More

    ಸದೃಢ ಆರೋಗ್ಯವೇ ಕರೊನಾ ವೈರಸ್‌ಗೆ ಮದ್ದು

    ಮೂಡಲಗಿ: ಕರೊನಾ ನಿರ್ಮೂಲನೆಗೆ ಲಸಿಕೆ ಲಭ್ಯವಾಗುವವರೆಗೆ ಪ್ರತಿಯೊಬ್ಬರೂ ಸೋಂಕಿನ ಬಗ್ಗೆ ಜಾಗ್ರತೆ ವಹಿಸುವುದು ಅತ್ಯಗತ್ಯ ಎಂದು ಸುರಕ್ಷಾ ವಿವಿಧೋದ್ದೇಶಗಳ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಡಾ.ಅನಿಲ ಪಾಟೀಲ ಸಲಹೆ ನೀಡಿದರು.

    ಸಮೀಪದ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ’ ಮತ್ತು ಕೋವಿಡ್ ಜಾಗೃತಿ ಅಭಿಯಾನದಲ್ಲಿ ಸಿದ್ರಾಮಯ್ಯ ಹಿರೇಮಠ ಕುಟುಂಬದ ಆತಿಥ್ಯದಲ್ಲಿನ ಶನಿವಾರದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಗತ್ತಿನ ಎಲ್ಲ ವಿಜ್ಞಾನಿಗಳು ಲಸಿಕೆಗಾಗಿ ಶ್ರಮಿಸುತ್ತಿದ್ದಾರೆ. ಲಸಿಕೆ ಸಿಗುವವರೆಗೆ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳುವುದೇ ಕರೊನಾಗೆ ಮದ್ದು ಎಂದು ಹೇಳಿದರು.

    ಸುಣಧೋಳಿಯ ಶ್ರೀಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ಆರೋಗ್ಯಕರವಾದ ಅಂಶಗಳು ಒಳಗೊಂಡಿವೆ. ಅಂಥ ಆಚರಣೆ ಮತ್ತು ದೇಸಿ ಸಂಸ್ಕೃತಿಯನ್ನು ಜನರು ಎಂದಿಗೂ ಬಿಡಬಾರದು ಎಂದರು.

    ಪ್ರವಚನಕಾರ ಶರಣ ಲಕ್ಷ್ಮಣ ದೇವರು ಆಧ್ಯಾತ್ಮಿಕ ಪ್ರವಚನ ನೀಡಿದರು. ಸಾನ್ನಿಧ್ಯ ವಹಿಸಿದ್ದ ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

    ಮಡಿವಾಳಯ್ಯ ಹಿರೇಮಠ, ಸಿದ್ರಾಮಯ್ಯ ಹಿರೇಮಠ, ಸತ್ಯಪ್ಪ ಗೋಡಿಗೌಡರ, ಮಹಾದೇವ ಬೆಳಗಲಿ, ಆನಂದರಾವ್ ನಾಯ್ಕ, ಡಾ.ಎಸ್.ಎಸ್. ಪಾಟೀಲ, ಸಂಗಪ್ಪ ಸೂರಣ್ಣವರ ಇದ್ದರು. ಕಾರ್ತಿಕ ಶಾಸ್ತ್ರಿ ಹಾಗೂ ವೀರಯ್ಯ ಶಾಸ್ತ್ರಿ ಮಂತ್ರಘೋಷ ಪಠಿಸಿದರು. ಐಶ್ವರ್ಯಾ ತಳವಾರ ಪ್ರಾರ್ಥಿಸಿದರು. ಡಾ.ಕೆ.ಎಚ್.ನಾಗರಾಳ ನಿರೂಪಿಸಿದರು. ಶಿಕ್ಷಕ ಪ್ರವೀಣ ಹುಕ್ಕೇರಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts