More

    ನೆರವು ಸಹಾಯವಾಣಿ ಆರಂಭ

    ಗದಗ: ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ತೊಂದರೆ ಅನುಭವಿಸುತ್ತಿರುವ ಜನರಿಗೆ ಅನುಕೂಲವಾಗಲು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ಸಮಾಜಕಾರ್ಯ ವಿಭಾಗದ ಅಡಿ ‘ನೆರವು’ ಸಹಾಯವಾಣಿ ಕೇಂದ್ರವನ್ನು ಆರಂಭಿಸಿದೆ.

    ಆರೋಗ್ಯದ ಸಮಸ್ಯೆಯಷ್ಟೇ ಅಲ್ಲದೆ, ಹಲವಾರು ಜನರು ಮಾನಸಿಕ ಕ್ಷೋಭೆಗೆ ಒಳಗಾಗುವ, ನಿತ್ಯದ ಅವಶ್ಯಕತೆಗಳಿಗೂ ಪರದಾಡುವ ಸನ್ನಿವೇಶ ಎದುರಾಗಬಹುದು. ಈ ಸನ್ನಿವೇಶದಿಂದ ಹೊರಬರಲು ಸಾಧ್ಯವಿರುವ ಸೌಲಭ್ಯಗಳನ್ನು ಒದಗಿಸುವುದು ‘ನೆರವು‘ ಕೇಂದ್ರದ ಉದ್ದೇಶವಾಗಿದೆ. ಈ ಕೇಂದ್ರದಿಂದ ಸಹಾಯ ಪಡೆಯಲು ಮೊ. 77951 00729, 79752 02206ಗೆ ಸಂರ್ಪಸಬಹುದು.

    ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳು: ಕೋವಿಡ್-19, ಕೋವಿಡ್ ಲಸಿಕೆ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಸಂಸ್ಥೆಗಳು, ಕೋವಿಡ್ ಲಸಿಕೆ ಪಡೆಯಲು ನೋಂದಣಿ ಹೇಗೆ? ಆಪ್ತಸಮಾಲೋಚನೆ ಸೌಲಭ್ಯ ಹಾಗೂ ಅವಶ್ಯಕತೆ ಇರುವವರಿಗೆ ಆಹಾರ ಪೂರೈಕೆ (ನಿಗದಿತ ಪರಿಮಿತಿಯೊಳಗೆ) ಮಾಡಲಾಗುತ್ತಿದೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಇಚ್ಛಿಸುವವರೂ ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ವಿಶ್ವವಿದ್ಯಾಲಯದ ಕುಲಸಚಿವ ಬಿ.ಎಲ್. ಲಕ್ಕಣ್ಣವರ ತಿಳಿಸಿದ್ದಾರೆ.


    ಯೋಗ ತರಬೇತಿ ಶಿಬಿರ: ವಿಶ್ವವಿದ್ಯಾಲಯದ ಯೋಗಕ್ಷೇಮ ಯೋಗ ಕೇಂದ್ರದ ವತಿಯಿಂದ ಮೇ 5ರಿಂದ ಯೋಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯೋಗಾಸನ, ಪ್ರಾಣಾಯಾಮ, ಧ್ಯಾನ ಅವಶ್ಯವಾಗಿದೆ. ಮೇ 5ರಿಂದ 7 ದಿನದ ಯೋಗ ತರಬೇತಿ ಶಿಬಿರವನ್ನು ಬೆಳಗ್ಗೆ 6 ರಿಂದ 7ರ ವರೆಗೆ (ಮಹಿಳೆಯರಿಗಾಗಿ), ಸಂಜೆ 5 ರಿಂದ 6ರವರೆಗೆ (ಪುರುಷರಿಗಾಗಿ) ವಿಶ್ವವಿದ್ಯಾಲಯದ ಸೆಮಿನಾರ್ ಹಾಲ್​ನಲ್ಲಿ ಏರ್ಪಡಿಸಲಾಗಿದೆ. ಆಸಕ್ತರು ಮೇ 3ರೊಳಗೆ ಮೊ. 99454 53105ಗೆ ಕರೆ ಮಾಡಿ ಹೆಸರು ನೋಂದಾಯಿಸಬೇಕು. ಮೊದಲು ಹೆಸರು ನೋಂದಾಯಿಸಿದ 20 ಶಿಬಿರಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts