More

    ಕರೊನಾ ಹಿನ್ನೆಲೆ ಒಂದು ವರ್ಷ ಶಾಲೆ ಬಂದ್!

    ಮಂಗಳೂರು: ಎಲ್ಲೆಡೆ ಕರೊನಾತಂಕ ದಟ್ಟವಾಗಿದ್ದು, ಮಕ್ಕಳನ್ನು ಶಾಲೆಗೆ ಕಳಿಸೋಕು ಪೋಷಕರಿಗೆ ಧೈರ್ಯವಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದು ವರ್ಷ ಶಾಲೆಯನ್ನು ಬಂದ್​ ಮಾಡಲು ರಾಜ್ಯದ ವಿದ್ಯಾಸಂಸ್ಥೆಯೊಂದು ದಿಟ್ಟ ನಿರ್ಧಾರ ತೆಗೆದುಕೊಂಡಿದೆ.

    ಇದನ್ನೂ ಓದಿರಿ ಕ್ಯಾಬ್​ ಚಾಲಕರ ಹೈಟೆಕ್​ ವಂಚನೆಗೆ 500 ಸಿಮ್​ ಬಳಕೆ… ಹೇಗೆಲ್ಲ ಯಾಮಾರಿಸ್ತಾರೆ ನೋಡಿ!

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲ ಮಾಧ್ಯಮ ವಿದ್ಯಾಲಯವು ಪಾಲಕರ ಒಪ್ಪಿಗೆ ಮೇರೆಗೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

    ಇದನ್ನೂ ಓದಿರಿ Video/ ದಾರೀಲಿ ಒಂಟಿಸಲಗ ಪ್ರತ್ಯಕ್ಷ, ಮಹಿಳೆ ಬಚಾವ್​ ಆಗಿದ್ದೇ ರೋಚಕ!

    ಕನ್ಯಾಡಿ ಶ್ರೀ ಆತ್ಮಾನಂದ ಸರಸ್ವತಿ ವಿದ್ಯಾಲಯದಲ್ಲಿ ಸುಮಾರು 350 ವಿದ್ಯಾರ್ಥಿಗಳಿದ್ದಾರೆ. ಎಲ್​ಕೆಜಿಯಿಂದ ಹತ್ತನೇ ತರಗತಿವರೆಗೆ ನಡೆಯುತ್ತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ 350 ವಿದ್ಯಾರ್ಥಿಗಳ ಪೈಕಿ ಸುಮಾರು 250 ಮಕ್ಕಳು 12 ವರ್ಷ ವಯಸ್ಸಿನೊಳಗಿನವರು. ಹಾಗಾಗಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ನಡೆಸುತ್ತಿಲ್ಲ ಎಂದು ಶಿಕ್ಷಣ ಸಂಸ್ಥೆ ಅಧ್ಯಕ್ಷ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

    ಇದನ್ನೂ ಓದಿರಿ ಬಿಎಸ್​ವೈ ಹೆಸರಲ್ಲಿ ಚೌಡಿಗೆ ಕುರಿ-ಕೋಳಿ ಬಲಿ ಕೊಟ್ಟರೇ ಶಾಸಕ?

    ಶಾಲೆಯನ್ನು ಈ ವರ್ಷ ಸಂಪೂರ್ಣವಾಗಿ ಬಂದ್​ ಮಾಡುವ ಬಗ್ಗೆ ಮಕ್ಕಳ ಪೋಷಕರ ಅಭಿಪ್ರಾಯ ಪಡೆದೇ ಶಾಲಾ ಆಡಳಿತ ನಿರ್ಧಾರ ಕೈಗೊಂಡಿದೆ. ಈ ವರ್ಷವೂ ತಮ್ಮ ಮಕ್ಕಳ ಶಿಕ್ಷಣ ಮುಂದುವರಿಸಲು ಇಚ್ಛಿಸಿ ಬೇರೆ ಶಾಲೆಗೆ ಸೇರಲು ಬಯಸಿದರೆ ಅವರಿಗೆ ವರ್ಗಾವಣೆ ಪತ್ರವನ್ನೂ ಕೊಡಲಾಗುತ್ತದೆ. ಶಾಲೆ ಸ್ಥಗಿತದ ಬಗ್ಗೆ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಲಾಗಿದೆ.

    ಕರೊನಾ ಭಯಕ್ಕೆ ಒಂದು ವರ್ಷ ಶಾಲೆಯೇ ಬಂದ್! | Shri Atmananda Saraswathi Vidyalaya closed for one year

    ಕರೊನಾ ಭಯಕ್ಕೆ ಒಂದು ವರ್ಷ ಶಾಲೆಯೇ ಬಂದ್!#ShriAtmanandaSaraswathiVidyalaya #Closed #OneYear #DakshinKannada

    Dighvijay News – ದಿಗ್ವಿಜಯ ನ್ಯೂಸ್ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಜೂನ್ 12, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts