ಶ್ರೀ ಹುಣಸಮ್ಮ ಜಾತ್ರಾ ಮಹೋತ್ಸವ ನಾಳೆ

1 Min Read

  • ವಿಜಯವಾಣಿ ಸುದ್ದಿಜಾಲ ಸಾಲಿಗ್ರಾಮ
    ಸಾಲಿಗ್ರಾಮ ತಾಲೂಕಿನ ಪುರಾಣ ಪ್ರಸಿದ್ಧ ಮಿರ್ಲೆ ಗ್ರಾಮದ ಶ್ರೀ ಹುಣಸಮ್ಮ ಜಾತ್ರಾ ಮಹೋತ್ಸವ ಮಾ.22 ಮತ್ತು 23 ರಂದು ನಡೆಯಲಿದ್ದು, ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿದ್ದು, ಗ್ರಾಮ ಮದುವಣಗಿತ್ತೆಯಿಂತೆ ಸಿಂಗಾರಗೊಳ್ಳುತ್ತಿದೆ.
    ಮಾ.23 ರಂದು ಸಂಜೆ ರಥೋತ್ಸವ ನಡೆಯಲಿದೆ. ಮಿರ್ಲೆ, ನರಚನಹಳ್ಳಿ, ಬೀಚನಹಳ್ಳಿ ಕೊಪ್ಪಲು, ಬೀಚನಹಳ್ಳಿ, ಕೊಡಿಯಾಲ, ಹನುಮನ ಹಳ್ಳಿ, ನಾಟನಹಳ್ಳಿ, ಶ್ಯಾಬಾಳು, ಮಾಳನಾಯನಕಹಳ್ಳಿ, ಹಳೇ ಮಿರ್ಲೆ ಗ್ರಾಮದ ಭಕ್ತರು ರಥವನ್ನು ಎಳೆಯಲಿದ್ದಾರೆ. ರಥೋತ್ಸವದ ದಿನ ಮುಂಜಾನೆಯಿಂದಲೇ ಪೂಜಾ ವಿಧಿ ವಿಧಾನಗಳು ನಡೆಯಲಿದೆ. ಭಕ್ತರು ತಮ್ಮ ಹರಕೆಗಳನ್ನು ತೀರಿಸಲಿದ್ದಾರೆ.
    ಮಾ. 22 ರಂದು ಗ್ರಾಮಗಳಲ್ಲಿ ಹಬ್ಬ ನಡೆಯಲಿದೆ. ತವರಿಗೆ ಬರುವ ಹೆಣ್ಣು ಮಕ್ಕಳು ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರಿಗೆ ತಂಬಿಟ್ಟಿನ ಆರತಿ ಮತ್ತು ಮಡಿಲು ತುಂಬಿಸುವ ಶಾಸ್ತ್ರ ನೇರವೇರಿಸುವುದು ಜಾತ್ರೆಯ ವಿಶೇಷವಾಗಿದೆ. ಅಲ್ಲದೇ ಅಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ತಂಬಿಟ್ಟು ಸೇರಿದಂತೆ ವಿವಿಧ ಬಗೆಯ ಆರತಿಗಳು ನಡೆಯಲಿವೆ. ಸಂಜೆ ಉತ್ತರ ಪೂಜೆಯೊಂದಿಗೆ ತೀರ್ಥಪ್ರಸಾದ ಮತ್ತು ಮಹಾ ಮಂಗಳಾರತಿ ಜರುಗಲಿದೆ.
See also  ಬಿಜೆಪಿಯಿಂದ ಟಿಕೆಟ್ ಘೋಷಣೆ ಯಾವಾಗ? ಕೋರ್​ ಕಮಿಟಿ ಸಭೆಯಲ್ಲಿ ಮಾತನಾಡಿದ ಅಮಿತ್ ಷಾ
Share This Article