More

    ಭಯ ಹೋಗಲಾಡಿಸಲು ರಿಹರ್ಸಲ್

    ಭಯ ಹೋಗಲಾಡಿಸಲು ರಿಹರ್ಸಲ್

    ಚಿಕ್ಕಮಗಳೂರು: ಜಿಲ್ಲೆಯ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಹೇಗೆ ನಡೆಯಲಿದೆ, ಏನೆಲ್ಲ ತಯಾರಿ ನಡೆಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಹಾಗೂ ವಿದ್ಯಾರ್ಥಿಗಳಲ್ಲಿ ಭಯ ಹೋಗಲಾಡಿಸಲು ಬುಧವಾರ ರಿಹರ್ಸಲ್ ನಡೆಸಲಾಯಿತು.

    ಮಕ್ಕಳನ್ನು ಸರತಿ ಸಾಲಲ್ಲಿ ನಿಲ್ಲಿಸಿ ಥರ್ಮಲ್ ಸ್ಕ್ರೀನಿಂಗ್ ಮಾಡಿಸಿ, ಸ್ಯಾನಿಟೈಸ್ ಮಾಡಿಸಿ, ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಪರೀಕ್ಷೆ ಬರೆಯುವ ಕುರಿತು ಮನವರಿಕೆ ಮಾಡಿಸಿ ಮಕ್ಕಳಲ್ಲಿದ್ದ ಭಯ ದೂರ ಮಾಡಲಾಯಿತು.

    ಜಿಲ್ಲೆಯ 13924 ಮಕ್ಕಳು ಪರೀಕ್ಷೆ ಬರೆಯುತ್ತಿದ್ದು, ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ ಪರೀಕ್ಷಾ ಕೇಂದ್ರಗಳ ಸ್ವಚ್ಛತೆ ಮತ್ತು ಸ್ಯಾನಿಟೈಸಿಂಗ್ ಕೆಲಸ ಪೂರ್ಣಗೊಂಡಿದೆ. ಕೊಠಡಿ ಹಂಚಿಕೆ, ಆಸನ ವ್ಯವಸ್ಥೆ ಪೂರ್ಣಗೊಳಿಸಲಾಗಿದೆ. ಎಲ್ಲ ಕೇಂದ್ರಗಳಿಗೆ ಆರೋಗ್ಯ ಸಹಾಯಕರು ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ. ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಹ್ಯಾಂಡ್ ಸ್ಯಾನಿಟೈಸ್ ಮಾಡಲಾಗುತ್ತದೆ.

    ಯಾವ ಮಕ್ಕಳಿಗೂ ಸಾರಿಗೆ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತರಲು 130 ಮಾರ್ಗಗಳನ್ನು ಗುರುತಿಸಿ ಮಾರ್ಗದ ಅಧಿಕಾರಿಗಳನ್ನು ನೇಮಿಸಲಾಗಿದೆ. 60 ಬಸ್​ಗಳಲ್ಲಿ ಮಕ್ಕಳನ್ನು ಕರೆತರಲಾಗುವುದು. 70 ಖಾಸಗಿ ಶಾಲೆಗಳ ಬಸ್​ಗಳನ್ನು ಬಳಸಿಕೊಳ್ಳಲಾಗುತ್ತಿದೆ. ರಾಜ್ಯ ಮಟ್ಟದ ನೋಡಲ್ ಅಧಿಕಾರಿಯಾಗಿ ಚಂದ್ರಪ್ಪ ಹಾಗೂ ಹಾಸನದ ಡಯಟ್ ಪ್ರಾಚಾರ್ಯ ಪುಟ್ಟರಾಜು ನೇತೃತ್ವ ವಹಿಸಿದ್ದಾರೆ.

    ಕರೊನಾ ಸೋಂಕಿನಿಂದ ಸೀಲ್​ಡೌನ್ ಆಗಿರುವ ಜಿಲ್ಲೆಯ ಏಳು ಪ್ರದೇಶಗಳ ಎಸ್​ಎಸ್​ಎಲ್​ಸಿ ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದ್ದು, ಆರೋಗ್ಯ ಇಲಾಖೆ ವರದಿ ಅವಲಂಬಿಸಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುವುದು ಎನ್ನುತ್ತಾರೆ ಡಿಡಿಪಿಐ ಸಿ.ನಂಜಯ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts