ಚಿಕ್ಕೋಡಿ: ನಿಂತಿದ್ದ ಲಾರಿಯ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರೂ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಉಮರಾಣಿ ಗ್ರಾಮದ ಬಳಿ ಶನಿವಾರ ರಾತ್ರಿ ಸಂಭವಿಸಿದೆ.
ಕಬ್ಬೂರ ಪಟ್ಟಣದ ಕಲ್ಲಪ್ಪ ನಿಂಗಪ್ಪ ಘೇವಾರಿ (30), ಮಹೇಶ ಉದ್ದಪ್ಪ ಮಂಟೂರ (27) ಮೃತಪಟ್ಟ ದುರ್ದೈವಿಗಳು. ಸಕ್ಕರೆ ಚೀಲ ತುಂಬಿಕೊಂಡಿದ್ದ ಲಾರಿ ಚಿಕ್ಕೋಡಿ ಕಡೆಯಿಂದ ಆಂಧ್ರಪ್ರದೇಶಕ್ಕೆ ಹೊರಟಿತ್ತು ಎನ್ನಲಾಗಿದೆ. ಲಾರಿ ಚಾಲಕ ಹೋಟೆಲ್ ಮುಂದೆ ಲಾರಿ ನಿಲ್ಲಿಸಿ ಊಟ ಮಾಡಲು ತೆರಲಿದ್ದಾಗ ಬೈಕ್ ಸವಾರರು ಚಿಕ್ಕೋಡಿ ಕಡೆಯಿಂದ ಬಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಸಿಪಿಐ ಆರ್.ಆರ್. ಪಾಟೀಲ, ಪಿಎಸ್‌ಐಗಳಾದ ರಾಕೇಶ ಬಗಲಿ, ಪಿ.ಎಸ್. ಕೋಚರಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.