More

    ಶಿಕ್ಷಣ ಸಚಿವರ ಎಚ್ಚರಿಕೆ ಬಳಿಕವೂ ವಿದ್ಯಾರ್ಥಿಗಳಿಗೆ ತಪ್ಪದ ಬವಣೆ

    ಹಾವೇರಿ: ಕಾಲೇಜು ವಿದ್ಯಾರ್ಥಿಗಳನ್ನ ಹತ್ತಿಸಿಕೊಳ್ಳದೆ ಸರ್ಕಾರಿ ಬಸ್ ಹೋಗಿದ್ದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಸ್ಥಳದಲ್ಲೇ 4 ಬಸ್​ಗಳನ್ನ ತಡೆದು ಪ್ರತಿಭಟನೆಗೆ ಕುಳಿತ ಘಟನೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗುರುವಾರ ಬೆಳಗ್ಗೆ ಸಂಭವಿಸಿದೆ.

    ಶಾಲಾ-ಕಾಲೇಜುಗಳಿಗೆ ಹೋಗುವ ಬಹುತೇಕ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸಾರಿಗೆ ಸೌಲಭ್ಯ ಸಿಗದೆ ಕಿರಿಕಿರಿ ಅನುಭವಿಸೋದು ತಪ್ಪಿದ್ದಲ್ಲ. ಇಂತಹದ್ದೇ ಘಟನೆ ಬೊಮ್ಮನಹಳ್ಳಿಯಲ್ಲೂ ಸಂಭವಿಸಿದೆ. ಕಾಲೇಜಿಗೆ ಹೋಗಲೆಂದು ಬಂದ ಪಿಯುಸಿ ವಿದ್ಯಾರ್ಥಿಗಳನ್ನು ಬಸ್​ನವರು ಹತ್ತಿಸಿಕೊಂಡಿಲ್ಲ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗೊಕೆ ಆಗಿಲ್ಲ. ಸಿಟ್ಟಿಗೆದ್ದ ವಿದ್ಯಾರ್ಥಿಗಳು ಬಸ್​ ನಿಲ್ದಾಣದಲ್ಲೇ ತಾಡಪತ್ರೆ ಹಾಸಿಕೊಂಡು ಪ್ರತಿಭಟನೆಗೆ ಕುಳಿತರು. ಸ್ಥಳಕ್ಕೆ ಹಾನಗಲ್ ಡಿಪೋ ಮ್ಯಾನೇಜರ್ ಬರಬೇಕೆಂದು ಪಟ್ಟು ಹಿಡಿದಿದ್ದ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದರು.

    ಕಡ್ಡಾಯ ಬಸ್‌ ನಿಲುಗಡೆ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ತೆರಳುತ್ತಿದ್ದ ಸರ್ಕಾರಿ ಬಸ್​ವೊಂದನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿದ್ದ ಶಿಕ್ಷಣ ಸಚಿವರು ಚಾಲಕ ಮತ್ತು ನಿರ್ವಾಹಕರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ಇತ್ತೀಚಿಗೆ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಐ.ಕೆ.ಕಾಲನಿಯಲ್ಲಿ ನಡೆದಿತ್ತು. ಇನ್ಮುಂದೆ ಬಸ್ ನಿಲುಗಡೆ ಸ್ಥಳದಲ್ಲಿ ಬಸ್​​ ನಿಲ್ಲಿಸಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡೇ ಹೋಗಬೇಕು. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದರು. ಇಷ್ಟಾದರೂ ವಿದ್ಯಾರ್ಥಿಗಳನ್ನು ಬಸ್​ಗೆ ಹತ್ತಿಸಿಕೊಳ್ಳದೆ ಹೋಗುತ್ತಿರುವ ಪ್ರಕರಣ ಕಡಿಮೆಯೇನು ಆಗ್ತುತ್ತಿಲ್ಲ

    ಮಕ್ಕಳನ್ನು ಹತ್ತಿಸಿಕೊಳ್ಳದೆ ಹೋದ ಚಾಲಕ, ಬಸ್​ ಅಡ್ಡಗಟ್ಟಿ ರಸ್ತೆಯಲ್ಲೇ ಶಿಕ್ಷಣ ಸಚಿವರಿಂದ ಸಿಬ್ಬಂದಿಗೆ ಹಿಗ್ಗಾಮುಗ್ಗಾ ತರಾಟೆ!

    ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ

    ಹೆಣ್ಣೇ ಕೊಡಲ್ಲಾ ಅಂತಾರ್ರಿ… ಏನಾದ್ರೊಂದು ಯೋಜನೆ ತಂದಾದ್ರೂ ನನ್ನಂಥವ್ರಿಗೆ ಮದ್ವೆ ಮಾಡಿಸ್ರಿ ಸಾಹೇಬ್ರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts