ಶಾಲೆಗಳ ಪುನಾರಂಭದ ನಂತರವೇ ಎಸ್​ಎಸ್​ಎಲ್​ಸಿ ಪರೀಕ್ಷೆ: ಜೂನ್​ನಲ್ಲಿ ಆಯೋಜಿಸುವ ಸಾಧ್ಯತೆ

ಬೆಂಗಳೂರು: ದೇಶಾದ್ಯಂತ ವಿಧಿಸಲಾಗಿರುವ ಲಾಕ್​ಡೌನ್​ ಸದ್ಯಕ್ಕಂತೂ ದೂರಾಗಲ್ಲ. ಅಂದರೆ ಏಪ್ರಿಲ್​ 14ಕ್ಕೆ ಕೊನೆಗೊಳ್ಳಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ದೆಹಲಿ, ಉತ್ತರಪ್ರದೇಶ, ಪಂಜಾಬ್​, ಹರಿಯಾಣಾ, ತೆಲಂಗಾಣ ಸೇರಿ ಹಲವು ರಾಜ್ಯಗಳು ಏಪ್ರಿಲ್​ 30 ರವರೆಗೆ ದಿಗ್ಬಂಧನ ಮುಂದುವರಿಸಿ ಎಂದು ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಿವೆ. ರಾಜ್ಯದಲ್ಲೂ ಈ ಕುರಿತು ಏಪ್ರಿಲ್​ 11ರ ವೇಳೆಗೆ ಸ್ಪಷ್ಟಚಿತ್ರಣ ದೊರೆಯಲಿದೆ.

ಈ ಎಲ್ಲ ಅಸ್ಪಷ್ಟತೆಗಳ ನಡುವೆ ವಿದ್ಯಾರ್ಥಿಗಳನ್ನು ಕಾಡುತ್ತಿರುವ ಪ್ರಶ್ನೆ ಪರೀಕ್ಷೆ ಯಾವಾಗ? ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಇನ್ನೂ ನಡೆದಿಲ್ಲ, ಪಿಯುಸಿ ಪರೀಕ್ಷೆಯ ಇಂಗ್ಲಿಷ್​ ವಿಷಯ ಬಾಕಿ ಉಳಿದಿದೆ. ಜತೆಗೆ, ಸಿಇಟಿ, ಕಾಮೆಡ್​-ಕೆ ನೀಟ್​, ನಾಟಾ ಸೇರಿ ಹಲವು ಪ್ರವೇಶ ಪರೀಕ್ಷೆಗಳು ಮುಂದಕ್ಕೆ ಹೋಗಿವೆ. ಈ ಎಲ್ಲ ಪರೀಕ್ಷೆಗಳು ಯಾವಾಗ ನಡೆಯುತ್ತವೆ ಎಂಬುದು ವಿದ್ಯಾರ್ಥಿಗಳನ್ನು ಇನ್ನಿಲ್ಲದೆ ಕಾಡುತ್ತಿವೆ.
ಇನ್ನೊಂದು ದಿನ ತಡೆದಿದ್ದರೆ ಪಿಯುಸಿ ವಿದ್ಯಾರ್ಥಿಗಳು ನಿರಾಳರಾಗುತ್ತಿದ್ದರು. ಇದೇ ತಿಂಗಳ 22ಕ್ಕೆ ಸಿಇಟಿ ನಡೆದು ನಂತರ ನೀಟ್​ ಹಾಗೂ ನಾಟಾಗೆ ಸಜ್ಜಾಗಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು. ಅದಕ್ಕೆ ತಕ್ಕಂತೆ ಕಾಲಾವಕಾಶವನ್ನು ಹೊಂದಿಸಿಕೊಳ್ಳಲು ಅನುಕೂಲವಾಗಿತ್ತು.

ಆದರೆ, ಈಗ ಯಾವ ಪರೀಕ್ಷೆ ಮೊದಲು ಯಾವುದು ನಂತರ? ಎಲ್ಲವೂ ಒಮ್ಮೆಲೆ ಘೋಷಣೆಯಾದರೆ ಏನು ಮಾಡುವುದು ಎಂಬ ಆತಂಕವೂ ಇಲ್ಲದಿಲ್ಲ. ಹೀಗಾಗಿ ಯಾವ ಪರೀಕ್ಷೆಗೆ ಮೊದಲು ಸಜ್ಜಾಗಬೇಕು ಎಂಬ ಗೊಂದಲಕ್ಕೆ ಉತ್ತರ ಇಲ್ಲದಂತಾಗಿದೆ. ಕೆಲ ದಿನಗಳ ಅಂತರದಲ್ಲಿ ಎಲ್ಲವೂ ನಡೆಯುವುದಾದರೆ ಇನ್ನಷ್ಟು ಕಷ್ಟ. ಹೀಗಾಗಿ ಈಗಿನಿಂದಲೇ ಸಜ್ಜಾಗಿರಬೇಕು ಎಂದು ಶಿಕ್ಷಕರು ಸಲಹೆ ನೀಡುತ್ತಿದ್ದಾರೆ.

ಇನ್ನು, ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಪಾಡು ಕೇಳುವಂತೆಯೇ ಇಲ್ಲ. ಏಪ್ರಿಲ್​ 14ರ ಲಾಕ್​ಡೌನ್​ ಬಳಿಕ ನಾಲ್ಕು ವಾರಗಳವರೆಗೆ ಶಾಲಾ-ಕಾಲೇಜುಗಳಿಗೆ ರಜೆ ನೀಡಬೇಕೆಂದು ಈಗಾಗಲೇ ಸಚಿವರ ಗುಂಪು ಸಲಹೆ ನೀಡಿದೆ. ಅಂದರೆ ಮೇ 15ರವರೆಗೆ ಶಿಕ್ಷಣ ಸಂಸ್ಥೆಗಳು ತೆರೆಯಲ್ಲ. ಸದ್ಯ ಬೇಸಿಗೆ ರಜೆಗಳು ಇರುವುದರಿಂದ ಸರ್ಕಾರ ಈ ಬಗ್ಗೆ ಹೆಚ್ಚೇನೂ ಚಿಂತೆ ಮಾಡುವುದೂ ಇಲ್ಲ. ಇದರರ್ಥ ಬೇಸಿಗೆ ರಜೆಗೂ ಮುನ್ನ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುವ ಸಾಧ್ಯತೆಗಳಂತೂ ಇಲ್ಲ. ಒಂದು ವೇಳೆ ಮೇ ಅಂತ್ಯಕ್ಕೆ ವೇಳಾಪಟ್ಟಿ ಪ್ರಕಟಿಸಿದರೂ, ಕೆಲದಿನಗಳ ಕಾಲಾವಕಾಶವನ್ನಂತೂ ನೀಡಬೇಕಾಗುತ್ತದೆ. ಹೀಗಾಗಿ ಜೂನ್​ನಲ್ಲಿ ಶಾಲೆಗಳು ಆರಂಭವಾದ ಬಳಿಕಷ್ಟೇ ಪರೀಕ್ಷೆಗಳು ನಡೆಯಲಿವೆ.

ಇದು ಕರ್ನಾಟಕದ ವಿದ್ಯಾರ್ಥಿಗಳ ಸಮಸ್ಯೆ ಮಾತ್ರವಲ್ಲ, ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್​, ಒಡಿಶಾ, ಪಶ್ಚಿಮಬಂಗಾಲದಲ್ಲೂ ಪರೀಕ್ಷೆಗಳನ್ನು ಮುಂದೂಡಲಾಗಿದೆ. ದೇಶವ್ಯಾಪಿ ಅನ್ವಯಿಸುವ ಸಿಬಿಎಸ್ಇ 10ನೇ ಹಾಗೂ 12ನೇ ಪರೀಕ್ಷೆಗಳು ಬಾಕಿ ಉಳಿದಿವೆ.

ಬಿಹಾರ, ಉತ್ತರಪ್ರದೇಶದಲ್ಲಿ ದಲ್ಲಿ 10, 12 ನೇ ತರಗತಿ ಪರೀಕ್ಷೆಗಳು ಈಗಾಗಲೇ ನಡೆದಿವೆ. ಬಿಹಾರದಲ್ಲಿ ಫಲಿತಾಂಶವೂ ಪ್ರಕಟವಾಗಿದೆ.

ರಕ್ಷಣಾ ಸಾಧನಗಳಿಲ್ಲದೆ ಕಸ ಸಂಗ್ರಹಿಸುವ, ಪ್ಲಾಸ್ಟಿಕ್​ ಸುತ್ತಿಕೊಂಡು ರೋಗಿಗಳ ಆರೈಕೆ ಮಾಡಿದ ನರ್ಸ್​ಗಳಿಗೆ ಅಂಟಿಕೊಂಡ ಕರೊನಾ

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…