More

    ಪೈಪ್‌ಲೈನ್ ಕಾಮಗಾರಿ ಶೀಘ್ರ ಆರಂಭಿಸಿ

    ಆಲಮಟ್ಟಿ: ಬಸವನಬಾಗೇವಾಡಿ ತಾಲೂಕಿನ ಅಗಸಬಾಳ ಹಾಗೂ ಸಂಕನಾಳ ಕೆರೆಗೆ ಹೋಗುವ ಪೈಪ್‌ಲೈನ್ ಕಾಮಗಾರಿ ಆರಂಭಿಸಿ ಶೀಘ್ರದಲ್ಲಿ ಮುಕ್ತಾಯಗೊಳಿಸಿಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಎಚ್. ಸುರೇಶ ಅವರಿಗೆ ಮನವಿ ಸಲ್ಲಿಸಲಾಯಿತು.

    ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಭರಟಗಿ ಮಾತನಾಡಿ, ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಕುದರಿಸಾಲವಾಡಗಿ ಶಾಖಾ ಕಾಲುವೆಯಿಂದ ಅಗಸಬಾಳ ಹಾಗೂ ಸಂಕನಾಳ ಕೆರೆಗೆ ನೀರು ಭರ್ತಿಗಾಗಿ ಪೈಪ್‌ಲೈನ್ ಮಾಡಲು ಈಗಾಗಲೆ ಟೆಂಡರ್ ಕರೆದು ಒಂದು ವರ್ಷ ಗತಿಸಿದೆ. ಆದರೂ ಕಾಮಗಾರಿ ಆರಂಭಿಸಿಲ್ಲ ಎಂದರು.

    ಕೆರೆಯವರೆಗೆ ಪೈಪ್‌ಲೈನ್ ಹೋಗಬೇಕಾದರೆ ಸುಮಾರು 1.400 ಮೀಟರ್‌ನಷ್ಟಿದೆ. ಈಗಾಗಲೆ ಕೇವಲ 44 ಪೈಪ್‌ಗಳನ್ನು ಮಾತ್ರ ತಂದಿಟ್ಟಿದ್ದಾರೆ. ಇನ್ನು ಸುಮಾರು 68 ಪೈಪ್‌ಗಳ ಅಗತ್ಯವಿದೆ. ಇನ್ನೂಳಿದ ಪೈಪ್‌ಗಳನ್ನು ಶೀಘ್ರದಲ್ಲಿ ತರಿಸಿ ಕಾಮಗಾರಿ ಆರಂಭಿಸಬೇಕು. ಗುತ್ತಿಗೆದಾರರು ವಿಳಂಬ ಮಾಡಿದ ಕಾರಣ ಈ ಮೊದಲು ಕಾಲುವೆಗೆ ಹರಿಸಿದ ಸಂದರ್ಭದಲ್ಲಿ ನೀರಿನಿಂದ ವಂಚಿತವಾಗುವಂತಾಗಿದೆ ಎಂದರು.

    ಜಾನುವಾರಗಳಿಗೆ ಕೂಡ ಕುಡಿಯುವ ನೀರಿನ ತೊಂದರೆಯಾಗಿದೆ. ಆದ್ದರಿಂದ ತಕ್ಷಣ ಕಾಮಗಾರಿ ಆರಂಭಿಸಿ ಮುಕ್ತಾಯಗೊಳಿಸಿ ಕೆರೆಗೆ ನೀರು ಭರ್ತಿಗೆ ಅನಕೂಲು ಮಾಡಿಕೊಡಬೇಕು. ಇಲ್ಲದಿದ್ದರೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅರವಿಂದ ಕುಲಕರ್ಣಿ ಎಚ್ಚರಿಸಿದರು.

    ಪ್ರತಿಭಟನೆಯಲ್ಲಿ ಎಸ್.ಎಂ. ಅಂಗಡಗೇರಿ, ಅರುಣಕುಮಾರ ಪಾಟೀಲ, ಆರ್.ಎಸ್. ಅಂಗಡಗೇರಿ, ಜಿ.ಎಂ. ಬಡಿಗೇರ, ಎಸ್.ಆರ್. ಹಿರೇಮಠ, ಆರ್.ಎ. ಹುನಗುಂದ, ಬಿ.ಎಸ್. ಸಣತಂಗಿ, ಪಾವಡೇಪ್ಪ ಹಳೆಗೌಡರ, ಸಾಯಬಣ್ಣ ಸಣತಂಗಿ, ನಾಗಪ್ಪ ಹುನಗುಂದ, ಸಿದ್ದಪ್ಪ, ಈರಣ್ಣ, ಗುರಲಿಂಗಪ್ಪಗೌಡ ಪಾಟೀಲ, ಶ್ರೀಶೈಲ ಅಂಗಡಗೇರಿ, ಗುಳಪ್ಪ ಬನಾಸಿ, ಸಂಜು ಬಣಗಾರ, ಶಿವಪ್ಪ ವಾಲೀಕಾರ, ಯಂಕಪ್ಪ ಮಳಗಿ, ಲಕ್ಷ್ಮಣ ಸಣತಂಗಿ, ಪೀರಪ್ಪ ಸಣತಂಗಿ, ನಾಗಪ್ಪ ಮುಳವಾಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts