More

    ಸೌಹಾರ್ದದಿಂದ ಮಾನವ ಜೀವನ ಸಾರ್ಥಕ

    ಚಿಕ್ಕಮಗಳೂರು: ಎಲ್ಲರ ಜೀವನದಲ್ಲಿ ಒಂದಲ್ಲಾ ಒಂದು ತೊಡಕು, ಕಷ್ಟ-ಕಾರ್ಪಣ್ಯಗಳಿರುತ್ತವೆ. ಅವೆಲ್ಲವನ್ನೂ ಸರಿದೂಗಿಸಿಕೊಂಡು ನೆರೆಹೊರೆಯವರ ಜತೆ ಸೌಹಾರ್ದದಿಂದ ಜೀವನ ನಡೆಸಿದಾಗ ಮನುಷ್ಯ ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದು ಬೇರುಗಂಡಿ ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಶನಿವಾರ ಮನೆ ಮನೆಗೆ ಭೇಟಿ ನಂತರ ನಗರದ ಶಂಕರಪುರ ಕೊಂಗನಾಟಮ್ಮ ದೇವಾಲಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.

    ಸಾಧನೆ ಮಾಡುವ ಮೂಲಕ ಸಮಷ್ಠಿ ಜೀವನಕ್ಕೂ ಸೇವೆ ಸಲ್ಲಿಸಬೇಕು ಎನ್ನುವುದನ್ನು ಕಲಿಸಿ ಕೊಡಬೇಕೆಂಬುದೇ ನಮ್ಮ ದೇಶದ ಮೂಲ ಉದ್ದೇಶ. ನಾವು ಬದುಕಬೇಕು, ಇತರರನ್ನೂ ಜತೆಗೆ ಕರೆದುಕೊಂಡು ಸಾಗಬೇಕು. ವೇದ, ಉಪನಿಷತ್, ಆಗಮಗಳು, ಕಥೆ, ಕಾದಂಬರಿ, ನಾಟಕ, ಸಾಹಿತ್ಯ ಅಧ್ಯಯನದಿಂದ ಮಾನವನ ಜೀವನಕ್ಕೆ ಒಳ್ಳೆಯ ಸ್ವರೂಪ ಬರುತ್ತದೆ ಎಂದರು.

    ಸಾವಿರಾರು ವರ್ಷದ ಇತಿಹಾಸ ಮರುಕಳಿಸುವ ಐತಿಹಾಸಿಕ ಕಾರ್ಯಕ್ರಮ ರಾಮ ಮಂದಿರ ನಿರ್ವಣ. ಇಂತಹ ಕೈಂಕರ್ಯದಲ್ಲಿ ತೊಡಗಿ ಶ್ರೀರಾಮನ ಆದರ್ಶಮಯ ಜೀವನ ಜನರಲ್ಲಿ ಹಾಸುಹೊಕ್ಕಾಗಿ ದೇಶ ಸುಭೀಕ್ಷವಾಗಬೇಕು ಎಂದು ಅಭಿಪ್ರಾಯಪಟ್ಟರು.

    ನಿಧಿ ಸಮರ್ಪಣ ಅಭಿಯಾನದ ನಗರ ಪ್ರಮುಖ ಎಸ್.ಪ್ರವೀಣ್ ಮಾತನಾಡಿ, ರಾಮ ಮಂದಿರ ರಾಷ್ಟ್ರ ಮಂದಿರ ಆಗಬೇಕಾದರೆ ಎಲ್ಲ ಮಠಾಧಿಶರು ಒಕ್ಕೊರಲಿನಿಂದ ಜಾತಿ, ಪಂಥ, ಭಾಷೆಗಳನ್ನು ಬಿಟ್ಟು ಒಂದಾಗಬೇಕೆಂದು ಸಂತರ ಸಮಾವೇಶದಲ್ಲಿ ನುಡಿದಂತೆ ಶ್ರೀ ರೇಣುಕ ಮಹಾಂತ ಸ್ವಾಮೀಜಿ ನಡೆದಿದ್ದಾರೆ ಎಂದು ಹೇಳಿದರು.

    ನಿಧಿ ಸಮರ್ಪಣೆಗೆ ಮನೆ ಮನೆ ಸಂಪರ್ಕ ಜೋಡಿಸಿಕೊಂಡಿರುವುದು ಅಭಿಯಾನಕ್ಕೆ ಸ್ಪೂರ್ತಿ ಬಂದಂತಾಗಿದೆ. ಸಂತರು ಯಾವುದೇ ಅಳುಕಿಲ್ಲದೆ ಶಂಕರಪುರದ ಪೌರಕಾರ್ವಿುಕರ ಮನೆಗಳಿಗೆ ತೆರಳಿ ನಿಧಿ ಸಮರ್ಪಣೆಯಲ್ಲಿ ಪಾಲ್ಗೊಂಡಿರುವುದು ಸಾಮರಸ್ಯದ ಸಂಕೇತ ಎಂದರು.

    ಜಿಪಂ ಸದಸ್ಯೆ ಜಸಂತಾ ಅನಿಲ್​ಕುಮಾರ್, ಅಭಿಯಾನದ ಜಿಲ್ಲಾ ಪ್ರಮುಖ್ ಮಲ್ಲಿಕಾರ್ಜುನರಾವ್, ಪ್ರಭುಲಿಂಗಶಾಸ್ತ್ರಿ, ಧನಂಜಯ ಗೌಡ, ಬಿ.ರಾಜಪ್ಪ, ಸಂತೋಷ್ ಕೊಟ್ಯಾನ್ , ಶ್ಯಾಮ ಗೌಡ, ಸುನೀಲ್, ವೀಣಾ, ಪವಿತ್ರಾ, ವಿಶಾಖ, ಜಗದೀಶ್, ಎಸ್​ಡಿಎಂ ಮಂಜು, ಸುರೇಶ್, ವಿನೋದಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts