More

    ಕಪ್ಪು ಕಲ್ಲು ಕ್ವಾರಿ ಪಕ್ಕ ಬಾಳೆ, ಅಡಕೆ ಕೃಷಿ

    ಅನ್ಸಾರ್ ಇನೋಳಿ ಉಳ್ಳಾಲ
    ಪ್ರಸ್ತುತ ಕೃಷಿ ಕ್ಷೇತ್ರದತ್ತ ಜನರ ಆಸಕ್ತಿ ಹೆಚ್ಚುತ್ತಿದ್ದು, ಕೃಷಿಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಕಪ್ಪು ಕಲ್ಲಿನ ಕ್ವಾರಿಯಲ್ಲಿ ಹೊಸ ಪ್ರಯೋಗಕ್ಕಿಳಿದಿದ್ದಾರೆ.
    15 ವರ್ಷಗಳಿಂದ ಕ್ವಾರಿ, ಇತರ ಉದ್ಯಮದ ಜತೆ ಕೃಷಿ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿರುವ ಸಂತೋಷ್ ಕುಮಾರ್ ರೈ ತೋಟದಲ್ಲಿ ಕಂಗು, ತೆಂಗು, ಹಲಸು, ಕೊಕ್ಕೊ, ಪಪ್ಪಾಯ, ಕರಿಮೆಣಸು, ಮಾವು, ರಂಬುಟಾನ್ ಮೊದಲಾದ ಬೆಳೆಗಳಿವೆ. ಅವರು ಕುರ್ನಾಡುವಿನಲ್ಲಿ ಕಪ್ಪು ಕಲ್ಲಿನ ಕ್ವಾರಿ ಹೊಂದಿದ್ದು ಅದರ ಆಸುಪಾಸಿನಲ್ಲಿ ಜಮೀನು ಖರೀದಿಸಿ 450 ಅಡಕೆ ಗಿಡಗಳನ್ನು ನೆಟ್ಟಿದ್ದಾರೆ.

    ಟಿಶ್ಯೂ ಕಲ್ಚರ್ ಬಾಳೆಗಿಡಗಳು
    ಬ್ರಹ್ಮಾವರದಿಂದ ಒಂದು ಸಸಿಗೆ ತಲಾ 35 ರೂ.ನಂತೆ 500 ಟಿಶ್ಯೂ ಕಲ್ಚರ್ ಹೆಸರಿನ ಬಾಳೆಗಿಡಗಳನ್ನು ತಂದು ನೆಟ್ಟಿದ್ದು ಸದ್ಯ 250 ಗಿಡಗಳು ಉಳಿದಿವೆ. ಈ ತಳಿ ಗ್ರಾಮೀಣ ಭಾಗಕ್ಕೆ ಹೊಸದಾಗಿದ್ದು, ಆರು ತಿಂಗಳಲ್ಲಿ ಗೊನೆ ಹಾಕುತ್ತದೆ. ಇದನ್ನು ಕ್ವಾರಿ ಪಕ್ಕ ಬೆಳೆಸುವುದು ಹೊಸ ಸಾಹಸ. ಇದರ ಜತೆಗೆ ನೇಂದ್ರ ಬಾಳೆ ಗಿಡಗಳನ್ನೂ ನೆಟ್ಟಿದ್ದು ಹಲವು ಗಿಡಗಳು ಗೊನೆ ಬಿಟ್ಟಿವೆ. ನೀರಿಗಾಗಿ ಸ್ಪಿಂಕ್ಲರ್ ಕಲ್ಪಿಸಲಾಗಿದೆ. ಎಲ್ಲ ಗಿಡಗಳೂ ನಿರೀಕ್ಷಿತ ಫಸಲು ನೀಡಿದಲ್ಲಿ ಮುಂದಿನ ದಿನಗಳಲ್ಲಿ ಕಪ್ಪು ಕಲ್ಲು ಕ್ವಾರಿ ಇರುವ ಜಮೀನೂ ನಿರುಪಯುಕ್ತ ಎನಿಸದು.

    15 ವರ್ಷಗಳಿಂದ ತೋಟ ಹೊಂದಿದ್ದೇನೆ. ಕ್ವಾರಿ ಸುತ್ತ ಜಮೀನು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಜಮೀನಿಗೆ ಸಂಬಂಧಪಟ್ಟವರು ಆತಂಕ ವ್ಯಕ್ತಪಡಿಸಿದ್ದರಿಂದ ಅವರ ಆತಂಕ ದೂರಗೊಳಿಸಲು ಕಂಗು, ಬಾಳೆ ಗಿಡಗಳನ್ನು ಬೆಳೆಸಲು ಮುಂದಾದೆ.
    ಸಂತೋಷ್ ಕುಮಾರ್ ರೈ ಬೋಳಿಯಾರ್
    ಕೃಷಿಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts