More

    50 ಬೆಡ್​ಗಳ ಕೇರ್ ಸೆಂಟರ್ ಆರಂಭಿಸಿ

    ಅಳ್ನಾವರ: ಪಟ್ಟಣದಲ್ಲಿ 50 ಬೆಡ್​ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು. ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಪ್ರತಿನಿಧಿಗಳ ಹಾಗೂ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು.

    ಕಲಘಟಗಿ ವಿಧಾನಸಭಾ ಕ್ಷೇತ್ರದ ಕರೊನಾ ಸೋಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ ಮೀಸಲಿರಿಸಬೇಕು. ಸ್ಥಳೀಯವಾಗಿ ಸೂಕ್ತ ಸ್ಥಳವಾಗಿರುವ ಕಸ್ತೂರಬಾ ಗಾಂಧಿ ವಸತಿ ವಿದ್ಯಾಲಯದಲ್ಲಿ ವೆಂಟಿಲೇಟರ್ ಹಾಗೂ ಆಕ್ಸಿಜನ್ ಸಹಿತ ಕೋವಿಡ್ ಕೇರ್ ಸೆಂಟರ್ ಆರಂಭಿಸಿ, ಆಂಬುಲೆನ್ಸ್ ಕಾಯ್ದಿರಿಸಬೇಕು ಎಂದು ಸೂಚಿಸಿದರು.

    ಜನರಲ್ಲಿ ಕೋವಿಡ್ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕೋಗಿಲಗೇರಿ ಗ್ರಾಮಕ್ಕೆ ವಿಶೇಷ ತಂಡ ರಚಿಸಿ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ತಾಲೂಕಿನಾದ್ಯಂತ ಕರೊನಾ ರೋಗ ನಿಯಂತ್ರಣದ ಜಾಗೃತಿ ಮೂಡಿಸಲು ಅಧಿಕಾರಿಗಳೊಂದಿಗೆ, ಜನಪ್ರತಿನಿಧಿಗಳು ಜವಾಬ್ದಾರಿ ವಹಿಸಬೇಕು. ಸ್ಥಳೀಯ ಆಸ್ಪತ್ರೆಯಲ್ಲಿನ ಕೊರತೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವಂತೆ ವೈದ್ಯರಿಗೆ ಸೂಚಿಸಿದರು. ತುರ್ತಾಗಿ ಮೆಡಿಸಿನ್ ಕಿಟ್ ಹಾಗೂ ಲಸಿಕೆ ನೀಡಲು ಗಮನ ಹರಿಸಬೇಕು ಎಂದು ಹೇಳಿದರು.

    ಜಿಲ್ಲಾ ಆರೋಗ್ಯಾಧಿಕಾರಿ ಯಶವಂತ ಮದಿನಕರ ಮಾತನಾಡಿ, ಪ್ರಸ್ತುತ ಕರೊನಾ ರೋಗಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೂ, 3ನೇ ಅಲೆ ಹರಡದಂತೆ ಸಿದ್ಧತೆ ಕೈಗೊಳ್ಳಲು ಸ್ಥಳೀಯ ವೈದ್ಯರು ಸಹಭಾಗಿತ್ವ ವಹಿಸಬೇಕು ಎಂದರು.

    ಸ್ಥಳೀಯ ವೈದ್ಯ ಡಾ. ಬಿ.ಬಿ. ಮೂಡಬಾಗಿಲ ಮಾತನಾಡಿದರು. ಪಪಂ ಅಧ್ಯಕ್ಷೆ ಮಂಗಲಾ ರವಳಪ್ಪನವರ, ಉಪಾಧ್ಯಕ್ಷ ನದೀಮ್ ಕಂಟ್ರಾಕ್ಟರ, ತಹಸೀಲ್ದಾರ್ ಅಮರೇಶ ಪಮ್ಮಾರ, ಪಪಂ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ಪಿಎಸ್​ಐ ಶಿವಪ್ಪ ಕಣವಿ, ಅಮುಲ ಗುಂಜಿಕರ, ಮಧು ಬಡಸ್ಕರ, ತಮೀಮ್ ತೇರಗಾವ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts