More

    ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಧರಣಿ

    ಚಿತ್ರದುರ್ಗ: ನಿವೃತ್ತ ಕಟ್ಟಡ ಕಾರ್ಮಿಕರಿಗೆ ಕೂಡಲೇ ಪಿಂಚಣಿ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

    ನಿವೃತ್ತ ಕಟ್ಟಡ ಕಾರ್ಮಿಕರಿಗೆ ಮೂರು ತಿಂಗಳಿಂದ ಪಿಂಚಣಿ ಬಿಡುಗಡೆಯಾಗಿಲ್ಲ. 2021- 22ನೇ ಸಾಲಿನಲ್ಲಿ ಬಾಕಿಯಿರುವ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆಯಾಗಬೇಕು. 2022-23 ನೇ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಲು ಆದೇಶಿಸಬೇಕು.

    ಕಾರ್ಮಿಕರ ಸಹಜ ಸಾವಿನಿಂದ ನೊಂದ ಕುಟುಂಬಗಳಿಗೆ ಐದು ಲಕ್ಷ ರೂ.ಸಹಾಯಧನ ಹಾಗೂ ವಿವಾಹ ಸಹಾಯಧನ ಒಂದು ಲಕ್ಷ ರೂ.ಹೆಚ್ಚಿಸಬೇಕು. ಅಪಘಾತದಲ್ಲಿ ಮಡಿದ ಕಾರ್ಮಿಕನ ಕುಟುಂಬಕ್ಕೆ 10 ಲಕ್ಷ ರೂ. ನಗದು ನೀಡಬೇಕು. ಸೆಸ್ ವಸೂಲಿ ಪ್ರಾಧಿಕಾರ ರಚನೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

    ರಾಜ್ಯಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಮಂಜುನಾಥ್, ಪ್ರಧಾನ ಕಾರ‌್ಯದರ್ಶಿ ವೈ. ಕುಮಾರ್, ಉಪಾಧ್ಯಕ್ಷ ಕೆ.ಗೌಸ್‌ಪೀರ್, ನರಸಿಂಹಸ್ವಾಮಿ, ಎಂ.ಆರ್.ನಾದಿ ಅಲಿ, ಡಿ.ಈಶ್ವರಪ್ಪ, ಸಲೀಂ, ರಾಜಪ್ಪ, ರಾಜಣ್ಣ, ಇಮಾಂಸಾಬ್ ತಿಮ್ಮಯ್ಯ, ಬಸವರಾಜು, ಗೌಸ್‌ಖಾನ್, ತಿಪ್ಪೇಸ್ವಾಮಿ, ಫೈರೋಜ್, ರಫಿ, ಪ್ರಸನ್ನ, ಇ.ರಾಘವೇಂದ್ರ, ಲಿಂಗರಾಜು, ಎಸ್.ಭರತ್, ರಮೇಶ್ ಇತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts