More

    ಗೊಂದಲದಲ್ಲಿ ಟಿ20 ವಿಶ್ವಕಪ್-ಐಪಿಎಲ್ ಭವಿಷ್ಯ, ಸಂಕಷ್ಟದಲ್ಲಿ ಸ್ಟಾರ್ ಸ್ಪೋರ್ಟ್ಸ್

    ನವದೆಹಲಿ: ಈ ವರ್ಷದ 2 ಪ್ರಮುಖ ಕ್ರಿಕೆಟ್ ಟೂರ್ನಿಗಳಾದ ಟಿ20 ವಿಶ್ವಕಪ್ ಮತ್ತು 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಭವಿಷ್ಯದ ಬಗ್ಗೆ ಇನ್ನೂ ಗೊಂದಲಗಳು ಮುಂದುವರಿದಿವೆ. ಇದರಿಂದಾಗಿ, ಇವೆರಡೂ ಟೂರ್ನಿಗಳ ನೇರಪ್ರಸಾರದ ಹಕ್ಕು ಹೊಂದಿರುವ ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ಇಕ್ಕಟ್ಟಿನಲ್ಲಿ ಸಿಲುಕಿದೆ. ಹೀಗಾಗಿ ಇವೆರಡು ಟೂರ್ನಿಗಳ ಬಗ್ಗೆ ಸಾಧ್ಯವಾದಷ್ಟು ಬೇಗನೆ ಸ್ಪಷ್ಟವಾದ ನಿರ್ಧಾರ ಕೈಗೊಳ್ಳುವಂತೆ ಐಸಿಸಿ ಮತ್ತು ಬಿಸಿಸಿಐಗೆ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಪತ್ರ ಬರೆದಿದೆ.

    ಇದನ್ನೂ ಓದಿ: ಹರ್ಭಜನ್‌ಗೆ ನಿಷೇಧ ಹೇರದಂತೆ ಶ್ರೀಶಾಂತ್​ ಬೇಡಿಕೊಂಡಿದ್ದೇಕೆ?

    ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಮತ್ತು ಏಪ್ರಿಲ್-ಮೇನಿಂದ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿರುವ ಐಪಿಎಲ್ ಟೂರ್ನಿಯ ಪ್ರಸಾರ ಹಕ್ಕು ಸ್ಟಾರ್ ಸ್ಪೋರ್ಟ್ಸ್ ಬಳಿ ಇದೆ. ಹೀಗಾಗಿ ಇವೆರಡು ಟೂರ್ನಿಗಳ ಭವಿಷ್ಯವನ್ನು ಬೇಗನೆ ನಿರ್ಧರಿಸಿದರೆ, ಮುಂದಿನ ಟಿವಿ ವೇಳಾಪಟ್ಟಿಯನ್ನು ರೂಪಿಸಿಕೊಳ್ಳಲು ಮತ್ತು ಟೂರ್ನಿಗೆ ಜಾಹೀರಾತುದಾರರನ್ನು ಸೆಳೆಯಲು ನೆರವಾಗುತ್ತದೆ ಎಂದು ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಪ್ರತ್ಯೇಕ ಪತ್ರಗಳಲ್ಲಿ ಐಸಿಸಿ ಮತ್ತು ಬಿಸಿಸಿಐಗೆ ತಿಳಿಸಿದೆ.

    ಇದನ್ನೂ ಓದಿ: ಕಿಂಗ್ಸ್ ಇಲೆವೆನ್ ಪಂಜಾಬ್ ಸುಂದರಿಯರಿಗೆ ಅಭಿಮಾನಿಗಳು ಫಿದಾ!

    ಟೂರ್ನಿಗಳ ಭವಿಷ್ಯದ ಬಗ್ಗೆ ಈಗಾಗಲೆ ಸಾಕಷ್ಟು ಗೊಂದಲಗಳು ಹರಡಿವೆ. ನಿರ್ಧಾರ ಕೈಗೊಳ್ಳುವಲ್ಲಿ ಸಾಕಷ್ಟು ವಿಳಂಬ ಕೂಡ ಆಗಿದೆ. ಇದು ತಮ್ಮ ಸಿದ್ಧತೆಗೆ ಹಿನ್ನಡೆಯಾಗಿ ಪರಿಣಮಿಸಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ತಿಳಿಸಿದೆ. ಇವೆರಡೂ ಸಣ್ಣ ಟೂರ್ನಿಗಳಲ್ಲ. ಸಾಕಷ್ಟು ಹಣಕಾಸು ಮೌಲ್ಯವನ್ನು ಹೊಂದಿದೆ. ಐಪಿಎಲ್‌ನಿಂದ ಸ್ಟಾರ್ ಸ್ಪೋರ್ಟ್ಸ್ 3 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಜಾಹೀರಾತುಗಳನ್ನು ಎದುರು ನೋಡುತ್ತಿದೆ. ಐಸಿಸಿ ಟೂರ್ನಿಗೂ ವಿಶ್ವದೆಲ್ಲೆಡೆ ಮಾರುಕಟ್ಟೆ ಇದ್ದು, ಅದಕ್ಕೂ ಸೂಕ್ತ ಪ್ರಚಾರ ನೀಡಿದರಷ್ಟೇ ಜಾಹೀರಾತುದಾರರನ್ನು ಸೆಳೆಯಲು ಸಾಧ್ಯ ಎಂದು ಸ್ಟಾರ್ ಸ್ಪೋರ್ಟ್ಸ್ ತಿಳಿಸಿದೆ.

    ಇದನ್ನೂ ಓದಿ: ರಾಸ್ ಟೇಲರ್‌ಗೆ ಬೆಂಬಿಡದೆ ಇನ್ನೂ ಕಾಡುತ್ತಿದೆ ವಿಶ್ವಕಪ್ ಫೈನಲ್ ಸೋಲು

    ಈ ನಡುವೆ 2020ರ ಐಪಿಎಲ್ ಟೂರ್ನಿಯ ಪ್ರಸಾರ ಹಕ್ಕಿನ ಮೌಲ್ಯವನ್ನು ಕಡಿಮೆ ಮಾಡುವಂತೆ ಬಿಸಿಸಿಐಗೆ ಸ್ಟಾರ್ ಸ್ಪೋರ್ಟ್ಸ್ ಮನವಿ ಸಲ್ಲಿಸಿದೆ ಎನ್ನಲಾಗಿದೆ. ಆದರೆ ಬಿಸಿಸಿಐ ಇದಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಸ್ಟಾರ್ ಸ್ಪೋರ್ಟ್ಸ್ 2018ರಿಂದ 2022ರವರೆಗೆ 5 ವರ್ಷಗಳಿಗೆ 16,347 ಕೋಟಿ ರೂ.ಗೆ ಐಪಿಎಲ್ ಪ್ರಸಾರ ಹಕ್ಕು ಪಡೆದುಕೊಂಡಿದೆ. ಜತೆಗೆ 2018ರಿಂದ 2023ರವರೆಗೆ ಒಟ್ಟಾರೆ 6,138 ಕೋಟಿ ರೂ.ಗಳಿಗೆ ಭಾರತ ತಂಡದ ತವರಿನ ಪಂದ್ಯಗಳ ನೇರಪ್ರಸಾರ ಹಕ್ಕು ಪಡೆದಿದೆ. ಐಸಿಸಿ ಟೂರ್ನಿಗಳಿಗೂ 2015ರಿಂದ 2023ರವರೆಗೆ 1.9 ಶತಕೋಟಿ ಡಾಲರ್‌ಗೆ (14,375 ಕೋಟಿ ರೂ.) ಪ್ರಸಾರ ಹಕ್ಕು ಹೊಂದಿದೆ.

    ಬಾಬರ್ ಅಜಮ್‌ಗೆ ಸಾನಿಯಾ ಮಿರ್ಜಾ ಕೊಲೆ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts