತರಿಸಿಲ್ಲ. ಸಮವಸ್ತ್ರ,ಶೂ,ಸಾಕ್ಸ್ ಪೂರೈಕೆಯೇ ಆಗಿಲ್ಲ,ಇನ್ನು ಸೈಕಲ್‌ವಿತರಣೆ ದೂರದ ಮಾತಾಗಿದೆ.

    ವಿದ್ಯಾರ್ಥಿ ವೇತನ ವಿತರಣೆಯಲ್ಲೂ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಗಮನಕ್ಕೆ ತಂದರೂ ಅವುಗಳನ್ನು ಸರ್ಕಾರ ಕಡೆಗಣಿಸಿದೆ. ಉಚಿತ ಬಸ್‌ಪಾಸ್ ನೀಡದೆ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಾಭ್ಯಾಸಕ್ಕೆ ಸರ್ಕಾ ರವೇ ಅಡ್ಡಿಯಾಗಿದೆ.

    ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಜನವರಿ ಒಂದರಿಂದ ನಮ್ಮ ಪಕ್ಷ ಅ ಭಿಯಾನ ಆರಂಭಿಸಲಿದೆ. ಈ ಸರ್ಕಾರ ಮತಗಳವು ನಡೆಸಿದೆ ಎಂದು ಆರೋಪಿಸಿದ ಅವರು, ಸರ್ಕಾರದ ಈ ನಡೆಯನ್ನು ಕಾಂಗ್ರೆಸ್ ಗಂ ಭೀರವಾಗಿ ಪರಿಗಣಿಸಿದೆ ಎಂದರು.

    ಚಿತ್ರದುರ್ಗ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಉಪಾಧ್ಯಕ್ಷರಾಗಿ ನೇಮಕವಾದ 10,ಪ್ರಧಾನ ಕಾರ‌್ಯದರ್ಶಿಗಳಾಗಿ ನೇಮಕವಾದ 13 ಹಾಗೂ ಕಾರ‌್ಯಕಾರಿ ಸಮಿತಿಗೆ ನೇಮಕವಾಗಿರುವ ಇಬ್ಬರಿಗೆ,ಖಜಾಂಚಿ,ವಕ್ತಾರರಿಗೆ ಹಾಗೂ 35ನೇ ವಾರ್ಡ್ ಅಧ್ಯಕ್ಷರಿಗೆ ನೇಮಕ ಪತ್ರಗಳ ನ್ನು ಹಾಲಪ್ಪ ಹಸ್ತಾಂತರಿಸಿದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್,ಹಾಲಸ್ವಾಮಿ,ಹನುಮಲಿ ಷಣ್ಮುಖಪ್ಪ,ಮೈಲಾರಪ್ಪ,ಲಕ್ಷ್ಮೀ ಕಾಂತ್,ಆರ್.ಪ್ರಕಾಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts