More

    ಯಕ್ಷರಂಗದಲ್ಲಿ ಶರಣರ ವಿಚಾರಧಾರೆ ಹೊಸ ಪ್ರಯತ್ನ

    ಸಾಗರ: ಶರಣರ ಕುರಿತು ಕಥೆ, ಕಾದಂಬರಿ, ಕಾವ್ಯ, ಸಿನಿಮಾ ಎಲ್ಲವೂ ಮೂಡಿಬಂದಿದೆ. ಕರಾವಳಿ ಮತ್ತು ಮಲೆನಾಡಲ್ಲಿ ಅತ್ಯಂತ ಪ್ರಚಲಿತವಾಗಿರುವ ಯಕ್ಷಗಾನದಲ್ಲೂ ಶರಣರ ವಿಚಾರಧಾರೆಗಳು ಮತ್ತು ಅವರ ಬದುಕನ್ನು ಬಿಂಬಿಸುವ ಹೊಸ ಪ್ರಯತ್ನ ನಡೆಯುತ್ತಿದೆ ಎಂದು ಆನಂದಪುರ ಮá-ರá-ಘಾ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

    ನಗರದಲ್ಲಿ ಸೋಮವಾರ ಶಿವಮೊಗ್ಗ ನಾಟ್ಯಶ್ರೀ ಸಂಸ್ಥೆಯ ವಿದ್ವಾನ್ ದತ್ತಮೂರ್ತಿ ಭಟ್ ತಂಡದವರ ‘ಅಕ್ಕಮಹಾದೇವಿ ಚರಿತೆ’ ಯಕ್ಷಗಾನದ ಪ್ರಥಮ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಶರಣರ ಹಾದಿ ಅತ್ಯಂತ ಕಠಿಣ. ಯಾವುದೇ ಸಂದರ್ಭದಲ್ಲೂ ಅವರು ಸತ್ಯದ ಪ್ರತಿಪಾದನೆ ಬಿಡಲಿಲ್ಲ ಎಂದರು.

    ಯಕ್ಷಗಾನ ಅತ್ಯಂತ ಪ್ರಚಲಿತ ಮಾಧ್ಯಮ. ಇದರಲ್ಲಿ ರಾಮಾಯಣ, ಮಹಾಭಾರತದ ಚರಿತ್ರೆಗಳು ಅನಾವರಣಗೊಂಡು ಜನತೆಗೆ ತಲುಪಿದೆ. ಅಕ್ಕಮಹಾದೇವಿ, ಅಲ್ಲಮಪ್ರಭು ಮುಂತಾದ ಶರಣರು ಶಿಕಾರಿಪುರ ತಾಲೂಕಿನವರು. ಅವರೆಲ್ಲರ ವಿಚಾರಧಾರೆಗಳನ್ನು ಯಕ್ಷಗಾನಕ್ಕೆ ಪ್ರಥಮವಾಗಿ ಅಳವಡಿಸಿ ಹೊರತರಲಾಗುತ್ತಿದೆ ಎಂದು ತಿಳಿಸಿದರು.

    ವಿದ್ವಾನ್ ದತ್ತಮೂರ್ತಿ ಭಟ್ ಈಗಾಗಲೇ ಜಗಜ್ಯೋತಿ ಬಸವೇಶ್ವರರ ಚರಿತೆಯನ್ನು ನಾಡಿನ ಮೂಲೆ ಮೂಲೆಗಳಲ್ಲಿ ಯಕ್ಷಗಾನದ ಮೂಲಕ ಪರಿಚಯಿಸಿದ್ದಾರೆ. ಈ ಎರಡೂ ಪ್ರಸಂಗಗಳನ್ನು ದಿ. ಹೊಸ್ತೋಟ ಮಂಜುನಾಥ ಭಾಗವತರು ವ್ಯವಸ್ಥಿತವಾಗಿ ಕಟ್ಟಿಕೊಟ್ಟಿದ್ದಾರೆ. ಈ ರೀತಿಯ ಪ್ರಯತ್ನಗಳು ಹೆಚ್ಚಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

    ಖಾಸಗಿ ವಾಹಿನಿ ಮುಖ್ಯಸ್ಥ ಕೃಷ್ಣಪ್ಪ, ವಿದ್ವಾನ್ ದತ್ತಮೂರ್ತಿ ಭಟ್, ನಾಟ್ಯತರಂಗ ಟ್ರಸ್ಟ್​ನ ಜಿ.ಬಿ.ಜನಾರ್ದನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts