More

    ರೈತಸಂಘ ಪ್ರಬಲಗೊಳಿಸಲು ಹೋರಾಟ ಅಗತ್ಯ

    ಶಿರಾಳಕೊಪ್ಪ: ಈ ಹಿಂದೆ ರೈತಸಂಘ ರಾಜ್ಯದಲ್ಲಿ ಹಲವಾರು ಐತಿಹಾಸಿಕ ಹೋರಾಟಗಳನ್ನು ಮಾಡಿ ಪ್ರಬಲ ಸಂಘಟನೆ ಆಗುವ ವೇಳೆ ಎರಡು ಹೋಳಾಗಿ ಸ್ವಲ್ಪ ಹಿನ್ನಡೆ ಕಂಡಿತು. ಈಗ ಮತ್ತೆ ಹೋರಾಟಗಳನ್ನು ಕೈಗೆತ್ತಿಕೊಂಡು ಪ್ರಬಲ ಸಂಘಟನೆ ಮಾಡುವ ಹೊಣೆ ಎಲ್ಲ ರೈತರ ಮೇಲೆ ಇದೆ ಎಂದು ರಾಜ್ಯ ರೈತಸಂಘದ ನೂತನ ಜಿಲ್ಲಾಧ್ಯಕ್ಷ ಹಾಲಪ್ಪ ಗೌಡ ಹೇಳಿದರು.

    ಶಿರಾಳಕೊಪ್ಪ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕಾರಿಪುರ ತಾಲೂಕಿನಲ್ಲಿ ರೈತಸಂಘ ಪ್ರಬಲವಾಗಿದೆ. ಸಾಕಷ್ಟು ಗ್ರಾಮ ಘಟಕಗಳು ಇದ್ದು ನಿಮಗೆ ಏನೇ ಸಮಸ್ಯೆ ಉಂಟಾದರೂ ಸ್ಪಂದಿಸುವುದಾಗಿ ಹೇಳಿದರು. ಈ ಹಿಂದೆ ಸೊರಬ ತಾಲೂಕಿನಲ್ಲಿ ರೈತಸಂಘ ಸಾಕಷ್ಟು ಹೋರಾಟ ಮಾಡಿ ಹೆಸರು ಪಡೆದಿತ್ತು. ಆದರೆ ಈಗ ಸಂಘಟನೆ ಕ್ಷೀಣಿಸಿದೆ. ಅಲ್ಲಿಯ ಹಿರಿಯರು ಹೇಳಿದಾಗ ಸಭೆ ಕರೆದು ಸಂಘಟನೆ ಬಲಗೊಳಿಸಲು ಸದಾ ಸಿದ್ಧ ಎಂದರು.
    ನೂತನ ಜಿಲ್ಲಾ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ಮಾತನಾಡಿ, ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ರೈತಸಂಘದ ಸಭೆ ನಡೆದಾಗ ನೂತನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಗಿ ಸೊರಬ ತಾಲೂಕಿನ ಹಾಲಪ್ಪಗೌಡ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಎಂದರು.
    ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟನಗೌಡ ಮಾತನಾಡಿ, ಸಂಘಟನೆಯಲ್ಲಿ ಎಲ್ಲರೂ ಸಮಾನರು. ಈ ಹಿಂದೆ ನಂಜುAಡಸ್ವಾಮಿ ರೈತಸಂಘದ ಅಧ್ಯಕ್ಷರಿದ್ದಾಗ ಸಾಮೂಹಿಕ ನಾಯಕತ್ವವನ್ನು ಪ್ರತಿಪಾದಿಸಿದ್ದರು. ನಮ್ಮ ಎದುರು ಇರುವ ಸಮಸ್ಯೆಗಳನ್ನು ನಾವು ಎದುರಿಸಬೇಕಿದೆ ಎಂದು ಹೇಳಿದರು.
    ನೂತನ ಜಿಲ್ಲಾ ಸಹಕಾರ್ಯದರ್ಶಿ ಕೊಟ್ರೇಶ್, ಉಪಾಧ್ಯಕ್ಷ ಸೊರಬದ ಶಿವಪೂಜೆಪ್ಪ ಗೌಡ ಮಾತನಾಡಿದರು. ತಾಲೂಕು ಕಾರ್ಯದರ್ಶಿ ರಾಜು ಹೊಸಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts