More

    ಮಾರ್ಕ್ಸ್​ನ್ನೂ ದಾನ ಮಾಡುವ ಕಾಲ ಬಂತು! ವಿದ್ಯಾರ್ಥಿಯ ಒಳ್ಳೆತನಕ್ಕೆ ನೆಟ್ಟಿಗರು ಫಿದಾ

    ಕೆಂಟುಕಿ: ದಾನ ಮಾಡಿದರೆ ಪುಣ್ಯ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಅನೇಕರು ಅನ್ನದಾನ, ವಸ್ತ್ರ ದಾನ ಮತ್ತು ಮುಂತಾದ ದಾನಗಳನ್ನು ಮಾಡಿ ಅದರಲ್ಲಿ ನೆಮ್ಮದಿ ಕಾಣುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ತಾನು ಪರೀಕ್ಷೆಯಲ್ಲಿ ಪಡೆದ ಅಂಕವನ್ನೇ ದಾನ ಮಾಡಿದ್ದು, ನೆಟ್ಟಿಗರ ಬಾಯಲ್ಲಿ ಭೇಷ್​ ಎನಿಸಿಕೊಂಡಿದ್ದಾನೆ.

    ಅಮೆರಿಕದ ಕೆಂಟುಕಿಯ ಹೈಸ್ಕೂಲ್​ನ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಯ ದಾನದ ಕಥೆಯನ್ನು ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯೊಬ್ಬ ತನಗೆ ಬಂದಿರುವ ಅಂಕಗಳಲ್ಲಿ ಐದು ಅಂಕಗಳನ್ನು ಅತ್ಯಂತ ಕಡಿಮೆ ಅಂಕ ಪಡೆದಿರುವ ವಿದ್ಯಾರ್ಥಿಗೆ ನೀಡಿ ಎಂದು ತನ್ನ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾನೆ. ಆತನಿಗೆ ಪರೀಕ್ಷೆಯಲ್ಲಿ 99 ಅಂಕ ಬಂದಿದ್ದು, ಆತ ಹೇಳಿದಂತೆ ಅದರಲ್ಲಿ ಐದು ಅಂಕವನ್ನು ಅತ್ಯಂತ ಕಡಿಮೆ ಅಂಕ ಬಂದಿರುವ ವಿದ್ಯಾರ್ಥಿಗೆ ನೀಡಿರುವುದಾಗಿ ಶಿಕ್ಷಕಿ ಬರೆದುಕೊಂಡಿದ್ದಾರೆ.

    ಈ ವಿದ್ಯಾರ್ಥಿ ಅಂಕವನ್ನು ತನ್ನ ಸ್ನೇಹಿತರಿಗೆ ನೀಡಿ ಎಂದಿಲ್ಲ. ತನ್ನ ಅಂಕ ಯಾರಿಗೆ ಹೋಗುತ್ತದೆ? ಆತ ಒಳ್ಳೆಯವನೋ ಕೆಟ್ಟವನೋ? ಯಾವ ಕಾರಣದಿಂದ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಾನೆ ಎನ್ನುವ ಯಾವುದೇ ಯೋಚನೆಯನ್ನು ಮಾಡದೆ ವಿದ್ಯಾರ್ಥಿ ಅನುತ್ತೀರ್ಣವಾಗುತ್ತಿರುವ ವಿದ್ಯಾರ್ಥಿಯೊಬ್ಬನಿಗೆ ಸಹಾಯ ಮಾಡಿದ್ದಾನೆ ಎಂದು ಶಿಕ್ಷಕರು ತಿಳಿಸಿದ್ದಾರೆ. ವಿದ್ಯಾರ್ಥಿಯ ಅಂಕ ದಾನದ ಈ ಕಥೆಗೆ ನೆಟ್ಟಿಗರು ಮನಸೋತಿದ್ದು, ಸ್ವಾರ್ಥ ತುಂಬಿರುವ ಈ ಜಗತ್ತಿನಲ್ಲಿ ಬೇರೆ ವಿದ್ಯಾರ್ಥಿಯ ಬಗ್ಗೆ ಯೋಚಿಸುತ್ತಿರುವ ಬಾಲಕನಿಗೆ ಭೇಷ್​ ಎಂದು ಹೇಳುತ್ತಿದ್ದಾರೆ.

    ಕಳೆದ ತಿಂಗಳು 22ನೇ ತಾರೀಖಿನಂದು ಈ ಪೋಸ್ಟ್​ನ್ನು ಶಿಕ್ಷಕಿ ಫೇಸ್​ಬುಕ್​ನಲ್ಲಿ ಹಾಕಿದ್ದು, ಇದುವರೆಗೆ ಈ ಪೋಸ್ಟ್​ 68 ಸಾವಿರಕ್ಕೂ ಹೆಚ್ಚು ಜನರಿಂದ ಶೇರ್​ ಆಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts