More

    ಎಸ್ಸೆಸ್ಸೆಲ್ಸಿ ಎಕ್ಸಾಂ ಬರೆಯಲು ಹೋಗುವ ಮುನ್ನ, ನಿಮಗಿದು ತಿಳಿದಿರಲಿ!

    ಹಗರಿಬೊಮ್ಮನಹಳ್ಳಿ : ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷಾ ವಿಧಾನದಲ್ಲಿ ಕೆಲವು ಬದಲಾವಣೆಗಳಿದ್ದು, ವಿದ್ಯಾರ್ಥಿಗಳು ಈ ಬಗ್ಗೆ ಗಮನ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಶ್ನೆಪತ್ರಿಕೆಯ ಸ್ವರೂಪ ಮತ್ತು ಉತ್ತರಿಸಬೇಕಾದ ವಿಧಾನದ ಬಗ್ಗೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಆಂಗ್ಲಭಾಷಾ ಶಿಕ್ಷಕಿಯಾಗಿರುವ ವನಿತಾ ಎಚ್​.ಎಂ. ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

    ಈ ಬಾರಿ ಎರಡೇ ದಿನಗಳ ಪರೀಕ್ಷೆ. ಜುಲೈ 19 ರಂದು ಮೂರು ಕೋ ಸಬ್ಜೆಕ್ಟ್​ಗಳು – ಗಣಿತ, ವಿಜ್ಞಾನ ಮತ್ತು ಸಮಾಜಭಾಷೆ – ಇರುತ್ತವೆ. 22 ರಂದು ಮೂರು ಭಾಷೆಗಳ ಪರೀಕ್ಷೆ ಇರುತ್ತದೆ. ಬೆಳಿಗ್ಗೆ 10.15 ಕ್ಕೆ ಪರೀಕ್ಷಾ ಕೊಠಡಿಗೆ ಹೋದರೆ, 10.30 ರಿಂದ 1.30 ರವರೆಗೆ ಪರೀಕ್ಷೆ ಬರೆಯುವ ಸಮಯವಾಗಿರುತ್ತದೆ.

    ಇದನ್ನೂ ಓದಿ: ಎಸ್ಸೆಸ್ಸೆಲ್ಸಿ: “ಯಾವುದೇ ಭಯ ಪಡದೆ ಪರೀಕ್ಷೆ ಬರೆಯೋಕೆ ಬನ್ನಿ”

    ಪ್ರಶ್ನೆಪತ್ರಿಕೆಯಲ್ಲಿ ಪ್ರತಿ ವಿಷಯಕ್ಕೆ 40 ಬಹುಆಯ್ಕೆ ಪ್ರಶ್ನೆಗಳಂತೆ ಒಟ್ಟು 120 ಪ್ರಶ್ನೆಗಳಿರುತ್ತವೆ. 19 ರಂದು ಮೊದಲ 40 ಪ್ರಶ್ನೆಗಳು ಗಣಿತ ವಿಷಯದ್ದಾಗಿದ್ದು, ಅದಕ್ಕಾಗಿ ಪಿಂಕ್ ಬಣ್ಣದ ಓಎಂಆರ್​ ಶೀಟನ್ನೂ, ಎರಡನೇ 40 ವಿಜ್ಞಾನದ ಪ್ರಶ್ನೆಗಳಿಗೆ ಉತ್ತರಿಸಲು ಆರೇಂಜ್ ಬಣ್ಣದ ಶೀಟನ್ನೂ, ಮೂರನೇ ಕಂತಿನ ಸಮಾಜಭಾಷೆಯ 40 ಪ್ರಶ್ನೆಗಳಿಗೆ ಉತ್ತರಿಸಲು ಹಸಿರು ಬಣ್ಣದ ಶೀಟನ್ನೂ ನೀಡಲಾಗುತ್ತದೆ. ಇದೇ ರೀತಿ 22 ರಂದು ಪ್ರಥಮ ಭಾಷೆ, ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆಗೂ ಮೂರು ಕಂತುಗಳ ಪ್ರಶ್ನೆಗಳು ಮತ್ತು ಮೂರು ಬಣ್ಣದ ಓಎಂಆರ್ ಉತ್ತರಪತ್ರಿಕೆಗಳನ್ನು ನೀಡಲಾಗುತ್ತದೆ ಎಂದು ವನಿತಾ ವಿವರಿಸಿದ್ದಾರೆ.

    ಪ್ರಶ್ನೆಯನ್ನು ಸರಿಯಾಗಿ ಓದಿ, ಸರಿಯಾದ ಉತ್ತರವನ್ನು ಜಾಗರೂಕತೆಯಿಂದ ಆಯ್ಕೆ ಮಾಡಿ, ನಿಮಗೆ ಕೊಟ್ಟಿರುವ ಓಎಂಆರ್​ ಶೀಟ್​ಗಳಲ್ಲಿ ಸರಿಯಾದ ಆಯ್ಕೆಗೆ ಶೇಡ್​ ಮಾಡಬೇಕು. ಮೌಲ್ಯಮಾಪನ ಮಾಡಲು ಓಎಂಆರ್​ ಶೀಟ್​ಗಳನ್ನು ಸ್ಕ್ಯಾನ್​ ಮಾಡಲಾಗುವುದರಿಂದ, ಯಾವುದೇ ಕಾರಣಕ್ಕೆ ಆ ಶೀಟುಗಳಲ್ಲಿ ತಿದ್ದುವುದು ಅಥವಾ ಇತರ ರೀತಿ ಗಲೀಜು ಮಾಡಬಾರದು ಎಂದು ವನಿತಾ ಅವರು ಹೇಳಿದ್ದಾರೆ.

    ಒಲಂಪಿಕ್ಸ್​ಗೆ ಹೊರಟಿತು ಆಟಗಾರರ ತಂಡ; ಇಂದು ದೆಹಲಿಯಲ್ಲಿ ಬೀಳ್ಕೊಡುಗೆ

    ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಿವಿಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts