More

    ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಕೇಂದ್ರಕ್ಕೆ ಪತ್ರ

    ನವದೆಹಲಿ: ಕಾವೇರಿ ಕಣಿವೆ ಪ್ರದೇಶಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆ ಬಿದ್ದಿರುವುದರಿಂದ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ಕಾವೇರಿ ಕದನ ಶುರುವಾಗಿದೆ. ಕರ್ನಾಟಕ ನಿಗದಿತ ಪ್ರಮಾಣದಲ್ಲಿ ಮೆಟ್ಟೂರು ಜಲಾಶಯಕ್ಕೆ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ದೂರು ನೀಡಿರುವ ತಮಿಳುನಾಡು ಸರ್ಕಾರ, ಕರ್ನಾಟಕ ನೀರು ಬಿಟ್ಟರಷ್ಟೇ ರಾಜ್ಯದ ಕುರುವೈ ಬೆಳೆ ಉಳಿಯಲಿದೆ. ಹೀಗಾಗಿ, ತಕ್ಷಣವೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ತಮಿಳುನಾಡಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದೆ.

    ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಅಲ್ಪಾವಧಿಯ ಕುರುವೈ ಬೆಳೆ ತಮಿಳುನಾಡಿನ ಕಾವೇರಿ ಕಣಿವೆ ಪ್ರದೇಶದ ರೈತರಿಗೆ ಅತ್ಯಂತ ಪ್ರಮುಖ ಬೆಳೆಯಾಗಿದೆ. ಅಂತಾರಾಜ್ಯ ಗಡಿಭಾಗ ಬಿಳಿಗುಂಡ್ಲುವಿನಲ್ಲಿ ಜೂನ್ 1ರಿಂದ ಜುಲೈ 17ರವರೆಗೆ 3.78 ಟಿಎಂಸಿ ನೀರನ್ನು ಮಾತ್ರ ತಮಿಳುನಾಡಿಗೆ ಖಚಿತಪಡಿಸಲಾಗಿದೆ. ಈ ಅವಧಿಯಲ್ಲಿ 26.32 ಟಿಎಂಸಿ ನೀರು ಬಿಡುಗಡೆಯಾಗಬೇಕು ಎಂಬ ಐತೀರ್ಪನ್ನು ಉಲ್ಲಂಘಿಸಲಾಗಿದೆ ಎಂದು ತಿಳಿದು ಬಂದಿದೆ ಎಂದು ಆರೋಪಿಸಿದ್ದಾರೆ.

    cauvery

    22.54 ಟಿಎಂಸಿ ಬಾಕಿ ನೀರನ್ನು ಬಿಡಲಾಗಿಲ್ಲ. ಸಮಯಕ್ಕೆ ಸರಿಯಾಗಿ ಕುರುವೈ ಬೆಳೆಗೆ ನೀರು ಒದಗಿಸಲು ಜೂನ್ 12ರಂದು ಮೆಟ್ಟೂರು ಜಲಾಶಯ ತೆರೆಯಲಾಯಿತು. ನೈಋತ್ಯ ಮುಂಗಾರು ಆರಂಭ ತಡವಾಗಿದ್ದರೂ ಜುಲೈನಲ್ಲಿ ವೇಗ ಪಡೆದುಕೊಂಡಿದೆ. ಆದರೆ, ನಿಗದಿತ ಕಬಿನಿ ಮತ್ತು ಕೆಆರ್​ಎಸ್ ಜಲಾಶಯಗಳಿಂದ ತಮಿಳುನಾಡಿಗೆ ಕರ್ನಾಟಕ ನೀರು ಬಿಟ್ಟಿಲ್ಲ. ಇದರ ಪರಿಣಾಮವಾಗಿ ಸೇಲಂ ಜಿಲ್ಲೆಯ ಮೆಟ್ಟೂರು ಜಲಾಶಯದಲ್ಲಿ ನೀರು ಸಂಗ್ರಹಣೆ ಕ್ಷೀಣಿಸುತ್ತಿದೆ. ಪ್ರಸ್ತುತ ಸಂಗ್ರಹಣೆಯು 20 ದಿನಗಳ ನೀರಾವರಿಗಷ್ಟೇ ಸಾಕು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನೀರು ಬಿಡುಗಡೆ ಸಂಬಂಧ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಸೂಚನೆ ನೀಡಲು ನೀವು ನಿರ್ದೇಶಿಸಬೇಕು ಎಂದು ಸಿಎಂ ಸ್ಟಾಲಿನ್ ಕೇಂದ್ರ ಸಚಿವರಲ್ಲಿ ಕೋರಿದ್ದಾರೆ. ಜುಲೈ 19ರಂದು ಸಿಎಂ ಬರೆದ ಪತ್ರವನ್ನು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್ ಗುರುವಾರದಂದು ದೆಹಲಿಯಲ್ಲಿ ಕೇಂದ್ರ ಸಚಿವರಿಗೆ ಹಸ್ತಾಂತರಿಸಿದ್ದಾರೆ.

    ಸ್ಟಾಲಿನ್ ಪತ್ರದಲ್ಲೇನಿದೆ?

    • ಕರ್ನಾಟಕ ನಿಗದಿತ ಪ್ರಮಾಣದಲ್ಲಿ ಮೆಟ್ಟೂರು ಜಲಾಶಯಕ್ಕೆ ಬಿಡುಗಡೆ ಮಾಡಿಲ್ಲ.
    • ಸೇಲಂ ಜಿಲ್ಲೆಯ ಮೆಟ್ಟೂರು ಜಲಾಶಯದಲ್ಲಿ ನೀರು ಸಂಗ್ರಹಣೆ ಕ್ಷೀಣ.
    • ಐತೀರ್ಪ ಉಲ್ಲಂಘನೆ ಮಾಡಿರುವ ಕರ್ನಾಟಕ ಸರ್ಕಾರ.
    • ಅಲ್ಪಾವಧಿಯ ಕುರುವೈ ಬೆಳೆ ರಕ್ಷಣೆಗೆ ತಕ್ಷಣ ಕಾವೇರಿ ನೀರು ಹರಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts