More

    ಎಸ್‌ಆರ್‌ಎಸ್ ಬೆಟ್ಟಲಿಫ್ಟ್ ಕಾಮಗಾರಿಗೆ ಮರುಜೀವ

    ವಿಭೂತಿಕೆರೆ ಶಿವಲಿಂಗಯ್ಯಕೈಲಾಂಚ
    ರಾಮನಗರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಅರ್ಧಕ್ಕೆ ನಿಂತ ಲಿಫ್ಟ್ ಕಾಮಗಾರಿಗೆ ಮತ್ತೆ ಜೀವ ಬಂದಿದೆ.
    ಬೆಟ್ಟಕ್ಕೆ ಸ್ಥಳೀಯವಾಗಿ ಅಲ್ಲದೆ ರಾಜ್ಯಾದ್ಯಂತ ಭಕ್ತರಿದ್ದಾರೆ. ಹೊರ ರಾಜ್ಯಗಳಿಂದಲೂ ಪ್ರತಿದಿನ ಕ್ಷೇತ್ರಕ್ಕೆ ಭಕ್ತರು ಆಗಮಿಸಿ ಬೆಟ್ಟಹತ್ತಿ ದೇವರ ದರ್ಶನ ಮಾಡಿ ಹೋಗುತ್ತಾರೆ. ಭಕ್ತರು ಸುಲಭವಾಗಿ ಬೆಟ್ಟ ಹತ್ತಲು ಲ್‌ಟಿ ಅಳವಡಿಸುವಂತೆ ಒತ್ತಾಯ ಕೇಳಿಬಂದಿತ್ತು. ಈ ಸಂಬಂಧ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದು ಅನುದಾನ ಒದಗಿಸುವಂತೆ ಕೋರಿದ್ದರು. ಈಗ ಪ್ರವಾಸೋದ್ಯಮ ಇಲಾಖೆ ಕೆಆರ್‌ಐಡಿಎಲ್ ಮೂಲಕ 2 ಕೋಟಿ ರೂ. ವೆಚ್ಚದಲ್ಲಿ ಲ್‌ಟಿ ಕಾಮಗಾರಿಗೆ ಹಸಿರು ನಿಶಾನೆ ತೋರಿದೆ. ಕಾಮಗಾರಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಗುರುವಾರ ಚಾಲನೆ ನೀಡಲಿದ್ದಾರೆ.

    ಭಕ್ತರಲ್ಲಿ ಸಂತಸ: ಬೆಟ್ಟ ಕಡಿದಾಗಿದ್ದು ವದ್ಧರು, ಅಂಗವಿಕಲರು ಬೆಟ್ಟ ಹತ್ತಿ ದೇವರ ದರ್ಶನ ವಾಡಲು ಆಗುತ್ತಿರಲಿಲ್ಲ. ಕೆಲವರು ನಿರಾಸೆಯಿಂದ ವಾಪಸಾಗಿದ್ದೂ ಉಂಟು. ಭಕ್ತರು ಬೆಟ್ಟದ ಮೇಲೇರಲು ಅನುಕೂಲವಾಗುವಂತೆ ಬೆಂಗಳೂರಿನ ದಾನಿಯೊಬ್ಬರು ಸ್ವಂತ ಹಣದಲ್ಲಿ ಲ್‌ಟಿ ಅಳವಡಿಸಲು ಮುಂದಾಗಿ ನಾಲ್ಕು ವರ್ಷಗಳ ಹಿಂದೆ ಒಂದಿಷ್ಟು ಕಬ್ಬಿಣದ ಕೆಲಸ ಕೂಡ ಮಾಡಿದ್ದರು. ಆದರೆ, ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಲ್‌ಟಿ ಅಳವಡಿಸುವ ಕಾಮಗಾರಿ ಕನಸಾಗಿಯೇ ಉಳಿದಿತ್ತು. ಲಿಫ್ಟ್ ಕಾಮಗಾರಿಗೆ ಕೊನೆಗೂ ಕಾಯಕಲ್ಪ ಸಿಕ್ಕಿರುವುದು ಭಕ್ತರಲ್ಲಿ ಸಂತಸ ತಂದಿದೆ.

    ಎಸ್‌ಆರ್‌ಎಸ್ ಬೆಟ್ಟಲಿಫ್ಟ್ ಕಾಮಗಾರಿಗೆ ಮರುಜೀವ

    ಪ್ರವಾಸಿ ತಾಣಗಳ ಅಭಿವದ್ಧಿಗೆಂದೇ ಪ್ರವಾಸೋದ್ಯಮ ಇಲಾಖೆ ಮೂಲಕ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಅದರಂತೆ ಕ್ಷೇತ್ರದ 12 ಪ್ರವಾಸಿ ತಾಣಗಳ ಅಭಿವದ್ಧಿಗೆ 10 ಕೋಟಿ ರೂ. ಅನುದಾನ ಸಿಕ್ಕಿದೆ. ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಲಿಫ್ಟ್ ಅಳವಡಿಕೆಗೆ 2 ಕೋಟಿ ರೂ. ಸಿಕ್ಕಿದ್ದು, ಭಕ್ತರ ಕೋರಿಕೆಯಂತೆ ಲಿಫ್ಟ್ ಕಾಮಗಾರಿ ಪ್ರಾರಂಭವಾಗಲಿದೆ.
    ಅನಿತಾ ಕುವಾರಸ್ವಾಮಿ, ಶಾಸಕಿ

    ಎಸ್‌ಆರ್‌ಎಸ್ ಬೆಟ್ಟಲಿಫ್ಟ್ ಕಾಮಗಾರಿಗೆ ಮರುಜೀವ

    ರೇವಣಸಿದ್ದೇಶ್ವರ ಬೆಟ್ಟದಲ್ಲಿ ಲಿಫ್ಟ್ ಅಳವಡಿಸುವುದು ಭಕ್ತರ ಬಹುದಿನಗಳಿಂದ ಬೇಡಿಕೆಯಾಗಿದೆ. ವಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ ಅವರಲ್ಲಿಯೂ ಅನುದಾನಕ್ಕೆ ಬೇಡಿಕೆ ಇಡಲಾಗಿತ್ತು. ಕೆಆರ್‌ಐಡಿಎಲ್ ಕೂಡ ಸಿಎಸ್‌ಆರ್ ಅನುದಾನದಲ್ಲಿ ಲಿಫ್ಟ್ ಕಾಮಗಾರಿಗೆ 20 ಲಕ್ಷ ರೂ. ನೀಡಲಿದೆ. ಸುಸಜ್ಜಿತವಾಗಿ ಲಿಫ್ಟ್ ಕಾಮಗಾರಿಯನ್ನು ಕೆಆರ್‌ಐಡಿಎಲ್ ನಿರ್ವಹಿಸಲಿದೆ.
    ಎಂ. ರುದ್ರೇಶ್, ಅಧ್ಯಕ್ಷ, ಕೆಆರ್‌ಐಡಿಎಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts