More

    ಎಂಪಿ ಎಲೆಕ್ಷನ್‌ಗಾಗಿ ಆರ್‌ಎಂಎಂ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ: ಕಿಮ್ಮನೆ ರತ್ನಾಕರ್ ಕಿಡಿ

    ತೀರ್ಥಹಳ್ಳಿ: ಜಾರಿ ನಿರ್ದೆಶನಾಲಯವನ್ನು ಬಳಸಿ ವಿರೋಧ ಪಕ್ಷದವರನ್ನು ನಿಯಂತ್ರಿಸುವ ಕಾರ್ಯಕ್ರಮವನ್ನು ದೇಶದ ಉದ್ದಗಲಕ್ಕೂ ಹಮ್ಮಿಕೊಂಡಿರುವ ಬಿಜೆಪಿ ಮುಂಬರುವ ಲೋಕಸಭೆ ಚುನಾವಣೆ ಸಿದ್ಧತೆಗಾಗಿ ಈ ಪ್ರವೃತ್ತಿಯನ್ನು ಮುಂದುವರಿಸಿದೆ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿಕಾರಿದ್ದಾರೆ.

    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮನೆಗಳ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿ ಸುದ್ದಿಗಾರರ ಜತೆ ಮಾತನಾಡಿ, ಗೌಡರ ಮನೆ ಮೇಲೆ ನಡೆದಿರುವ ದಾಳಿ ಅದರ ಮುಂದುವರಿದ ಭಾಗ. ಇದರಿಂದ ಲಾಭ ಗಳಿಸಬಹುದು ಎಂಬುದು ಬಿಜೆಪಿಯವರ ಭ್ರಮೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ವಿರೋಧಿಗಳನ್ನು ಹತ್ತಿಕ್ಕಲು ಇಡಿ ದಾಳಿಯ ತೀವ್ರತೆ ಇನ್ನೂ ಹೆಚ್ಚುವ ಸಾಧ್ಯತೆ ಖಂಡಿತ ಇದೆ ಎಂದರು.
    ಬಿಜೆಪಿಯವರಲ್ಲಿ ಕೋಮು ಭಾವನೆ ಕೆರಳಿಸುವ ಮತ್ತು ಇಡಿ ಇಲಾಖೆಯನ್ನು ಬಳಸಿ ಕಿರುಕುಳ ಕೊಡುವ ವಿಚಾರವನ್ನು ಬಿಟ್ಟು ಜನಪರ ಕಾರ್ಯಕ್ರಮದ ಮೂಲಕ ಚುನಾವಣೆ ಗೆಲ್ಲುವ ಯಾವುದೇ ಕಾರ್ಯಕ್ರಮಗಳೂ ಆ ಪಕ್ಷದಲ್ಲಿ ಇಲ್ಲ. ನಂದಿತಾ ಪ್ರಕರಣ, ಶಿವಮೊಗ್ಗದಲ್ಲಿ ನಡೆದಿರುವ ಕೆಲವು ಪ್ರಕರಣಗಳು ಇದನ್ನು ಪುಷ್ಠೀಕರಿಸುತ್ತವೆ ಎಂದು ಹೇಳಿದರು.
    ಬಿಜೆಪಿ-ಜೆಡಿಎಸ್ ಚುನಾವಣಾ ಹೊಂದಾಣಿಕೆ ಬಗೆಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಕಿಮ್ಮನೆ ರತ್ನಾಕರ್, ಇದರಿಂದ ಜೆಡಿಎಸ್ ಪೂರ್ಣ ನಷ್ಟ ಅನುಭವಿಸಲಿದೆ. ಜೆಡಿಎಸ್ ಪ್ರಬಲವಾಗಿದ್ದ ಕ್ಷೇತ್ರದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲ. ಈ ಮೊದಲು ಕೂಡ ಆ ಪಕ್ಷ ಬಿಜೆಪಿ ಜತೆ ಹೊಂದಾಣಿಕೆಯಲ್ಲಿತ್ತು. ಕಾಂಗ್ರೆಸ್ಸಿಗೆ ಈ ಬಗ್ಗೆ ಭಯ ಇಲ್ಲ. ಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಟಾಂಗ್ ಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts