More

    ಸಿಬ್ಬಂದಿಗೆ ವೈದ್ಯಕೀಯ ಸಾಮಗ್ರಿ ಒದಗಿಸಿ, ಟಿಎಚ್‌ಒಗೆ ಎಡಿಸಿ ಮಂಜುನಾಥ ಸೂಚನೆ

    ಕೂಡ್ಲಿಗಿ: ಕರೊನಾ ತಡೆಗೆ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ವೈದ್ಯಕೀಯ ಸಾಮಗ್ರಿ ಜಿಲ್ಲಾಡಳಿತ ಪೂರೈಸಲಿದ್ದು, ಸಕಾಲಕ್ಕೆ ತಲುಪಿಸಬೇಕು ಎಂದು ಟಿಎಚ್‌ಒ ಡಾ.ಷಣ್ಮುಖನಾಯ್ಕಗೆ ಎಡಿಸಿ ಮಂಜುನಾಥ ಸೂಚಿಸಿದರು.

    ಪಟ್ಟಣದ ತಾಲೂಕ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕರೊನಾ ಮುಂಜಾಗ್ರತಾ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಂಕಿತರಿಗೆ ಪ್ರತೇಕ ಕೊಠಡಿಯಲ್ಲಿ ತಪಾಸಣೆ ನಡೆಸಬೇಕು. ಆಸ್ಪತ್ರೆ ಸಿಬ್ಬಂದಿಗೆ ಮಾಸ್ಕ್ , ಸ್ಯಾನಿಟೈಸರ್ ಸೇರಿ ಅಗತ್ಯ ವಸ್ತುಗಳನ್ನು ಒದಗಿಸುವಂತೆ ತಿಳಿಸಿದರು.

    ವೈರಸ್ ತಡೆಗೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟನ ಕ್ರಮ ಕೈಗೊಳ್ಳಲಾಗಿದೆ. ಹೊರ ರಾಜ್ಯದಿಂದ ಜಿಲ್ಲೆಗೆ ಬರುವರನ್ನು ವಾಪಸ್ ಕಳುಹಿಸಬೇಕು. ಜತೆಗೆ ಗಡಿ ಭಾಗದ ಹಳ್ಳಿಗಳ ರಸ್ತೆಗಳನ್ನು ಬಂದ್ ಮಾಡಬೇಕು ಎಂದು ತಹಸೀಲ್ದಾರ್‌ಗೆ ಸೂಚಿಸಿದರು.

    ತಹಸೀಲ್ದಾರ್ ಎಸ್.ಮಹಬಲೇಶ್ವರ ಮಾತನಾಡಿ, ಕೃಷಿ ಉತ್ಪನ್ನ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳನ್ನು ಪೊಲೀಸರು ತಡೆಯುತ್ತಿದ್ದಾರೆ. ತಾಲೂಕು ಆಡಳಿತದಿಂದ ಪಾಸ್ ನೀಡುವಂತೆ ಅನೇಕರು ಒತ್ತಾಯಿಸುತ್ತಿದ್ದಾರೆ ಎಂದು ಸಭೆ ಗಮನಕ್ಕೆ ತಂದರು. ಎಡಿಸಿ ಮಂಜುನಾಥ ಪ್ರತಿಕ್ರಿಯಿಸಿ, ಅಗತ್ಯ ವಸ್ತುಗಳು ಹಾಗೂ ಕೃಷಿ ಉತ್ಪನ್ನ ಸಾಗಣೆಗೆ ಯಾವುದೇ ಜಿಲ್ಲೆ ಹಾಗೂ ರಾಜ್ಯಗಳಿಗೂ ಹೋಗಬಹುದು. ಆದರೆ, ಲಾರಿಗಳಲ್ಲಿ ಸಾರ್ವಜನಿಕರ ಪ್ರಯಾಣ ನಿಷಿದ್ಧ ಎಂದು ತಿಳಿಸಿದರು.

    ಡಿವೈಎಸ್ಪಿ ಎಂ.ಸಿ.ಶಿವಕುಮಾರ್, ಸಿಪಿಐ ಪಂಪನಗೌಡ , ತಾಪಂ ಇಒ ಜಿ.ಎಂ.ಬಸಣ್ಣ, ಎಸ್ಟಿ ಇಲಾಖೆಯ ಮೆಹಬೂಬ್ ಬಾಷಾ, ಸಮಾಜ ಕಲ್ಯಾಣಾಧಿಕಾರಿ ಜಗದೀಶ ದಿಗಡೂರ್, ಸಿಡಿಪಿಒ ಮಧುಸೂದನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts