More

    VIDEO | ಸ್ಟೀವನ್ ಸ್ಮಿತ್ ವಿವಾದಾತ್ಮಕ ಕ್ಯಾಚ್; ಔಟ್ ಅಥವಾ ಸಿಕ್ಸರ್?

    ಸೌಥಾಂಪ್ಟನ್: ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಸಮಾಧಾನಕರ ಗೆಲುವು ಸಂಪಾದಿಸಿತು. ಈ ನಡುವೆ ಪಂದ್ಯದಲ್ಲಿ ಆಸೀಸ್ ಮಾಜಿ ಸ್ಟೀವನ್ ಸ್ಮಿತ್ ಬೌಂಡರಿ ಗೆರೆ ಬಳಿ ಹಿಡಿದ ಅದ್ಭುತ ಕ್ಯಾಚ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

    ವೇಗಿ ಮಿಚೆಲ್ ಸ್ಟಾರ್ಕ್ ಎಸೆದ ಪಂದ್ಯದ 17ನೇ ಓವರ್‌ನ 5ನೇ ಎಸೆತದಲ್ಲಿ ಹಂಗಾಮಿ ನಾಯಕ ಮೊಯಿನ್ ಅಲಿ ಡೀಪ್ ಮಿಡ್‌ವಿಕೆಟ್‌ನತ್ತ ಚೆಂಡನ್ನು ಬಾರಿಸಿದರು. ಸಿಕ್ಸರ್ ಆಗುವಂತಿದ್ದ ಹೊಡೆತವನ್ನು ಬೌಂಡರಿ ಗೆರೆ ಬಳಿ ಸ್ಟೀವನ್ ಸ್ಮಿತ್ ಅದ್ಭುತವಾಗಿ ಕ್ಯಾಚ್ ಹಿಡಿದರು. ಆದರೆ ಈ ವೇಳೆ ಅವರ ಪಾದದ ಹಿಂಭಾಗ ಬೌಂಡರಿ ಗೆರೆ ಸ್ಪರ್ಶಿಸಿದಂತೆ ಕಾಣಿಸಿದ್ದು ಭಾರಿ ಗೊಂದಲಕ್ಕೆ ಕಾರಣವಾಯಿತು.

    ಇದನ್ನೂ ಓದಿ: VIDEO | ಇಂಗ್ಲೆಂಡ್ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ ಆಸೀಸ್‌ಗೆ ಸಮಾಧಾನಕರ ಗೆಲುವು

    ಪಂದ್ಯದ ತೃತೀಯ ಅಂಪೈರ್ ಆಗಿದ್ದ ಡೇವಿಡ್ ಮಿಲ್ಸ್ ಹಲವು ಬಾರಿ ಆ ಕ್ಯಾಚ್‌ನ ಮರುಪ್ರಸಾರವನ್ನು ವೀಕ್ಷಿಸಿದರು. ಆದರೆ ಅಲ್ಲೂ ಅವರಿಗೆ ಯಾವುದೇ ಸ್ಪಷ್ಟತೆ ಕಾಣಿಸಲಿಲ್ಲ. ಕೊನೆಗೂ ಮೊಯಿನ್ ಅಲಿ ಔಟ್ ಎಂದು ಅವರು ತೀರ್ಪು ನೀಡಿದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಅಭಿಮಾನಿಗಳಲ್ಲಿ ಈ ಬಗ್ಗೆ ಇನ್ನೂ ಗೊಂದಲ ಉಳಿದುಕೊಂಡಿದೆ.

    ಸ್ಟೀವನ್ ಸ್ಮಿತ್ ಕ್ಯಾಚ್ ಹಿಡಿಯುವ ವೇಳೆ ಅವರ ಶೂ ಬೌಂಡರಿ ಗೆರೆಯನ್ನು ಸ್ಪರ್ಶಿಸಿದೆ. ಹೀಗಾಗಿ ಅದು ಸಿಕ್ಸರ್ ಎಂಬ ವಾದವನ್ನೂ ಕೆಲ ಕ್ರಿಕೆಟ್ ಪ್ರೇಮಿಗಳು ಮಂಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts