More

    ಅತಿವೃಷ್ಟಿ ಹಣ ವಾಪಸ್ ಪಡೆಯಬೇಡಿ, ಸರ್ಕಾರಕ್ಕೆ ಶಾಸಕ ಟಿ.ಡಿ.ರಾಜೇಗೌಡ ಆಗ್ರಹ

    ಕೊಪ್ಪ: ಇನ್ನೊಂದು ತಿಂಗಳಿಗೆ ಮಳೆ ಆರಂಭವಾಗಲಿದ್ದು ಕಳೆದ ಬಾರಿ ಉಂಟಾದ ಅತಿವೃಷ್ಟಿಗೆ ರಾಜ್ಯ ಸರ್ಕಾರ ಸಮರ್ಪಕವಾಗಿ ಸ್ಪಂದಿಸಲಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.

    ಸರ್ಕಾರ ಅತಿವೃಷ್ಟಿ ಹಾನಿಗೆ ಅಲ್ಪಸ್ವಲ್ಪ ಹಣ ಬಿಡುಗಡೆ ಮಾಡಿದೆ. ಲಾಕ್​ಡೌನ್​ನಿಂದ ಕುಗ್ರಾಮಗಳಿಗೆ ಇನ್ನೂ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಅಷ್ಟರಲ್ಲೇ ಸರ್ಕಾರ ಅತಿವೃಷ್ಟಿಗೆ ನೀಡಿದ ಹಣ ಹಿಂಪಡೆಯಲು ಮುಂದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

    ಸರ್ಕಾರ ಇಂತಹ ನಿರ್ಧಾರ ಕೈಬಿಟ್ಟು ಜನಪರವಾಗಿ ನಡೆದುಕೊಳ್ಳಬೇಕು. ಕ್ಷೇತ್ರದಲ್ಲಿ ಕಳೆದ ಭಾರಿಯ ಅತಿವೃಷ್ಟಿ ಕೆಲಸಗಳೇ ಬಾಕಿ ಇವೆ. ಹವಾಮಾನ ಇಲಾಖೆ ಈ ಬಾರಿ ಕಳೆದ ವರ್ಷದಷ್ಟೇ ಮಳೆಯಾಗುತ್ತದೆ ಎಂದು ಹೇಳಿದೆ. ಸರ್ಕಾರ ಕೂಡಲೇ ಮುಂದೆ ಉಂಟಾಗುವ ಮಳೆ, ಅದರ ಹಾನಿ ಬಗ್ಗೆ ತುರ್ತು ಸಭೆ ನಡೆಸಬೇಕು. ಅತಿವೃಷ್ಟಿ ಎದುರಿಸಲು ಸಿದ್ಧವಾಗಬೇಕು ಎಂದು ಸಲಹೆ ನೀಡಿದರು.

    ಎಚ್ಚೆತ್ತುಕೊಳ್ಳದ ಸರ್ಕಾರ: ಚೀನಾದಲ್ಲಿ ಕರೊನಾ ವೈರಸ್ ಪ್ರಕರಣ ದಾಖಲಾಗುತ್ತಿದ್ದಂತೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಅಂತಾರಾಷ್ಟ್ರೀಯ ವಿಮಾನಗಳನ್ನು ನಿಲ್ಲಿಸಿದ್ದರೆ ಇಂದು ದೇಶದಲ್ಲಿ ಕರೊನಾ ಪ್ರಕರಣಗಳು ಇರುತ್ತಿರಲಿಲ್ಲ. ದೇಶದಲ್ಲಿ ಕರೊನಾ ವ್ಯಾಪಿಸಿದ ಮೇಲೆ ಲಾಕ್​ಡೌನ್ ಮಾಡಿ ಸೋಂಕು ತಡೆಗೆ ಶಕ್ತಿಮೀರಿ ಪ್ರಯತ್ನಿಸಿದೆ. ಲಾಕ್​ಡೌನ್​ನಿಂದ ದೇಶದಲ್ಲಿ ಕೂಲಿ ಕಾರ್ವಿುಕರು, ಶ್ರಮಿಕರು, ಮಧ್ಯಮ ವರ್ಗದವರಿಗೆ ಹೆಚ್ಚು ತೊಂದರೆಯಾಗಿದ್ದು ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಊಟಕ್ಕೂ ಪರದಾಡುವ ಸ್ಥಿತಿ ನಿರ್ವಣವಾಗಿದೆ. ಕ್ಷೇತ್ರದಲ್ಲಿ ಅಂಥವರನ್ನು ಗುರುತಿಸಿ ಇಂದಿರಾ ದಾಸೋಹ ಯೋಜನೆ, ಸುಜನ ಟ್ರಸ್ಟ್ ಹಾಗೂ ವೈಯಕ್ತಿಕ ಕಿಟ್​ಗಳನ್ನು ವಿತರಿಸಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಪ್ರಯತ್ನ ಮಾಡಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts