More

    ನಾಯಿಮರಿಗೆ ಮರುಜೀವ ನೀಡಿದ ವಿದ್ಯಾರ್ಥಿನಿ!

    ಕುಂದಾಪುರ: ರಸ್ತೆ ಬದಿಯಲ್ಲಿ ಗಾಯಗೊಂಡಿದ್ದ ನಾಯಿಮರಿಯನ್ನು ಎತ್ತಿ ಕೊಂಡೊಯ್ದು ಆರೈಕೆ ಮಾಡಿ, ಓಡಾಡಲು ಅನುಕೂಲವಾಗುವಂತೆ ಗಾಲಿಯ ಗಾಡಿ ತಯಾರಿಸಿರುವ ಯುವತಿ ಪ್ರಾಣಿಪ್ರಿಯರ ಮೆಚ್ಚುಗೆ ಗಳಿಸಿದ್ದಾರೆ.

    ಹೊಸಂಗಡಿ ನಿವಾಸಿ, ಕುಂದಾಪುರ ತಾಲೂಕು ಮೂಡಲಕಟ್ಟೆ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಪ್ರಿಯಾ ನಾಯಿ ಮರಿಗೆ ಮರುಜನ್ಮ ಕೊಟ್ಟ ಮಾತೃಹೃದಯಿ. ಅಪಘಾತದಿಂದ ಚೇತರಿಸಿಕೊಂಡರೂ ನಾಯಿ ಮರಿ ನಡೆಯಲಾಗದಿರುವುದನ್ನು ಕಂಡ ಪ್ರಿಯಾ ತನ್ನದೇ ತಂತ್ರಜ್ಞಾನದಲ್ಲಿ ಗಾಲಿ ಗಾಡಿ ಮಾಡಿ, ನಾಯಿ ಸೊಂಟಕ್ಕೆ ಪಟ್ಟಿಕಟ್ಟಿ ಸ್ವತಂತ್ರವಾಗಿ ಓಡಾಡಲು ಬಿಟ್ಟಿದ್ದಾರೆ.

    ಹೊಸಂಗಡಿ ರಸ್ತೆಯಲ್ಲಿ ಹೋಗುವಾಗ ಮೂರ‌್ನಾಲ್ಕು ತಿಂಗಳ ನಾಯಿ ಮರಿ ಅಪಘಾತವಾಗಿ ಬಿದ್ದಿತ್ತು. ಹಿಂದಿನ ಎರಡೂ ಕಾಲುಗಳಿಗೆ ಗಂಭೀರ ಗಾಯವಾಗಿ ಸೊಂಟದ ಬಲ ಕಳೆದುಕೊಂಡಿತ್ತು. ಮರುಗಿದ ಪ್ರಿಯಾ, ಹೊಟ್ಟೆಗಿಷ್ಟು ಆಹಾರ ಹಾಕಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ನೋಡಿದರೆ ತೆವಳಿಕೊಂಡು ಮನೆ ಬಾಗಿಲಿಗೇ ಆಗಮಿಸಿತ್ತು. ಪ್ರಥಮ ಚಿಕಿತ್ಸೆ ನೀಡಿ ಮನೆಯಲ್ಲೇ ಉಳಿಸಿ ಆರೈಕೆ ಮಾಡಿದರು. ಚಿಕಿತ್ಸೆಗೆ ಸ್ಪಂದಿಸಿದ ನಾಯಿ ಚೇತರಿಕೆ ಕಂಡರೂ ಓಡಾಡಲು ಆಗುತ್ತಿರಲಿಲ್ಲ. ಆಗ ಈ ಸಾಧನ ತಯಾರಿಸಿದ ವಿದ್ಯಾರ್ಥಿನಿ, ನಾಯಿಮರಿ ಎಲ್ಲೆಂದರಲ್ಲಿ ಚಲಿಸುವಂತೆ ಮಾಡಿದ್ದಾರೆ.

    ಸರಳ ತಂತ್ರಜ್ಞಾನ: ನಾಯಿ ಓಡಾಡಲು ಏನಾದರೂ ಮಾಡಬೇಕೆಂದು ಪ್ರಿಯಾ ಎರಡು ಉದ್ದದ ಪಿವಿಸಿ ಪೈಪ್ ಹೊಟ್ಟೆ ಕೆಳಭಾಗಕ್ಕೆ ಬೆಂಡ್ ಮತ್ತು ಹಿಂಭಾಗದಲ್ಲಿ ಬೆಂಡ್ ಪೈಪ್ ಜೋಡಿಸಿ ಸೊಂಟದ ಬಳಿ ಎರಡೆರಡು ಕಡೆ ಪಟ್ಟಿಗೆ ಮತ್ತೆರಡು ಪೈಪ್ ಜೋಡಿಸಿದರು. ಸೊಂಟದ ಬಳಿ ನೆಲಕ್ಕೆ ಮುಖಮಾಡಿದ ಪೈಪಿಗೆ ಎರಡೂ ಕಡೆ ತೂತು ಕೊರೆದು ಬೋಲ್ಟ್ ನಟ್ ಅಳವಡಿಸಿ ಗಾಲಿ ಜೋಡಿಸಿ, ಕತ್ತಿನ ಬಳಿ ಬೆಲ್ಟ್ ಹಾಕಿ ಎದೆ ಭಾಗದಲ್ಲಿ ಬಿಗಿದು, ಹಿಂಗಾಲು ಬೆನ್ನಿನ ಹಿಂದಿನ ಪೈಪಿಗೆ ಆತುಕೊಳ್ಳುವಂತೆ ಮಾಡಿದರು. ಗಾಲಿಗಾಡಿ ನಾಯಿಗೆ ಕಟ್ಟಿ ಓಡಾಟ ಅಭ್ಯಾಸ ಬಳಿಕ ಈಗ ಸ್ವಚ್ಛಂದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts