More

    ಬಿ.ಎಸ್.ಸಣ್ಣಯ್ಯಗೆ ಸಿದ್ಧಾಂತ ಕೀರ್ತಿ ಪ್ರಶಸ್ತಿ ಪ್ರದಾನ

    ರಿಪ್ಪನ್​ಪೇಟೆ: ಶ್ರೀ ಕ್ಷೇತ್ರ ಹೊಂಬುಜ ಜೈನಮಠದಿಂದ ನೀಡುವ 2020ನೇ ಸಾಲಿನ ಸಿದ್ಧಾಂತಕೀರ್ತಿ ಪ್ರಶಸ್ತಿಯನ್ನು ಮೈಸೂರಿನ ಸಾಹಿತಿ, ಸಂಶೋಧಕ ಬಿ.ಎಸ್.ಸಣ್ಣಯ್ಯ ಅವರಿಗೆ ನೀಡಲಾಯಿತು. ಪ್ರಶಸ್ತಿಯನ್ನು ವಾರ್ಷಿಕ ಮಹಾರಥಯಾತ್ರೆಗೂ ಮುನ್ನ ನಡೆಯುವ ಧಾರ್ವಿುಕ ಸಭೆಯಲ್ಲಿ ನೀಡಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ಸಮಾರಂಭ ನಿಷೇಧಿಸಿದ್ದರಿಂದ ಜ.24ರಂದು ಮೈಸೂರಿನ ಅವರ ನಿವಾಸದಲ್ಲಿ ನೀಡಿ ಗೌರವಿಸಲಾಯಿತು.

    ಬಿ.ಎಸ್. ಸಣ್ಣಯ್ಯ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಭೋಗನಹಳ್ಳಿಯವರು. 1956ರಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಪದವೀಧರ ಸಂಶೋಧಕರಾಗಿ ಸೇರಿ ಅಲ್ಲಿಯೇ ಸಹಾಯಕ ನಿರ್ದೇಶಕರಾದರು. 1968ರಿಂದ ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಹಾಯಕ ನಿರ್ದೇಶಕರು ಮತ್ತು ಉಪನಿರ್ದೇಶಕರಾಗಿದ್ದು 1988ರಲ್ಲಿ ನಿವೃತ್ತರಾದರು.

    ಹಸ್ತಪ್ರತಿಶಾಸ್ತ್ರದಲ್ಲಿ ತಜ್ಞರಾಗಿದ್ದು ದೇಶದ ವಿವಿಧೆಡೆಗಳಲ್ಲಿ ದೊರೆಯುವ ಹಸ್ತಪ್ರತಿಗಳ ಪರಿಶೀಲಿಸಿ ಅನೇಕ ಅಪರೂಪದ ಕೃತಿಗಳನ್ನು ಹೊರತಂದಿದ್ದಾರೆ. 70ಕ್ಕೂ ಹೆಚ್ಚು ಕೃತಿಗಳ ಸಂಪಾದಕರು, ಅನುವಾದಕರು, ರಚನಕಾರರಾಗಿ ಕೆಲಸ ಮಾಡಿದ್ದಾರೆ. ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ, ತೀನಂಶ್ರೀ ಮತ್ತು ದೇವರಾಜ ಬಹದ್ದೂರ್, ಸ್ವಸ್ತಿಶ್ರೀ ದೇವೇಂದ್ರಕೀರ್ತಿ, ಪಿ.ಶಾಂತಿಲಾಲ್ ಪ್ರಶಸ್ತಿಯೂ ಲಭಿಸಿವೆ. ಗೊಮ್ಮಟೇಶ ವಿದ್ಯಾಪೀಠ ಪ್ರಶಸ್ತಿ, 1998ರ ಶ್ರೀ ಚಾವುಂಡರಾಯ ಪ್ರಶಸ್ತಿ, 2005ರ ಶ್ರೀಯುತ ಸೇಡಿಯಾಪು ಕೃಷ್ಣಭಟ್ಟ ಮತ್ತು ದಕ್ಷಿಣ ರೋಟರಿ ನೀಡುವ ದಕ್ಷಿಣ ಕೇಸರಿ, ಕನ್ನಡ ಸಾಹಿತ್ಯ ಪ್ರಶಸ್ತಿಗಳು ಸಂದಿವೆ.

    ಶ್ರೀ ಹೊಂಬುಜ ಜೈನ ಮಠದಿಂದ ಪ್ರತಿವರ್ಷ ನೀಡುವ ಸಿದ್ಧಾಂತಕೀರ್ತಿ ಪ್ರಶಸ್ತಿ 51,000 ರೂ. ನಗದು ಮತ್ತು ಅಂಗವಸ್ತ್ರ ಒಳಗೊಂಡಿದೆ. ಮೈಸೂರು ಜೈನ ಸಮಾಜದ ಅಧ್ಯಕ್ಷ ಸುನೀಲ್ ಕುಮಾರ್, ಪ್ರೊ. ಕುಸುಮಾ ಶ್ರವಣಬೆಳಗೊಳ, ಪ್ರೊ. ರಾಮೇಗೌಡ, ಸಣ್ಣಯ್ಯಗೌಡ್ರು, ಮೈಸೂರಿನ ಪದ್ಮರಾಜ್, ಶಾಂತಿಸಾಗರ ಶಿರಹಟ್ಟಿ ಶಾಸ್ತ್ರಿ, ರಮೇಶ ಶಾಸ್ತ್ರಿ, ಹೊಂಬುಜದ ಅಮಿತ್ ಶಾಸ್ತ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts