More

    ಕ್ಷಯರೋಗ ಮುಕ್ತ ಜಿಲ್ಲೆಗೆ ಶ್ರಮ

    ಕಲಕೇರಿ: ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಹಮ್ಮಿಕೊಳ್ಳುವ ಮೂಲಕ ಎಲ್ಲರೂ ಒಗ್ಗೂಡಿ ಕ್ಷಯರೋಗದ ವಿರುದ್ಧ ಹೋರಾಟ ನಡೆಸಿ ಜಿಲ್ಲೆಯನ್ನು ಕ್ಷಯಮುಕ್ತವಾಗಿಸಲು ಆರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಆರೋಗ್ಯ ಇಲಾಖೆಯ ಆರ್‌ಕೆಎಸ್‌ಕೆ ವಿಭಾಗದ ಅಪ್ಪಾಸಾಬ ಮಾಂಗ ಹೇಳಿದರು.

    ಗ್ರಾಮದ ಅಲ್ ಅಮೀನ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷಯರೋಗ ವಿಭಾಗದ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಕ್ಷಯರೋಗ ಕುರಿತ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಎಚ್‌ಐಒ ರೇಷ್ಮಾ ರೋಡಗಿ ಮಾತನಾಡಿ, ಯಾರಿಗಾದರೂ 2ವಾರಕ್ಕಿಂತ ಹೆಚ್ಚಿನ ಅವಧಿ ಕೆಮ್ಮು, ಜ್ವರ ಬರುವುದು, ಹಸಿವಾಗದೇ ಇರುವುದು, ತೂಕ ಕಡಿಮೆಯಾಗುವುದು ಕ್ಷಯರೋಗದ ಲಕ್ಷಣಗಳಾಗಿವೆ. ಟಿಬಿ ಕಾಯಿಲೆ ಶ್ವಾಸಕೋಶಗಳಿಗಷ್ಟೇ ಅಲ್ಲದೇ ದೇಹದ ಇನ್ನಿತರ ಭಾಗಗಳಿಗೂ ಹರಡುವ ಸಾಧ್ಯತೆಯಿದ್ದು, ನಿರಂತರ ಚಿಕಿತ್ಸೆಯಿಂದ ಕ್ಷಯರೋಗವನ್ನು ಗುಣಪಡಿಸಬಹುದಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಜಹಾಂಗೀರಬಾಶಾ ಸಿರಸಗಿ ಮಾತನಾಡಿ, ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ಕಾರ್ಯ ಶ್ಲಾಘನೀಯವಾಗಿದ್ದು, ಎಲ್ಲರೂ ಈ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಸಹಕರಿಸಿ ಆಂದೋಲನವನ್ನು ಯಶಸ್ವಿಗೊಳಿಸಲು ಮುಂದಾಗಬೇಕಿದೆ ಎಂದರು.

    ಈ ವೇಳೆ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಕ್ಷಯಮುಕ್ತ ಜಿಲ್ಲೆ ಕುರಿತಾದ ಕರಪತ್ರವನ್ನು ಅನಾವರಣಗೊಳಿಸಿ ಎಲ್ಲರಿಗೂ ವಿತರಿಸಲಾಯಿತು. ಅಲ್ ಅಮೀನ ಪ್ಯಾರಾ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಅಬ್ದುಲ್ ಸತ್ತಾರ ಸಿರಸಗಿ, ಆರೋಗ್ಯ ಇಲಾಖೆಯ ಸಿಎಚ್‌ಒ ಅನಿತಾ ದೊಡಮನಿ, ಎಚ್‌ಐಒ ಫಾರೂಕ ವಲ್ಲಿಭಾಯಿ, ಪ್ರಾಚಾರ್ಯ ಹಬೀಬುಲ್ಲಾ ಮೋಮಿನ್, ಉಪನ್ಯಾಸಕರಾದ ಸದ್ದಾಮ ಯಡ್ರಾಮಿ, ಶಾನವಾಜ ಹೊಸಮನಿ, ಹೀನಾ ಖಾನಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts