More

    ಎಸ್.ಟಿ.ಸೋಮಶೇಖರ್‌ಗೆ ಬೆಂಗಳೂರಿನ ಮೇಲೆ ಕಣ್ಣು

    ತುಮಕೂರು: ಬಹುನಿರೀಕ್ಷಿತ ರಾಜ್ಯಸಚಿವ ಸಂಪುಟ ವಿಸ್ತರಣೆಯಲ್ಲಿ ನೂತನ ಸಚಿವರಾದ ಎಸ್.ಟಿ.ಸೋಮಶೇಖರ್ ಬೆಂಗಳೂರು ನಗರಾಭಿವೃದ್ಧಿ ಖಾತೆ ಬಯಸಿರುವುದಾಗಿ ಹೇಳಿದರು. ಗುರುವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಸಿದ್ದಲಿಂಗಸ್ವಾಮೀಜಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನೂ ಬೆಂಗಳೂರಿನವನೇ ಆಗಿದ್ದು, ಅಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದೇನೆ ಎಂದರು.

    ಚುನಾವಣೆ ಪೂರ್ವದಲ್ಲಿ ಸಿಎಂ ಬಿಎಸ್‌ವೈ ಕೊಟ್ಟ ಮಾತಿನಂತೆ 10 ಜನರನ್ನು ಸಚಿವರನ್ನಾಗಿ ಮಾಡಿದ್ದಾರೆ, ಉಳಿದವರನ್ನು ಮುಂದಿನ ಹಂತದಲ್ಲಿ ಸಚಿವರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದು ಮಾತು ಉಳಿಸಿಕೊಳ್ಳಲಿದ್ದಾರೆ ಎಂದರು.
    ಸಚಿವ ಸ್ಥಾನ ಸಿಗಲು ತಡವಾಗಲು ಸಾಕಷ್ಟು ಕಾರಣಗಳಿವೆ, ನಮ್ಮ ರಾಜಕೀಯ ಭವಿಷ್ಯ ಹಾಳಾಯಿತು ಎಂದು ಟೀಕಿಸಿದ್ದವರಿಗೆ ಇಂದು ಉತ್ತರ ಸಿಕ್ಕಿರಬಹುದು, ಬಿಜೆಪಿಯಲ್ಲಿ ಮೂಲ, ವಲಸೆ ಎನ್ನುವುದಿಲ್ಲ ಎಂದರು.

    ಬಿಜೆಪಿಯಲ್ಲಿ 116 ಶಾಸಕರೂ ಒಟ್ಟಾಗಿದ್ದೇವೆ, ಸಂಪುಟ ವಿಸ್ತರಣೆಯಾದಾಗ ಅಸಮಾಧಾನ ಸಹಜ, ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರು ಅವರೊಂದಿಗೆ ಮಾತನಾಡುತ್ತಾರೆ, ಪಕ್ಷದಲ್ಲಿ ಯಾವುದೇ ಪೈಪೋಟಿ, ಗೊಂದಲವಿಲ್ಲ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಬೇಕಿದ್ದು, ರೇಣುಕಾಚಾರ್ಯ, ಉಮೇಶ್‌ಕತ್ತಿ ಮಂತ್ರಿಸ್ಥಾನ ಬಯಸಿದ್ದರಲ್ಲಿ ತಪ್ಪೇನಿದೆ ಎಂದರು. ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಚುನಾವಣೆಯಲ್ಲಿ ಸೋತಿರುವ ಹಿನ್ನೆಲೆಯಲ್ಲಿ ಅವರನ್ನು ಮಂತ್ರಿ ಮಾಡಲು ಸಾಧ್ಯವಾಗಿಲ್ಲ, ಮುಂದಿನ ಮೇ, ಜೂನ್‌ಗೆ ವಿಧಾನಪರಿಷತ್‌ಗೆ ಆಯ್ಕೆ ಮಾಡಿ ಮಂತ್ರಿ ಮಾಡುತ್ತಾರೆ ಎಂದರು.

    ಸಿಎಂ ತಮ್ಮ ಬಳಿ ಇರುವ ಖಾತೆ ನೂತನ ಸಚಿವರಿಗೆ ಹಂಚುತ್ತಾರೆ, ಬೆಂಗಳೂರು ನಗರಾಭಿವೃದ್ಧಿ ಸಚಿವಸ್ಥಾನ ನನಗೆ ಆಸಕ್ತಿಯಿದೆ. ಇಂಥದ್ದೇ ಕೊಡಿ ಎಂದು ಕೇಳಿಲ್ಲ, ಯಾವ ಖಾತೆಕೊಟ್ಟರೂ ನಿರ್ವಹಿಸಲು ಸಿದ್ಧ.
    ಎಸ್.ಟಿ.ಸೋಮಶೇಖರ್ ನೂತನ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts