More

    ಪರಿಹಾರದ ಹಣ ಸಾಲಕ್ಕೆ ಜಮಾ ಮಾಡದಿರಿ

    ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

    201920ನೇ ಸಾಲಿನಲ್ಲಿ ಬಿಡುಗಡೆಯಾದ ರೈತರ ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರದ ಹಣವನ್ನು ಸಾಲದ ಕಂತುಗಳಿಗೆ ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕದ ವತಿಯಿಂದ ನಗರದ ಮಿನಿ ವಿಧಾನಸೌಧ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

    ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಕರೊನಾ ಲಾಕ್​ಡೌನ್ ಹಾಗೂ ಅತಿವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಇದರ ನಡುವೆಯೂ ಬೆಳೆ ನಷ್ಟವಾದರೆ ಅನುಕೂಲವಾಗಲಿ ಎಂದು ಬೆಳೆ ವಿಮೆ ಕಟ್ಟಿದ್ದಾರೆ. ಆದರೆ, ಬೆಳೆ ವಿಮೆ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಆಗುತ್ತಿದ್ದಂತೆ ಬ್ಯಾಂಕ್​ನವರು ಸಾಲದ ಕಂತುಗಳಿಗೆ ತೆಗೆದುಕೊಳ್ಳುತ್ತಿದ್ದಾರೆ.

    ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ. ಜಿಲ್ಲಾ ಲೀಡ್ ಬ್ಯಾಂಕ್​ನವರು ಹಾಗೂ ತಹಸೀಲ್ದಾರರು ಬ್ಯಾಂಕ್​ಗಳಿಗೆ ಪರಿಹಾರದ ಹಣವನ್ನು ಸಾಲದ ಕಂತುಗಳಿಗೆ ತೆಗೆದುಕೊಳ್ಳದಂತೆ ಸೂಚನೆ ನೀಡಬೇಕು ಎಂದರು.

    ತಹಸೀಲ್ದಾರ್ ಬಸನಗೌಡ ಕೋಟೂರ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

    ಪ್ರಮುಖರಾದ ಭೀಮಣ್ಣ ಬೆನ್ನಣ್ಣನವರ, ಕೊಟ್ರೇಶ ಹೊಗ್ಗಪ್ಪನವರ, ಹೊಳೆಬಸಪ್ಪ ಗುತ್ತೇರ, ನಿಂಗಪ್ಪ ಕುಂಚೂರು, ಬ್ರಹ್ಮಾನಂದ ಉಜ್ಜೇರ, ರವಿಕುಮಾರ ಆನ್ವೇರಿ, ಲಕ್ಷ್ಮಣ ಗುಡಿಹಿಂದ್ಲರ, ಶಿವಶಂಕರಗೌಡ ಪಾಟೀಲ, ಮಂಜಪ್ಪ ತುಮ್ಮಿನಕಟ್ಟಿ, ಮಲ್ಲೇಶ ಮಾಳಗಿ, ಸುರೇಶ ಹೊನ್ನಪ್ಪಳವರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts