More

  ಬೀದಿ ಬದಿ ವ್ಯಾಪಾರಸ್ಥರಿಗೆ ನೆರವು ನೀಡಿ – ಸಿಎಂಗೆ ಮನವಿ

  ಮೂಡಲಗಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಘೋಷಿಸಿರುವ ವಿಶೇಷ ಪ್ಯಾಕೇಜ್‌ನಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿ ಬೀದಿ ಬದಿ ವ್ಯಾಪಾರಸ್ಥರು ಬುಧವಾರ ತಹಸೀಲ್ದಾರ್ ಡಿ.ಜೆ. ಮಹಾತ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಿದರು.

  ಲಾಕ್‌ಡೌನ್‌ನಿಂದಾಗಿ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ವ್ಯಾಪಾರ, ವಹಿವಾಟು ಬಂದ್ ಆಗಿ ಕುಟುಂಬಸ್ಥರು ಜೀವನ ನಡೆಸುವುದು ಕಷ್ಟವಾಗಿದೆ. ನಾವು ನಿತ್ಯದ ದುಡಿಮೆ ನಂಬಿಕೊಂಡು ಜೀವನ ನಡೆಸುತ್ತಿದ್ದೆವು. ಆದರೆ, ಲಾಕ್‌ಡೌನ್ ನಮ್ಮ ಬದುಕಿನ ನೆಮ್ಮದಿ ಕಸಿದುಕೊಂಡಿದೆ. ನಮಗೆ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಸೌಲಭ್ಯ, ಸಹಕಾರ ಸಿಕ್ಕಿಲ್ಲ.

  ರಾಜ್ಯ ಸರ್ಕಾರ ವಿವಿಧ ವೃತ್ತಿ ಮಾಡುವವರಿಗೆ ಪರಿಹಾರ ಘೋಷಿಸಿದಂತೆ ಬೀದಿ ಬದಿ ವ್ಯಾಪಾರಸ್ಥರಿಗೂ ಪರಿಹಾರ ಧನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. ಪ್ರಕಾಶ ಮಾದರ, ಹನುಮಂತ ಸತರಡ್ಡಿ, ಮಹಾದೇವ ಶೆಕ್ಕಿ, ಯಶವಂತ ಸರ್ವಿ, ಈರಪ್ಪ ಢವಳೇಶ್ವರ, ಶ್ರೀಕಾಂತ ಮಡಿವಾಳರ, ಈರಪ್ಪ ಕಲಾಯಿಗಾರ, ಲಕ್ಷ್ಮೀ ಭಜಂತ್ರಿ,
  ರೇಷ್ಮಾ ಪೈಲ್ವಾನ್, ರೇಖಾ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts