More

    ಪತಿ-ಪತ್ನಿ ಸಂಬಂಧದ ಪರಿಶುದ್ಧಂ

    ಬೆಂಗಳೂರು: ಪತಿ-ಪತ್ನಿ ನಡುವಿನ ಸಂಬಂಧ ಎಷ್ಟು ಪವಿತ್ರ ಎಂಬುದನ್ನು ‘ಪರಿಶುದ್ಧಂ’ ಚಿತ್ರದ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ಆರ್ಯನ್ ಕಾರ್ತಿಕ್. ಈಗಾಗಲೇ ‘ದರ್ಪಣ’ ಸಿನಿಮಾ ನಿರ್ದೇಶಿಸಿದ ಕಾರ್ತಿಕ್​ಗಿದು ಎರಡನೇ ಸಿನಿಮಾ. ಇತ್ತೀಚೆಗಷ್ಟೇ ಈ ಚಿತ್ರದ ಮಾತಿನ ಭಾಗದ ಶೂಟಿಂಗ್ ಮುಗಿಸಿರುವ ಅವರು, ಏಪ್ರಿಲ್ 28ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಿಕೊಂಡಿದ್ದಾರೆ.

    ‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ. ಗಂಡ-ಹೆಂಡತಿ ಸಂಬಂಧ, ಮದುವೆಯ ಪಾವಿತ್ರ್ಯತೆ ಬಗ್ಗೆ ‘ಪರಿಶುದ್ಧಂ’ನಲ್ಲಿ ಹೇಳಿದ್ದೇನೆ. ಎರಡು ಹಾಡುಗಳ ಚಿತ್ರೀಕರಣ ಬ್ಯಾಂಕಾಕ್, ಮಲೇಶಿಯಾದಲ್ಲಿ ನಡೆಯಲಿದೆ’ ಎಂದು ನಿರ್ದೇಶಕರು ಮಾಹಿತಿ ನೀಡಿದರು.

    ಕುಮಾರ್ ರಾಥೋಡ್, ರೋಹನ್ ಜಂಟಿಯಾಗಿ ನಿರ್ವಿುಸಿರುವ ಈ ಚಿತ್ರದಲ್ಲಿ ಭಾರ್ಗವ್ ಮತ್ತು ರೋಹನ್ ನಾಯಕರಾಗಿ ನಟಿಸಿದ್ದಾರೆ. ಕಮಿಷನರ್ ಪಾತ್ರದಲ್ಲಿ ಯತಿರಾಜ್, ಗೃಹಿಣಿಯಾಗಿ ‘ಸ್ಪರ್ಶ’ ರೇಖಾ ಕಾಣಿಸಿಕೊಂಡರೆ, ದಿಶಾ ಪೂವಯ್ಯ ಪೊಲೀಸ್ ಅಧಿಕಾರಿಯಾಗಿದ್ದಾರೆ.

    ಪರಪುರುಷನೊಂದಿಗೆ ಓಡಿಹೋದ ಪತ್ನಿ; ನೊಂದು ಆತ್ಮಹತ್ಯೆ ಮಾಡಿಕೊಂಡ ಪತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts