More

    ಬಂದಾಗುತ್ತಿದೆ ಕೃಷಿ ಡಿಪ್ಲೊಮಾ ಕಾಲೇಜ್

    ನರಗುಂದ: ತಾಲೂಕಿನ ಕೃಷಿ ಡಿಪ್ಲೊಮಾ ಕಾಲೇಜ್ ಅನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ವಿಲೀನಗೊಳಿಸಲು ಕೃಷಿ ಇಲಾಖೆ ಮುಂದಾಗಿದೆ. ಗ್ರಾಮೀಣ ಭಾಗದ ಜನರಿಗೆ ಆಶಾಕಿರಣವಾಗಬೇಕಾಗಿದ್ದ ಈ ಡಿಪ್ಲೊಮಾ ಕಾಲೇಜ್ ಮುಚ್ಚುವ ನಿರ್ಧಾರಕ್ಕೆ ಈ ಭಾಗದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

    79 ಎಕರೆ ವಿಸ್ತೀರ್ಣ ಹೊಂದಿರುವ ತಾಲೂಕಿನ ಕೊಣ್ಣೂರಿನ ಬೆಳ್ಳೇರಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಬೀಜೋತ್ಪಾದನೆ ಹಾಗೂ ಸಂಶೋಧನೆ ನಡೆಸಲಾಗುತ್ತದೆ. ಇದರಲ್ಲಿನ 6 ಎಕರೆ ಪ್ರದೇಶದಲ್ಲಿ ಕರ್ನಾಟಕ ಸರ್ಕಾರದಿಂದ ಪ್ರತ್ಯೇಕವಾಗಿ ಅನುದಾನ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿ 2015ರಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್​ಗಳನ್ನು ಪ್ರಾರಂಭಿಸಲಾಯಿತು. ಒಂದು ಬ್ಯಾಚ್​ಗೆ 20 ವಿದ್ಯಾರ್ಥಿಗಳಂತೆ ಇದುವರೆಗೆ ಮೂರು ಬ್ಯಾಚ್​ನ 55 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 4ನೇ ಬ್ಯಾಚ್​ನ 13 ಜನ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 1 ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಕಾಲೇಜು ಕಟ್ಟಡ, 4 ಪ್ರಯೋಗಾಲಯ, ಎರಡು ಬೋಧನಾ ಕೊಠಡಿ, ಸ್ಟೋರ್ ರೂಂ ಮತ್ತು ಶೌಚಗೃಹಗಳನ್ನು ನಿರ್ವಿುಸಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುವ ಉದ್ದೇಶದಿಂದ 5 ಎಕರೆಯಷ್ಟು ಜಮೀನನ್ನು ನೀಡಲಾಗಿದೆ.

    ಕೃಷಿ ಡಿಪ್ಲೊಮಾ ಕೋರ್ಸ್​ಗಳಲ್ಲಿ ವಿಷಯದ ಪಠ್ಯಕ್ರಮಗಳ ಜತೆಗೆ ಪ್ರಾಯೋಗಿಕ ತರಗತಿ, ಪ್ರಾತ್ಯಕ್ಷಿಕೆ, ಕ್ಷೇತ್ರ ವೀಕ್ಷಣೆ ಸೇರಿ ಹಲವು ವಿಧದ ಜ್ಞಾನಾರ್ಜನೆ ಮಾಡಿಸಲಾಗುತ್ತದೆ. ಕೃಷಿ ಕಾಲೇಜು ಸ್ಥಾಪಿಸುವುದರಿಂದ ಈ ಭಾಗದ ರೈತರ ಮಕ್ಕಳು ಕೃಷಿ ಪದವಿ ಹೊಂದಿ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಉನ್ನತ ಹುದ್ದೆಗಳಿಗೆ ತೆರಳಲು ಸಹಾಯಕವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಪ್ರಗತಿಪರ ರೈತರಾಗಲು ಸಹಕಾರಿಯಾಗುತ್ತದೆ ಎಂಬ ಆಶಾಭಾವನೆಯನ್ನು ಇಲ್ಲಿನ ರೈತರು ಹೊಂದಿದ್ದರು. ಆದರೆ, ಡಿಪ್ಲೊಮಾ ಕಾಲೇಜ್ ಬಂದ್ ಮಾಡುವ ನಿರ್ಧಾರದಿಂದಾಗಿ ರೈತರ ನಿರೀಕ್ಷೆ ಹುಸಿಗೊಳಿಸಲಾಗುತ್ತಿದೆ.

    ಕಾಯಂ ಸಿಬ್ಬಂದಿಯೇ ಇಲ್ಲ

    ಕೃಷಿ ಡಿಪ್ಲೊಮಾ ಕೋರ್ಸ್​ಗಳನ್ನು ಆರಂಭಿಸಿ ಐದು ವರ್ಷ ಕಳೆದರೂ ಇಲ್ಲಿಯತನಕ ಕಾಯಂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಯನ್ನು ಮಂಜೂರು ಮಾಡಿಲ್ಲ. ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರು ಎರವಲು ಸೇವೆ, ಗುತ್ತಿಗೆ ಆಧಾರದಡಿ ತರಗತಿ ನಡೆಸುತ್ತಿದ್ದಾರೆ. ಇದು ಈ ಭಾಗದ ರೈತರು, ಕೃಷಿ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಕೃಷಿ ಕ್ಷೇತ್ರದಲ್ಲಿ ಆಗಿರುವ ಸಂಶೋಧನೆಗಳು, ವಿಸ್ತರಣಾ ಚಟುವಟಿಕೆಗಳು ಗ್ರಾಮೀಣ ಮಟ್ಟಕ್ಕೆ ಇನ್ನೂ ತಲುಪಿಲ್ಲ. ಕೃಷಿ ಪದವೀಧರರು ಸಾಕಾಗುವಷ್ಟು ಲಭ್ಯವಾಗುತ್ತಿಲ್ಲ ಎಂಬುವುದನ್ನು ಮನಗಂಡು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾಲೂಕಿನ ಬೆಳ್ಳೇರಿಯಲ್ಲಿ ಕೃಷಿ ಡಿಪ್ಲೊಮಾ ಕಾಲೇಜು ಪ್ರಾರಂಭಿಸಲಾಗಿತ್ತು. ಆದರೀಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರ ನಿರಾಸಕ್ತಿಯಿಂದಾಗಿ ಜಿಟಿಟಿಸಿ, ಡಿಪ್ಲೊಮಾ ಕಾಲೇಜುಗಳು ಮತಕ್ಷೇತ್ರದಿಂದ ಬೇರೆಡೆಗೆ ತೆರಳುತ್ತಿವೆ. ಇನ್ನಾದರೂ ಸಚಿವರು ಸರ್ಕಾರದ ಮಟ್ಟದಲ್ಲಿ ರ್ಚಚಿಸಿ ಮಹತ್ವದ ಶಿಕ್ಷಣ ಸಂಸ್ಥೆಗಳನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಇದು ಇಲ್ಲಿನ ಮತದಾರರಿಗೆ ಘೊರ ಅನ್ಯಾಯ ಮಾಡಿದಂತಾಗುತ್ತದೆ.

    | ಬಿ.ಆರ್. ಯಾವಗಲ್ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts