More

    ಹಕ್ಕಿಗಾಗಿ ಹೋರಾಟ ಅನಿವಾರ್ಯ

    ಬಸವನಬಾಗೇವಾಡಿ: ದೇಶಕ್ಕೆ ಸಂವಿಧಾನ ದೊರೆತು 75 ವರ್ಷವಾದರೂ ಇನ್ನೂ ಪರಿಶಿಷ್ಟ ಜಾತಿಯವರು ಆರ್ಥಿಕ ಮತ್ತು ಸಾಮಾಜಿಕವಾಗಿ ಬೆಳೆಯಲು ಸಾಧ್ಯವಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ನಿವೃತ್ತ ಆಯುಕ್ತ ಎಚ್.ಆರ್. ಭೀಮಾಶಂಕರ ಹೇಳಿದರು.

    ಪಟ್ಟಣದ ಮಸಿಬಿನಾಳ ರಸ್ತೆಯ ಗಣೇಶ ನಗರದ ಯಲ್ಲಾಲಿಂಗ ಮಠದ ಕಲ್ಯಾಣಮಂಟಪದಲ್ಲಿ ಜಿಲ್ಲಾ ಹಾಗೂ ತಾಲೂಕಾ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ, 2023-24 ನೇ ಸಾಲಿನ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬಸವನಬಾಗೇವಾಡಿ ಕೊಲ್ಹಾರ ತಾಲೂಕಿನ ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಸರ್ಕಾರಿ ನೌಕರಿಗೆ ನೇಮಕಗೊಂಡ, ನಿವೃತ್ತಿ ಹೊಂದಿದ ಸಮಾಜದ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿವರ್ಷ ಮಂಡಿಸುವ ಬಜೆಟ್‌ನಲ್ಲಿ ಎಸ್ಸಿ,ಎಸ್ಟಿ ಜನಾಂಗದ ಅಭಿವೃದ್ಧಿಗೆ ಎಸ್‌ಟಿಪಿ, ಟಿಎಸ್‌ಪಿ ಯೋಜನೆಯಲ್ಲಿ ಅನುದಾನ ನೀಡುತ್ತದೆ. ಈ ಅನುದಾನದಲ್ಲಿ ಜನಾಂಗದವರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕು. ಅದರಲ್ಲಿ ಕೃಷಿ ಭೂಮಿ, ಹೈನುಗಾರಿಕೆ, ಸ್ವಯಂ ಉದ್ಯೋಗ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳಿಂದ ಸಮಾಜದ ಜನರ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ಹೊಂದಬೇಕು. ಆದರೆ ಕಳೆದ 10-15ವರ್ಷದಲ್ಲಿ ಶೇ. 5ರಷ್ಟು ಸಹ ಹಣ ಬಳಕೆಯಾಗಿಲ್ಲ ಎಂದರು.

    ಇದು ಹೀಗೆ ಮುಂದುವರೆದರೆ ಪರಿಶಿಷ್ಟರು ಆರ್ಥಿಕವಾಗಿ ಸಬಲರಾಗಲು ಸಾಧ್ಯವೇ. ನಮ್ಮ ಹಕ್ಕನ್ನು ನಾವು ಕೇಳುತ್ತಿಲ್ಲ. ನಾವು ಹೀಗೆ ಕುಳಿತರೆ ನಮಗೆ ನ್ಯಾಯ ಸಿಗುವುದಿಲ್ಲ. ಇದನ್ನು ಅರಿತು ಯುವಕರು ಒಗ್ಗಟ್ಟಿನಿಂದ ಹೋರಾಟಕ್ಕೆ ಮುಂದಾಗಬೇಕು ಎಂದರು.

    ತಳವಾಡ ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಪೂಜಾರಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ನೀಡಬೇಕು. ಅಂದಾಗ ಮಾತ್ರ ನಾವು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.

    ತಾಲೂಕಾಧ್ಯಕ್ಷ ಕೆ.ಎಂ. ಬೇಲಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎಚ್.ಎಲ್. ದೊಡ್ಡಮನಿ ಉಪನ್ಯಾಸ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷೆ ಅನ್ನಪೂರ್ಣ ಕಲ್ಯಾಣಿ, ಜಿಲ್ಲಾ ಮಾದಿಗ ನೌಕರರ ಸಂಘದ ಅಧ್ಯಕ್ಷ ಶ್ರೀಶೈಲ ದೊಡ್ಡಮನಿ, ಶರಣು ದೊಡ್ಡಮನಿ, ವಸಂತ ಕಲ್ಯಾಣಿ, ರಾಜು ಬಸರಕೋಡ, ಶರಣಪ್ಪ ಮಾದರ, ಎಸ್.ಎಲ್. ಓಂಕಾರ, ಸಿ.ಟಿ. ಮಾದರ, ಸಂಗಮೇಶ ಎಲಿಬಳ್ಳಿ, ಎಂ.ಪಿ. ಮಾದರ, ಪಿ.ವೈ. ರತ್ನಾಕರ, ಪಿ.ಬಿ. ಕಡಕೊಳ, ಮುತ್ತುರಾಜ ಹೆಬ್ಬಾಳ, ಎಂ.ವೈ. ಕಳ್ಳಿಮನಿ, ಭೀಮರಾವ ಬಾಗೇವಾಡಿ, ಅರ್ಜುನ ಗಂಗಾಧರ ಇತರರಿದ್ದರು.

    ಕೆ.ಎಂ. ಬೇಲಿ ಸ್ವಾಗತಿಸಿದರು. ಶರಣು ದೊಡ್ಡಮನಿ, ಪ್ರತಿಭಾ ಮುಕರ್ತಿಹಾಳ ನಿರೂಪಿಸಿದರು. ಪಿ.ಬಿ. ದೊಡ್ಡಮನಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts