More

    ಕನ್ನಡ ಕಂಪನ್ನು ಎಲ್ಲೆಡೆ ಹರಡಿರಿ

    ಕುಶಾಲನಗರ: ಕನ್ನಡದ ಕಂಪನ್ನು ಎಲ್ಲೆಡೆ ಹರಡುವ ಕೆಲಸ ನಿತ್ಯ ಆಗಬೇಕು. ವರ್ಷದ 365 ದಿನವೂ ಕನ್ನಡ ಉಳಿಸಿ ಬೆಳೆಸಲು ಚಿಂತನೆ ನಡೆಸಬೇಕು ಎಂದು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ನಾಗೇಶ್ ಹೇಳಿದರು.

    ನಗರದ ಕಲಾಭವನದ ಹಾಗೂ ಕಸಾಪ ಕಚೇರಿಯಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

    ಬಹುಭಾಷಿಗರು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಕನ್ನಡಾಭಿಮಾನ ಮೂಡಿಸುವ ಕೆಲಸ ಆಗಬೇಕು ಎಂದರು.
    ಕಸಾಪ ನಿಕಟ ಪೂರ್ವ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಮಾತನಾಡಿ, ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡಾಭಿಮಾನ ಮೂಡಿಸಿಕೊಳ್ಳಬೇಕು. ಪ್ರತಿಯೊಬ್ಬನ ಮನಸ್ಸಿನಲ್ಲೂ ಕನ್ನಡಾಭಿಮಾನ ಮೂಡಬೇಕು ಎಂದು ಹೇಳಿದರು.

    ಸೋಮವಾರಪೇಟೆ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಕರವೇ ತಾಲೂಕು ಅಧ್ಯಕ್ಷ ಬಿ.ಪಿ. ನಾಗೇಗೌಡ, ಕೆ.ವಿ.ಉಮೇಶ್, ಶೈಲಾ, ನಾಗರಾಜ್, ಕೆ.ಎನ್. ದೇವರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts