More

    ದಕ್ಷಿಣ ಆಫ್ರಿಕಾಕ್ಕೆ ಕುಲಶೇಖರ ಕಡಿವಾಣ, ಫೈನಲ್‌ಗೇರಿದ ಶ್ರೀಲಂಕಾ ಲೆಜೆಂಡ್ಸ್

    ರಾಯ್‌ಪುರ: ವೇಗಿ ನುವಾನ್ ಕುಲಶೇಖರ (25ಕ್ಕೆ 5) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಶ್ರೀಲಂಕಾ ಲೆಜೆಂಡ್ಸ್ ತಂಡ ರಸ್ತೆ ಸುರಕ್ಷತಾ ವಿಶ್ವ ಸರಣಿ ಟಿ20 ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡಕ್ಕೆ 8 ವಿಕೆಟ್‌ಗಳಿಂದ ಸೋಲುಣಿಸಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ತಂಡಗಳು ಮುಖಾಮುಖಿ ಆಗಲಿವೆ. 2011ರ ಏಕದಿನ ವಿಶ್ವಕಪ್ ಪ್ರಶಸ್ತಿ ಹೋರಾಟದಲ್ಲಿ ಮುಖಾಮುಖಿಯಾಗಿದ್ದ ಭಾರತ-ಶ್ರೀಲಂಕಾ ತಂಡದಲ್ಲಿನ ಹೆಚ್ಚಿನ ಆಟಗಾರರು ಈ ತಂಡಗಳಲ್ಲೂ ಇರುವುದು ವಿಶೇಷವಾಗಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ ತಂಡ, ಆರಂಭಿಕ ಮಾರ್ನ್ ವಾನ್ ವಿಕ್ (53 ರನ್, 47 ಎಸೆತ, 8 ಬೌಂಡರಿ) ಅರ್ಧಶತಕದ ನಡುವೆಯೂ ಭರ್ತಿ 20 ಓವರ್‌ಗಳಲ್ಲಿ 125 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ಲಂಕಾ 17.2 ಓವರ್‌ಗಳಲ್ಲಿ 2 ವಿಕೆಟ್‌ಗೆ 129 ರನ್ ಗಳಿಸಿ ಜಯಿಸಿತು.

    ಇದನ್ನೂ ಓದಿ: ಕೆಎಲ್​ ರಾಹುಲ್ ಸತತ ವೈಫಲ್ಯಕ್ಕೆ ಸ್ಟೇಡಿಯಂ ಹೆಸರೇ ಕಾರಣ!

    ದಕ್ಷಿಣ ಆಫ್ರಿಕಾ ಲೆಜೆಂಡ್ಸ್: 20 ಓವರ್‌ಗಳಲ್ಲಿ 125 (ವಾನ್ ವಿಕ್ 53, ಪಟಿಕ್ 0, ಅಲ್ವಿರೊ ಪೀಟಸೆನ್ 27, ರೋಡ್ಸ್ 4, ಕೆಂಪ್ 15, ಕುಲಶೇಖರ 25ಕ್ಕೆ 5, ಜಯಸೂರ್ಯ 12ಕ್ಕೆ 1). ಶ್ರೀಲಂಕಾ ಲೆಜೆಂಡ್ಸ್: 17.2 ಓವರ್‌ಗಳಲ್ಲಿ 2 ವಿಕೆಟ್‌ಗೆ 129 (ದಿಲ್ಶಾನ್ 18, ತರಂಗ 38*, ಜಯಸಿಂಘೆ 47*, ಎನ್‌ಟಿನಿ 27ಕ್ಕೆ 1).

    VIDEO | ಯುವ ವೇಗಿಯ ಎಸೆತಕ್ಕೆ ಧೋನಿ ಕ್ಲೀನ್ ಬೋಲ್ಡ್, ವಿಡಿಯೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts