More

    ಗುಜರಾತ್​ ಸ್ಥಳೀಯ ಚುನಾವಣೆಯ ಮತಎಣಿಕೆ: ಭರ್ಜರಿ ಮುನ್ನಡೆ ಸಾಧಿಸಿದ ಬಿಜೆಪಿ, ಕಾಂಗ್ರೆಸ್​ ಕಂಗಾಲು!

    ನವದೆಹಲಿ: ಪ್ರಧಾನಿ ಮೋದಿ ತವರು ಗುಜರಾತ್​ನಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ಮತಎಣಿಕೆ ಆರಂಭವಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಎದುರಾಳಿ ಕಾಂಗ್ರೆಸ್​ ವಿರುದ್ಧ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿ ಉತ್ತಮ ಆರಂಭ ಪಡೆದಿದೆ.

    ಪುರಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಬಿಜೆಪಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಮುನ್ನಡೆ ಸಾಧಿಸಲಿದೆ ಎಂದು ಪಕ್ಷ ಆಶಿಸಿದೆ.

    ಮತಎಣಿಕೆ ನಡೆಯುತ್ತಿದ್ದು ಒಟ್ಟು 81 ಪುರಸಭೆ ಸ್ಥಾನಗಳಲ್ಲಿ 54ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಉಳಿದಂತೆ ಕಾಂಗ್ರೆಸ್​ 2 ಮತ್ತು ಕೇಜ್ರಿವಾಲ್​ ಅವರ ಆಮ್​ ಆದ್ಮಿ ಪಕ್ಷ ಒಂದರಲ್ಲಿ ಖಾತೆ ತೆರೆದಿದೆ.

    ಇದನ್ನೂ ಓದಿರಿ: ಇನ್​ಸ್ಟಾಗ್ರಾಂನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ, ವಿಶ್ವದ ಮೊದಲ ಕ್ರಿಕೆಟರ್ ದಾಖಲೆ ಬರೆದ ಕೊಹ್ಲಿ..!

    ಒಟ್ಟು 31 ಜಿಲ್ಲಾ ಪಂಚಾಯತ್​ ಸ್ಥಾನಗಳಲ್ಲಿ 12ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 231 ತಾಲೂಕು ಪಂಚಾಯಿತಿಗಳಲ್ಲಿ 51ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್​ ಕೇವಲ 7ರಲ್ಲಿ ಖಾತೆ ತೆರೆದಿದೆ. ಒಟ್ಟು 8,474 ಸ್ಥಾನಗಳಲ್ಲಿ, 8,235 ಸ್ಥಾನಗಳಲ್ಲಿ ಚುನಾವಣೆ ನಡೆದರೆ, ಉಳಿದ ಸ್ಥಾನಗಳು ಅವಿರೋಧವಾಗಿ ನಡೆದವು.

    ಕಳೆದ ವಾರ ಮಹಾನಗರ ಪಾಲಿಕೆಗಳಾದ ಅಹಮದಾಬಾದ್, ಸೂರತ್, ರಾಜ್‌ಕೋಟ್, ವಡೋದರಾ, ಭಾವನಗರ ಮತ್ತು ಜಾಮ್‌ನಗರಗಳಲ್ಲಿ 576 ಪಾಲಿಕೆ ಸ್ಥಾನಗಳಲ್ಲಿ 483 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) 27 ಸ್ಥಾನಗಳನ್ನು ಗೆಲ್ಲುವ ಮೂಲಕ ಸೂರತ್‌ನಲ್ಲಿ ತನ್ನ ಅಸ್ತಿತ್ವವನ್ನು ನೋಂದಾಯಿಸಿಕೊಂಡಿದೆ. (ಏಜೆನ್ಸೀಸ್​)

    ಗಂಡನ ಮನೆಯಲ್ಲಿ ನವವಿವಾಹಿತೆ ಆತ್ಮಹತ್ಯೆ! ಮದ್ವೆ ಆದ 2 ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ್ದೇಕೆ?

    ಮಹಿಳಾ ದಿನಾಚರಣೆ: ಆಶಾ ಭಟ್​ರಿಂದ ವಿಜಯವಾಣಿ, ದಿಗ್ವಿಜಯ ನ್ಯೂಸ್ ಆಯೋಜಿಸಿರೋ ಸ್ಪರ್ಧಾ ವಿವರಗಳುಳ್ಳ ಫ್ಲಯರ್ ಬಿಡುಗಡೆ

    ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್‌ಗೂ ಸ್ಪಿನ್ ಪಿಚ್ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts