More

    ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪ್ರವಚನ ಮಾ. 1ರಿಂದ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ವತಿಯಿಂದ ಗೋಕುಲ ರಸ್ತೆಯ ರೇವಡಿಹಾಳ ರಸ್ತೆಯ ಶ್ರೀ ಬಸವಂತಪ್ಪ ಹೊಸಮನಿ ಹಾಗೂ ಹೊಸಮನಿ ಬಂಧುಗಳ ಹೊಲದಲ್ಲಿ ಮಾ. 1ರಿಂದ ತಿಂಗಳವರೆಗೆ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ‘ಆಧ್ಯಾತ್ಮಿಕ ಪ್ರವಚನ’ ಏರ್ಪಾಟಾಗಿದೆ.

    ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಘೊಡಗೇರಿ ಶಿವಾನಂದ ಮಠದ ಶ್ರೀ ಮಲ್ಲಯ್ಯ ಸ್ವಾಮೀಜಿ ಮಾತನಾಡಿ, ನಿತ್ಯ ಬೆಳಗ್ಗೆ 6.30ರಿಂದ 7.30ರವರೆಗೆ ಶ್ರೀಗಳು ಪ್ರವಚನ ನೀಡುವರು ಎಂದರು.

    ಮಾ. 1ರಂದು ಬೆಳಗ್ಗೆ 6.15ಕ್ಕೆ ಪ್ರವಚನಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ. ಮೂರುಸಾವಿರ ಮಠದ ಶ್ರೀಗಳು, ಗದಗ ಶಿವಾನಂದ ಮಠದ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ, ನೂತನ ಪೀಠಾಧಿಪತಿ ಶ್ರೀ ಸದಾಶಿವಾನಂದ ಸ್ವಾಮೀಜಿ, ಅಕ್ಕಿಹೊಂಡ ಹೊಸಮಠದ ಶ್ರೀ ಚಂದ್ರಶೇಖರ ಶಿವಯೋಗಿ ರಾಜಯೋಗೀಂದ್ರ ಸ್ವಾಮೀಜಿ, ಗೋಕುಲ ದಯಾನಂದ ಆಶ್ರಮದ ಶ್ರೀ ಚಿದ್ರೂಪಾನಂದ ಸ್ವಾಮೀಜಿ, ಮನಗುಂಡಿ ಶ್ರೀ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ, ಶಾಂತಾಶ್ರಮದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ, ರಾಯನಾಳ ವಿರಕ್ತಮಠದ ಶ್ರೀ ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ, ಹುಲ್ಯಾಳ ಮಲ್ಲಿಕಾರ್ಜುನ ಗುರುದೇವ ತಪೋವನದ ಶ್ರೀ ಹರ್ಷಾನಂದ ಸ್ವಾಮೀಜಿ, ಗರಗ ಮಡಿವಾಳೇಶ್ವರ ಮಠದ ಶ್ರೀ ವೀರೇಶ್ವರ ದೇವರು ಸಾನ್ನಿಧ್ಯ ವಹಿಸುವರು ಎಂದರು.

    ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಗೌರವಾಧ್ಯಕ್ಷತೆ ವಹಿಸುವರು. ಹು-ಧಾ ಪೂರ್ವ ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಕುಸುಮಾ ಶಿವಳ್ಳಿ, ಸಿಎಂ ನಿಂಬಣ್ಣವರ, ಎಂಎಲ್​ಸಿಗಳಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್, ಶ್ರೀನಿವಾಸ ಮಾನೆ, ಮಾಜಿ ಸಚಿವ ವಿನಯ ಕುಲಕರ್ಣಿ, ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದರು.

    ಶ್ರೀಗಳ ವಾಸ್ತವ್ಯ: ಶಿವಣ್ಣ ಮುದ್ದಿ ಆಂಡ್ ಸನ್ಸ್ ಅವರ ತಾರಿಹಾಳದ ಮಾವಿನ ತೋಟದಲ್ಲಿನ ನೂತನ ಕಟ್ಟಡದಲ್ಲಿ ಸಿದ್ಧೇಶ್ವರ ಶ್ರೀಗಳು ವಾಸ್ತವ್ಯ ಮಾಡುವರು. ಪ್ರತಿ ಭಾನುವಾರ ಸಂಜೆ 5 ಗಂಟೆಯಿಂದ 6 ರವರೆಗೆ ಇಂಗ್ಲಿಷ್​ನಲ್ಲಿ ಪ್ರವಚನ ನೀಡುವರು. ಪ್ರತಿ ನಿತ್ಯ ಅಂದಾಜು 5 ಸಾವಿರದಿಂದ 35 ಸಾವಿರ ಜನರು ಪ್ರವಚನ ಕೇಳಲು ಬರುವ ನಿರೀಕ್ಷೆ ಇದೆ. ಬಂದ ಭಕ್ತರಿಗೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10ರವರೆಗೆ ಅನ್ನದಾಸೋಹ ನಡೆಸಲಾಗುತ್ತಿದೆ ಎಂದರು.

    ಬಸ್ ಸೌಲಭ್ಯ: ವಾಕರಾರಸಾ ಸಂಸ್ಥೆಯ ಡಿಸಿ ಅವರಿಗೆ ವಿವಿಧ ಬಡಾವಣೆಗಳಿಂದ ಆಗಮಿಸುವ ಭಕ್ತರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಭರವಸೆಯೂ ಸಿಕ್ಕಿದೆ. ಬಹಳಷ್ಟು ವಾಹನಗಳು ಆಗಮಿಸುವ ಹಿನ್ನೆಲೆಯಲ್ಲಿ ಪ್ರವಚನ ನಡೆಯುವ ಮೈದಾನದ ಸಮೀಪ ರ್ಪಾಂಗ್ ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ಶೌಚಗೃಹ, ಕಸದ ತೊಟ್ಟಿಗಳನ್ನು ಅಳವಡಿಸುವ ವ್ಯವಸ್ಥೆ ಮಹಾನಗರ ಪಾಲಿಕೆ ಮಾಡಲಿದೆ ಎಂದರು.

    ದ್ಯಾವಪ್ಪನವರ-ವಳಸಂಗ ಎಜುಕೇಶನಲ್ ಅಕಾಡೆಮಿಕ್ ಟ್ರಸ್ಟ್​ನ ಪ್ರೊ. ಜಿ.ವಿ. ವಳಸಂಗ, ಪ್ರೊ. ಮಹೇಶ ದ್ಯಾವಪ್ಪನವರ, ಗುತ್ತಿಗೆದಾರ ಅಶೋಕ ಪಾಟೀಲ, ಮಾಜಿ ಮಹಾಪೌರ ವಿಜಯಾನಂದ ಹೊಸಕೋಟಿ, ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಶಂಭು ಆರೇರ, ಸುಭಾಷ್ ಸಿಂಗ್ ಜಮಾದಾರ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts