More

    ರಾಜ್ಯಸಭೆ ಚುನಾವಣೆಗೆ ಜೆಡಿಎಸ್​​ನಿಂದ ಅಭ್ಯರ್ಥಿ?

    ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಜೆಡಿಎಸ್​​​​​​​ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಗುರುವಾರ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ.

    ಈ ಕುರಿತು ಮಾತನಾಡಿರುವ ಕುಪೇಂದ್ರ ರೆಡ್ಡಿ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧಿಸುವಂತೆ ಸೂಚಿಸಿದ್ದಾರೆ. ಗುರುವಾರ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

    ನಾನು ನಾಲ್ಕನೇ ಅಭ್ಯರ್ಥಿಯೋ, ಐದನೇ ಅಭ್ಯರ್ಥಿಯೋ ಗೊತ್ತಿಲ್ಲ. ನಮ್ಮ ಹೈ ಕಮಾಂಡ್ ಸ್ಪರ್ಧಿಸುವಂತೆ ಹೇಳಿದೆ. ನಾನು ನಾಮಪತ್ರ ಸಲ್ಲಿಸುತ್ತೇನೆ. ದಾಖಲೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ಕುಪೇಂದ್ರ ರೆಡ್ಡಿ ಹೇಳಿದ್ದಾರೆ.

    ಬಿಜೆಪಿ ನಾರಾಯಣಸಾ ಭಾಂಡಗೆ ಅವರನ್ನು ಈಗಾಗಲೇ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.

    ಕಾಂಗ್ರೆಸ್ ಅಜಯ್ ಮೇಕನ್, ಡಾ. ಸಯ್ಯದ್ ನಾಸೀರ್ ಹುಸೈನ್ ಹಾಗೂ ಜಿ. ಸಿ.ಚಂದ್ರಶೇಖರ್ ಅವರನ್ನು ಅಭ್ಯರ್ಥಿಗಳೆಂದು ಪ್ರಕಟಿಸಿದೆ. ಈ ನಡುವೆ ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ. 

    ಇಂದು ಮತ್ತೆ ಸರ್ಕಾರದೊಂದಿಗೆ ರೈತರ ಸಭೆ: ಪಂಜಾಬ್‌ನಲ್ಲಿ 4 ಗಂಟೆಗಳ ಕಾಲ ರೈಲು ತಡೆ ಚಳವಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts