More

    ದಿವಾಳಿ ಅಂಚಿನಲ್ಲಿ ರಾಜ್ಯ ಸರ್ಕಾರ

    ಲಿಂಗಸುಗೂರು: ಪ್ರಧಾನಿ ನರೇಂದ್ರ ಮೋದಿ ದೇಶದ ಸಾಮಾನ್ಯ ಜನರ ಒಳಿತಿಗಾಗಿ ಅನೇಕ ಜನಪರ ಹಾಗೂ ಅಭಿವೃದ್ಧಿ ಪರ ಕಾರ್ಯಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಇತರ ದೇಶಗಳ ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

    ಪಟ್ಟಣದಲ್ಲಿ ಲಿಂಗಸುಗೂರು ಮತ್ತು ಮುದಗಲ್ ಮಂಡಲ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗದೆ ಜನರಲ್ಲಿ ನಿರಾಸೆ ಮೂಡಿದೆ. ಮನೆಗಳಲ್ಲಿ ಒಡಕು ಹುಟ್ಟಿಸಿ ಅಸಮಾಧಾನದ ಹೊಗೆ ಸೃಷ್ಟಿಸಿದೆ. ಗ್ಯಾರಂಟಿ ಯೋಜನೆ ಜಾರಿಯಿಂದ ಸರ್ಕಾರಿ ನೌಕರರಿಗೆ ಸಂಬಳವಿಲ್ಲದಂತಾಗಿದ್ದು, ಸರ್ಕಾರ ದಿವಾಳಿ ಅಂಚಿನಲ್ಲಿದೆ ಎಂದರು.

    ಸಿಎಂ ಸಿದ್ದರಾಮಯ್ಯ ದೇಶದ್ರೋಹಿಗಳಿಗೆ ಬೆಂಬಲ ನೀಡುವ ಮೂಲಕ ತುಷ್ಠೀಕರಣ ರಾಜಕೀಯ ಮಾಡುತ್ತಿದ್ದು, ಇದರಿಂದಾಗಿ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಮೊಳಗಿದೆ. ಆದರೆ, ಪ್ರಧಾನಿ ಮೋದಿ ಅವರ ದೇಶ ಭಕ್ತಿಗೆ ಯಾರೂ ಸರಿಸಾಟಿಯಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿ 400 ಸ್ಥಾನ ಗಳಿಸಲು ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟನೆಗೊಳಿಸಬೇಕೆಂದು ಶಾಸಕ ವಜ್ಜಲ್ ಹೇಳಿದರು.

    ಲಿಂಗಸುಗೂರು ಮಂಡಲ ಅಧ್ಯಕ್ಷರಾಗಿ ಅಯ್ಯಪ್ಪ ಮಾಳೂರು ಹಾಗೂ ಮುದಗಲ್ ಮಂಡಲ ಅಧ್ಯಕ್ಷರಾಗಿ ಹುಲ್ಲೇಶ ಸಾಹುಕಾರ ನಿಕಟಪೂರ್ವ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳರಿಂದ ಪಕ್ಷದ ಬಾವುಟ ಪಡೆದು ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಕಾರ್ಯದರ್ಶಿ ಸಂತೋಷ ರಾಜಗುರು, ಪ್ರಮುಖರಾದ ಜಗನ್ನಾಥ ಕುಲಕರ್ಣಿ, ಗಿರಿಮಲ್ಲನಗೌಡ ಪಾಟೀಲ್, ಶಂಕರಗೌಡ ಬಳಗಾನೂರ, ಜುವಲೆಪ್ಪ ನಾಯ್ಕ, ರುದ್ರಗೌಡ ತುರಡಗಿ, ಮಹಾಂತಗೌಡ ಬಯ್ಯಪೂರ, ಬಸನಗೌಡ ಚಿತ್ತಾಪೂರ, ಮುದಕಪ್ಪ ವಕೀಲ, ಸಿದ್ದಯ್ಯ ತಾತ, ಸಿದ್ರಾಮಯ್ಯ ತಲೆಕಟ್, ಎನ್.ಸ್ವಾಮಿ ಹಟ್ಟಿ, ಬಸವರಾಜಪ್ಪ, ರಾಜಪ್ಪ ಮೂನ್ನೂರು, ಈಶ್ವರ ವಜ್ಜಲ್, ರಮಾನಂದ ಯಾದವ, ಚಂದಾವಲಿ, ನಾರಾಯಣಪ್ಪ, ರುದ್ರಗೌಡ ಜಾವೂರು, ಚಿನ್ನನಗೌಡ, ತಿಮ್ಮನಗೌಡ, ಲಿಂಗಣ್ಣ ದೇವಿಕೇರಿ, ರಾಮಯ್ಯ ಗುತ್ತೇದಾರ, ನಾಗಭೂಷಣ, ಬಸ್ಸಮ್ಮ ಯಾದವ, ಜಯಶ್ರೀ ಸಕ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts