More

    ಕಿಗ್ಗಾ ಶ್ರೀ ಶಾಂತಾಸಮೇತ ಋಷ್ಯಶೃಂಗೇಶ್ವರಸ್ವಾಮಿ ಅಷ್ಟಬಂಧ ಮತ್ತು ಕುಂಭಾಭಿಷೇಕ ಮಹೋತ್ಸವ 26ಕ್ಕೆ

    ಶೃಂಗೇರಿ: ಮಳೆದೇವರು ಎಂದು ಖ್ಯಾತಿ ಪಡೆದ ಕಿಗ್ಗಾ ಶ್ರೀ ಶಾಂತಾಸಮೇತ ಋಷ್ಯಶೃಂಗೇಶ್ವರಸ್ವಾಮಿ ಅಷ್ಟಬಂಧ ಮತ್ತು ಕುಂಭಾಭಿಷೇಕ ಮಹೋತ್ಸವವನ್ನು ಫೆ.26ರಂದು ಬುಧವಾರ ಬೆಳಗ್ಗೆ 9ರಿಂದ 9.30ರವರೆಗೆ ಶ್ರೀ ಮಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ನೆರವೇರಿಸುವರು. ಬಳಿಕ ಆಶೀರ್ವಚನ ನೀಡುವರು.

    ಮಹೋತ್ಸವದ ಪ್ರಯುಕ್ತ ಫೆ.22ರಂದು ಯಾಗಶಾಲಾ ಪ್ರವೇಶ, ಗುರು-ಗಣೇಶ ಪ್ರಾರ್ಥನೆ, ಪುಣ್ಯಾಹ ವಾಚನ, ಮಹಾಸಂಕಲ್ಪ, ಋತ್ವಿಗ್ವರಣೆ, ದ್ವಾದಶ ನಾರಿಕೇಳ ಗಣಹೋಮ, ಮಹಾರುದ್ರ ಪುರಶ್ಚರಣ ಮುಂತಾದ ಧಾರ್ವಿುಕ ಕಾರ್ಯಕ್ರಮ ಜರುಗಲಿವೆ.

    23ರಂದು ಲಲಿತಾ ಲಕ್ಷಾರ್ಚನೆ ಹೋಮ, ಚಂಡಿಕಾ ಪಾರಾಯಣ, ಶಿವಪಂಚಾಕ್ಷರಿ ಹೋಮ, ಮಹಾರುದ್ರ ಪುರಶ್ಚರಣ, 24ರಂದು ಲಲಿತಾಹೋಮ, ಚಂಡಿಕಾಹೋಮ, ಮಹಾರುದ್ರ ಪುರಶ್ಚರಣ, ಅಷ್ಟಬಂಧ ಮತ್ತಿತರೆ ಕಾರ್ಯಕ್ರಗಳು ನಡೆಯಲಿವೆ. 25ಕ್ಕೆ ಮಹಾರುದ್ರ ಹೋಮದ ಪೂರ್ಣಾಹುತಿ ನಡೆಯಲಿದೆ.

    ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ ನಾಯ್್ಕ ಸಚಿವರಾಗಿದ್ದ ಸಂದರ್ಭ ದೇವಾಲಯದ ಅಭಿವೃದ್ಧಿಗೆ ನೀಡಿದ್ದ 62 ಲಕ್ಷ ರೂ. ಅನುದಾನದಲ್ಲಿ ದೇವಾಲಯದ ಮೇಲ್ಛಾವಣಿಗೆಗೆ ತಾಮ್ರದ ಹೊದಿಕೆ ಮಾಡಲಾಗಿದೆ. 8.50 ಲಕ್ಷ ರೂ. ವೆಚ್ಚದಲ್ಲಿ ನೂತನ ಬಾವಿ ನಿರ್ವಿುಸಲಾಗಿದೆ. ಕುಂಭಾಭಿಷೇಕಕ್ಕೆ ದೇವಾಲಯವು ಸುಣ್ಣ-ಬಣ್ಣಗಳಿಂದ ಸಾಲಂಕೃತವಾಗಿ ಕಂಗೊಳಿಸುತ್ತಿದೆ. ಶಾಸಕ ಟಿ.ಡಿ.ರಾಜೇಗೌಡ ಅವರ ನೇತೃತ್ವದಲ್ಲಿ ತಾಲೂಕಿನ ಸದ್ಭಕ್ತರನ್ನು ಒಳಗೊಂಡಂತೆ ಒಟ್ಟು ಒಂಬತ್ತು ಸಮಿತಿ ರಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts