More

    ಬೂದಾಳ್ ಬನಶಂಕರಿ ದೇವಿಯ ಅಗ್ನಿಕುಂಡ ಜಾತ್ರೆ

    ಹೊಸದುರ್ಗ: ತಾಲೂಕಿನ ಶ್ರೀರಾಂಪುರ ಗ್ರಾಮದ ಶಕ್ತಿಪೀಠ ಶ್ರೀ ಬೂದಾಳ್ ಬನಶಂಕರಿ ದೇವಿಯ ಅಗ್ನಿಕುಂಡ ಜಾತ್ರಾ ಮಹೋತ್ಸವವು ಜ. 25 ರಿಂದ ಫೆ. 4 ರವರೆಗೆ ನೆರವೇರಲಿದೆ.

    ಹನ್ನೊಂದು ವರ್ಷಗಳ ನಂತರ ಆಯೋಜಿಸಿರುವ ಉತ್ಸವಕ್ಕೆ ಸೋಮವಾರ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಗಿದೆ. ಜ. 25 ರಿಂದ ಫೆ. 3 ರವರೆಗೆ ಅಮ್ಮನವರ ಗಂಗಾಪೂಜೆಯ ಪಾದಯಾತ್ರೆ ನಡೆಯಲಿದೆ.

    ಬುಧವಾರ ಶ್ರೀ ಬನಶಂಕರಿ ದೇವಿ ಉತ್ಸವ ಮೂರ್ತಿ ತರೀಕೆರೆ ತಾಲೂಕಿನ ಕಲ್ಲತ್ತಗಿರಿ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ತೆರಳಲಿದೆ. ಜ. 29 ರಂದು ಕಲ್ಲತ್ತಗಿರಿಯ ಬೆಟ್ಟದ ಮೇಲಿರುವ ದರ್ಭೆ ತೀರ್ಥದಲ್ಲಿ ಗಂಗಾ ಸ್ನಾನ ನೆರವೇರಲಿದೆ. ನಂತರ ಗಂಗಾಜಲ ತುಂಬಿದ ಕಳಸವನ್ನು ಪಾದಯಾತ್ರೆಯ ಮೂಲಕ ಶ್ರೀರಾಂಪುರದ ದೇಗುಲಕ್ಕೆ ತರಲಾಗುವುದು.

    ಫೆ. 3ರಂದು ಬೆಳಗ್ಗೆ 11ಕ್ಕೆ ಪೂರ್ಣಕುಂಭದೊಂದಿಗೆ ಶ್ರೀದೇವಿಯ ಪುರಪ್ರವೇಶ ಆಗಲಿದೆ. ದೇವಿಕೆರೆ ಅಂಗಳದಲ್ಲಿ ಹೊಸ ಬಾವಿ ನಿರ್ಮಿಸಿ ಗಂಗಾಪೂಜೆ ನಡೆಯಲಿದೆ. ನಂತರ ಅಲಗು ಸೇವಾ ಸಮೇತ ನಡೆಮುಡಿಯೊಂದಿಗೆ ದೇಗುಲದ ಅಂಗಳ ಪ್ರವೇಶಿಸುವ ಅಮ್ಮನವರಿಗೆ ಅಗ್ನಿಕುಂಡ ಸೇವೆ ನೆರವೇರಲಿದೆ.

    ಫೆ. 4 ರಂದು ಮೂಲ ಶಿಲಾಮೂರ್ತಿಗೆ ಗಂಗಾಜಲದಿಂದ ಅಭಿಷೇಕ ನಡೆಸಿ, ವಿಶೇಷ ಅಲಂಕಾರ ಮಾಡಲಾಗುವುದು. ಬೆಳಗ್ಗೆ 11ಕ್ಕೆ ಧಾರ್ಮಿಕ ಸಮಾರಂಭದಲ್ಲಿ ಹಂಪಿ ಗಾಯತ್ರಿ ಪೀಠದ ಶ್ರೀ ದಯಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಮದನೂರು ಮಠದ ಶ್ರೀ ಈಶ್ವರಾನಂದ ಸ್ವಾಮೀಜಿ, ಬೆಲಗೂರಿನ ಶ್ರೀ ವಿಜಯಮಾರುತಿ ಶರ್ಮ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5ಕ್ಕೆ ಶ್ರೀ ಬನಶಂಕರಿ ದೇವಿಯ ರಾಜಬೀದಿ ಉತ್ಸವ ನಡೆಯಲಿದೆ.
    ಜಾತ್ರೆಯ ವಿಶೇಷ: ಅಗ್ನಿಕುಂಡ ಜಾತ್ರಾ ಮಹೋತ್ಸವ ಬೂದಾಳ ಬನಶಂಕರಿ ದೇವಿಯ ಪ್ರಮುಖ ಉತ್ಸವವಾಗಿದೆ. ದೇವಾಂಗ ಸಮುದಾಯ ಸೇರಿ ರಾಜ್ಯದ ವಿವಿಧೆಡೆ ಭಕ್ತರನ್ನು ಹೊಂದಿರುವ ಜಾತ್ರೆಯು ಪ್ರತಿ 9 ವರ್ಷಗಳ ನಂತರ ದೇವಿಯು ಅಪ್ಪಣೆ ನೀಡಿದ ವರ್ಷ ನಡೆಯುತ್ತದೆ. 2012 ರಲ್ಲಿ ಜಾತ್ರೆ ನಡೆದಿದ್ದು, ಈಗ 13 ವರ್ಷಗಳ ನಂತರ ನಡೆಯುತ್ತಿದೆ. 10 ದಿನಗಳ ಉತ್ಸವದಲ್ಲಿ ಭಕ್ತರು ಕುಟುಂಬ ಸಮೇತ ಪಾಲ್ಗೊಂಡು ಸಂಭ್ರಮಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts