More

    ರಾಜ್ಯಮಟ್ಟದ ಚುನಾವಣಾ ರಸಪ್ರಶ್ನೆ ಸ್ಪರ್ಧೆ ಜ.17-18

    ಬೆಂಗಳೂರು: ರಾಷ್ಟ್ರೀಯ ಮತದಾರರ ದಿನಾಚರಣೆ(ಜ.25)ರ ಪ್ರಯುಕ್ತ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸಲು ಶಾಲೆ, ತಾಲ್ಲೂಕು ಮತ್ತು ಜಿಲ್ಲೆಯ ಮಟ್ಟದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಪ್ರಬಂಧ (ಕನ್ನಡ ಮತ್ತು ಇಂಗ್ಲೀಷ್), ಭಿತ್ತಿ ಚಿತ್ರ ರಚನೆ ಮತ್ತು ರಸ ಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು.

    ಜಿಲ್ಲೆಯಲ್ಲಿ ಮೊದಲ ಮೂರು ಸ್ಥಾನಗಳ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರಬಂಧ (ಕನ್ನಡ ಮತ್ತು ಇಂಗ್ಲೀಷ್), ಭಿತ್ತಿ ಚಿತ್ರ ರಚನೆ ಸ್ಪರ್ಧೆಯನ್ನು ಜಿಲ್ಲೆಗಳಲ್ಲಿ ಡಿ.28 ರಂದು ಆನ್‌ಲೈನ್ ಮುಖಾಂತರ ನಡೆಸಲಾಗಿದೆ.

    ಚುನಾವಣಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಪ್ರೌಢ ಶಾಲಾ ಮಕ್ಕಳಿಗೆ ರಾಜ್ಯಮಟ್ಟದಲ್ಲಿ ಚುನಾವಣಾ ರಸಪ್ರಶ್ನೆ ಸ್ಪರ್ಧೆಯನ್ನು ಜ.17 ಮತ್ತು 18 ರಂದು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ.

    34 ಜಿಲ್ಲೆಗಳಿಂದ ಬಂದಂತಹ ಒಂದು ತಂಡಕ್ಕೆ ಜ.17 ರಂದು ಲಿಖಿತ ಪರೀಕ್ಷೆಯನ್ನು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದೆ.
    ಈ ಲಿಖತ ಪರೀಕ್ಷೆಯಲ್ಲಿ ವಿಭಾಗವಾರು ಸರ್ಧೆಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆದ ಒಟ್ಟು 16 ಜಿಲ್ಲಾ ತಂಡಗಳನ್ನು ವಿಭಾಗವಾರು ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. 4 ವಿಭಾಗವಾರು ತಂಡಗಳಿಗೆ ಪ್ರತ್ಯೇಕ ಸ್ಪರ್ಧೆಯನ್ನು ಏರ್ಪಡಿಸಿ, ವಿಭಾಗವಾರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜಿಲ್ಲೆಯ ತಂಡವನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ರಾಜ್ಯ ಮಟ್ಟದ ಚುನಾವಣಾ ರಸಪ್ರಶ್ನೆಗೆ ಆಯ್ಕೆಯಾದ 4 ಜಿಲ್ಲೆಗಳ ತಂಡಗಳಿಗೆ ಅಂತಿಮ ಸ್ಪರ್ಧೆಯನ್ನು ನಡೆಸಲಾಗುವುದು.

    ವಿಭಾಗವಾರು ಮಟ್ಟದ 4 ಸ್ಪರ್ಧೆ ಮತ್ತು ರಾಜ್ಯ ಮಟ್ಟದ ಒಂದು ಸ್ಪರ್ಧೆಯನ್ನು ಚಿತ್ರೀಕರಿಸಿ ದೂರದರ್ಶನ ಕೇಂದ್ರ ಬೆಂಗಳೂರು ಬಿತ್ತರಿಸುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಬಿತ್ತರಿಸಲಾಗುವುದು.

    ಕಿರು ಪ್ರವಾಸ ಆಯೋಜನೆ

    ಈ ಕಾರ್ಯಕ್ರಮಕ್ಕೆ ಬರುವ ಸ್ಪರ್ಧಾ ತಂಡಗಳಿಗೆ ಕಿರು ಪ್ರವಾಸವನವನ್ನು ಏರ್ಪಡಿಸಿದ್ದು, ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದನಗಳ ವೀಕ್ಷಣೆ, ನೆಹರು ಪ್ಲಾನಿಟೋರಿಯಂ, ವಿಶ್ವೇಶ್ವರಯ್ಯ ಮ್ಯೂಸಿಯಮ್ ಮತ್ತು ಬಾಲಭವನಕ್ಕೆ ಬೇಟ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts