More

    ಸತ್ಯ ಶುದ್ಧ ಕಾಯಕ ಇರುವಲ್ಲಿ ಫಲ ನಿಶ್ಚಿತ

    ಬಸವಕಲ್ಯಾಣ: ಮನುಷ್ಯ ತನ್ನ ಜೀವನ ನಿರ್ವಹಣೆಗಾಗಿ ಒಂದಿಲ್ಲೊಂದು ವೃತ್ತಿ ಅವಲಂಬಿಸಿರುವುದು ಸಹಜ, ಮಾಡುವ ಕೆಲಸದಲ್ಲಿ ಪ್ರಾಮಾಣಿಕ ಪರಿಶ್ರಮ, ಸತ್ಯಶುದ್ಧತೆ ಇದ್ದಲ್ಲಿ ಲಕ್ಷ್ಮೀ ದೇವಿಯ ಫಲ ನಿಶ್ಚಿತ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

    ಗದಲೇಗಾಂವ(ಬಿ) ಗ್ರಾಮದ ಶ್ರೀ ಮಹಾಲಕ್ಷ್ಮೀ ೩ನೇ ಜಾತ್ರೋತ್ಸವ ನಿಮಿತ್ತ ಶುಕ್ರವಾರ ಸಂಜೆ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಾವು ನಂಬಿದ ದೈವ ಸನ್ನಿಧಿಗೆ ಸಾಮೂಹಿಕವಾಗಿ ಭಕ್ತಿಯನ್ನು ಅರ್ಪಿಸುವ ಸಮರ್ಪಕ ವ್ಯವಸ್ಥೆಯೇ ಜಾತ್ರೆ ಎಂದು ಹೇಳಿದರು.

    ಇಡೀ ಗ್ರಾಮದ ಎಲ್ಲ ಮನಸ್ಸುಗಳು ಒಂದೆಡೆ ಸೇರಿ ಬಾಂಧವ್ಯದ ಸುಧೆ ಹರಿಸುವ ಸಂಭ್ರಮದ ಆಚರಣೆಯೊಂದಿದ್ದರೆ ಅದು ಜಾತ್ರೆ ಎಂಬುದನ್ನು ನಮ್ಮ ಭಾರತೀಯ ಪರಂಪರೆಯಲ್ಲಿ ಸಾರ್ವಕಾಲಿಕ ಮಾನ್ಯವಾದುದು. ಲಕ್ಷ್ಮೀದೇವಿಯ ಮಹಾತ್ಮೆ ಅಗಾಧವಾಗಿದ್ದು, ಪ್ರತಿದಿನ ಮಾತೆಯ ಆರಾಧನೆ ಮಾಡುವುದರಿಂದ ಮನಸ್ಸಿಗೆ ಶಾಂತಿ, ಮನೆಯಲ್ಲಿ ಸಮೃದ್ಧಿ ದ್ವಿಗುಣಗೊಂಡು ಮಾಡುವ ಕಾರ್ಯಗಳಲ್ಲಿ ಪ್ರಸನ್ನತೆ ಮೂಡುತ್ತದೆ ಎಂದರು.

    ಮಂದಿರದ ಅಧ್ಯಕ್ಷ ಪಾಂಡುರಂಗ ಜಮಾದಾರ, ಉಪಾಧ್ಯಕ್ಷ ಪಂಡಿತರಾವ ಪೊಲೀಸ್ ಪಾಟೀಲ್, ತುಕಾರಾಮ ರಡ್ಡಿ ಬಾಕಾರೆ, ಹುಸೇನ್ ಪಟೇಲ್, ವೆಂಕಟರೆಡ್ಡಿ ಬಂದೆ, ಶಾಲಿವಾನ ಪೊಲೀಸ್ ಪಾಟೀಲ್, ಅಪ್ಪಣ್ಣ ಜನವಾಡ, ಕಾರ್ತಿಕ ಸ್ವಾಮಿ ಯಲದಗುಂಡಿ, ವೀರಾರಡ್ಡಿ ಕುಸಂಗೆ, ಸುಧಾಕರ ಜಮಾದಾರ, ಚನ್ನಪ್ಪ ಮಾಳಗೆ, ಧರ್ಮರಾವ ಹಾರಕೂಡೆ ಇತರರಿದ್ದರು.

    ವಿಠ್ಠಲ್ ಹೂಗಾರ ಸ್ವಾಗತಿಸಿ, ನಿರೂಪಣೆ ಮಾಡಿದರು. ದಿಲೀಪಕುಮಾರ ದೇಸಾಯಿ, ವಿಠ್ಠಲ್ ಪೂಜಾರಿ, ಮುದ್ದಾರೆಡ್ಡಿ ಖಲಂಗರೆ ಸಂಗೀತ ಸೇವೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts