More

    ಸಮಾಜದ ಅಭಿವೃದ್ಧಿಗೆ ಶ್ರಮಿಸಿ

    ನರಗುಂದ: ರಾಜ್ಯ ಸರ್ಕಾರ ಅಮರಶಿಲ್ಪಿ ಜಕಣಾಚಾರ್ಯರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವ ಮೂಲಕ ರಾಜ್ಯದಲ್ಲಿರುವ 45 ಲಕ್ಷಕ್ಕೂ ಹೆಚ್ಚು ವಿಶ್ವಕರ್ಮ ಜನಾಂಗದವರ ಬಹುದಿನಗಳ ಬೇಡಿಕೆ ಈಡೇರಿಸಿದೆ ಎಂದು ತಹಸೀಲ್ದಾರ್ ಎ.ಎಚ್. ಮಹೇಂದ್ರ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಾಡಳಿತ ಹಾಗೂ ವಿಶ್ವಕರ್ಮ ಸಮಾಜದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಜಕಣಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ವಿಶ್ವವಿಖ್ಯಾತ ಶಿಲ್ಪಕಲೆಯನ್ನು ಹೊಂದಿರುವ ಬೇಲೂರು, ಹಳೇಬೀಡು ದೇವಾಲಯಗಳನ್ನು ಕೆತ್ತಿರುವ ಅಮರಶಿಲ್ಪಿ ಜಕಣಾಚಾರ್ಯರ ಕರಕುಶಲ ಕಾರ್ಯಗಳು ಎಂದೆಂದಿಗೂ ಅಜರಾಮರ. ಜನಾಂಗದವರು ಸಂಘಟನೆಯಲ್ಲಿ ರಾಜಕಾರಣ ಮಾಡದೆ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.

    ಶಿರಸ್ತೇದಾರ ಎಸ್. ಸುನಂದ, ರೇಣುಕಾ ಚಿಗದನ್ನವರ, ಆನಂದ ಬನಪ್ಪನವರ, ಜಿ.ಪಿ. ಪಾಟೀಲ, ಎಸ್.ಎಲ್.ಪಾಟೀಲ, ಶಹಾಪೂರ, ಎಸ್.ಸಿ. ದೊಡಮನಿ, ಮಂಜುನಾಥ ಕೊಣ್ಣೂರ, ಸಂಜು ಉಳ್ಳಾಗಡ್ಡಿ, ಮಂಜು ಕೊಣ್ಣೂರ, ರಫೀಕ್ ಲೋಧಿ, ಶಿವಕುಮಾರ ಶೆಟ್ಟರ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts