More

    ರಿಪ್ಪನ್‌ಪೇಟೆಯಲ್ಲಿ ಅಡಕೆ ಖರೀದಿ ಪ್ರಾರಂಭಿಸಿ: ಆರ್‌ಎಂಎಂ

    ರಿಪ್ಪನ್‌ಪೇಟೆ: ವಾಣಿಜ್ಯ ಬೆಳೆಯಾದ ಅಡಕೆಯನ್ನು ಅಡಮಾನ ಇರಿಸಿ ಸಾಲ ಪಡೆಯುವ ಯೋಜನೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರೂಪಿಸಿರುವುದು ಶ್ಲಾಘನೀಯ. ಜತೆಗೆ ಅಡಕೆ ಖರೀದಿಸುವ ವ್ಯವಸ್ಥೆಯನ್ನು ಪ್ರಾರಂಭಿಸಬೇಕು. ಇದರಿಂದ ಇತರ ಕಡೆಗಳಲ್ಲಿ ರೈತರು ಅಲೆಯುವುದು ತಪ್ಪಿ ಒಂದೇ ಸೂರಿನಡಿ ತಮ್ಮ ವ್ಯವಹಾರವನ್ನು ಪೂರೈಸುವಂತಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಸಲಹೆ ನೀಡಿದರು.

    ರಿಪ್ಪನ್‌ಪೇಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ ಸೋಮವಾರ ಆಯೋಜಿಸಲಾಗಿದ್ದ ಅಡಕೆ ಅಡಮಾನ ಸಾಲದ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿ, ಒಂದು ಸಹಕಾರ ಸಂಘ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ರೈತರಿಗೆ ವಿವಿಧ ಯೋಜನೆಗಳಿಂದ ಸವಲತ್ತುಗಳು ದೊರೆಯುವಂತಾಗಬೇಕು ಎಂದರು.
    ರಿಪ್ಪನ್‌ಪೇಟೆ ಸಹಕಾರ ಸಂಘವು ಇಲ್ಲಿನ ರೈತರು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಒಡನಾಟದಿಂದ ಆರ್ಥಿಕ ಲಾಭವನ್ನು ಹೊಂದಿದೆ. ರೈತರ ಬೆಳೆಗಳಿಗೆ ಕಾಲಾನುಕ್ರಮವಾಗಿ ಸಾಲ, ಸವಲತ್ತುಗಳನ್ನು ನೀಡುತ್ತಿದೆ. ಇತ್ತೀಚೆಗೆ ಅಡಕೆ ಬೆಳೆಯು ಅಧಿಕಗೊಳ್ಳುತ್ತಿದ್ದು ಒಂದು ವ್ಯಾಪಾರ ಕೇಂದ್ರದ ಅಗತ್ಯವೂ ಇತ್ತು. ಇದನ್ನು ಗಮನಿಸಿದ ಆಡಳಿತ ಮಂಡಳಿ ಅಡಮಾನ ಸಾಲದ ಯೋಜನೆಯನ್ನು ರೂಪಿಸಿದೆ. ಅಡಕೆ ವಹಿವಾಟಿಗಾಗಿ ಲೈಸೆನ್ಸ್ ಪಡೆದುಕೊಂಡು ವ್ಯಾಪಾರ ಆರಂಭಿಸಿದರೆ, ಖರೀದಿದಾರರು ರಿಪ್ಪನ್‌ಪೇಟೆಗೆ ಬಂದು ದರ ನಿಗದಿ ಪಡಿಸುವ ವ್ಯವಸ್ಥೆಯನ್ನು ಮಾಡಿಸುತ್ತೇನೆ ಎಂದು ತಿಳಿಸಿದರು.
    ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್, ನಿರ್ದೇಶಕರಾದ ಬೋರಪ್ಪ, ವಿಶ್ವನಾಥಾಚಾರಿ, ಸೋಮಶೇಖರಪ್ಪ, ಗಣೇಶ್ ರಾವ್, ಭೈರಪ್ಪ, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಶ್ರೀನಿವಾಸ್, ಮುಖಂಡರಾದ ಎಂ.ಬಿ.ಲಕ್ಷ್ಮಣಗೌಡ, ಬಂಡಿ ರಾಮಚಂದ್ರ, ಲೋಕಪ್ಪ ಗೌಡ, ಎ.ಟಿ.ನಾಗರತ್ನಮ್ಮ, ಸಿಇಒ ಸರಸ್ವತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts