ನಾನಿದನ್ನು ನಂಬುವುದೇ ಇಲ್ಲ...ಸೂರ್ಯವಂಶಿಯ ರಣಾರ್ಭಟ ಕಂಡು ಗಂಭೀರ ಆರೋಪ ಮಾಡಿದ ಪಾಕ್​ ಮಾಜಿ ಕ್ರಿಕೆಟಿಗ​..! Vaibhav Suryavanshi

ಯುಎಇ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರ ವಿನಾಶಕಾರಿ ಬ್ಯಾಟಿಂಗ್ ಕಂಡು ಬೆರಗಾಗಿರುವ ಪಾಕಿಸ್ತಾನದ ಮಾಜಿ ವೇಗಿ ತನ್ವೀರ್ ಅಹ್ಮದ್, ಪಾಕಿಸ್ತಾನದ ಟಿವಿ ಚಾನೆಲ್ ಒಂದರಲ್ಲಿ ಮಾತನಾಡುತ್ತಾ ತಮ್ಮ ಅಸಮಾಧಾನ ಮತ್ತು ಅನುಮಾನವನ್ನು ಹೊರಹಾಕಿದ್ದಾರೆ.
Vaibhav Suryavanshi
ಟೀಮ್​ ಇಂಡಿಯಾದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್​ ಅಹ್ಮದ್​
Published on: 

ನವದೆಹಲಿ: ಕತಾರ್​ನ ದೋಹಾದಲ್ಲಿ ನಡೆಯುತ್ತಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ 2026ರ ಟೂರ್ನಿಯಲ್ಲಿ ಟೀಮ್​ ಇಂಡಿಯಾದ ಕೇವಲ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ( Vaibhav Suryavanshi ) ಅವರ ಬ್ಯಾಟಿಂಗ್​ ಆರ್ಭಟವನ್ನು ಕಂಡು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್ ದಂಗಾಗಿದ್ದಾರೆ. ವೈಭವ್, ಕೇವಲ 52 ಎಸೆತಗಳಲ್ಲಿ ಬರೋಬ್ಬರಿ 28 ಸಿಕ್ಸರ್​ ಹಾಗೂ 7 ಬೌಂಡರಿಗಳನ್ನೊಳಗೊಂಡ ಐತಿಹಾಸಿಕ ದ್ವಿಶತಕ ಸಿಡಿಸಿ, ಅನೇಕ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಇಡೀ ಕ್ರಿಕೆಟ್ ಜಗತ್ತು ಈ ಯುವ ಪ್ರತಿಭೆಯನ್ನು ಕೊಂಡಾಡುತ್ತಿದ್ದರೆ, ತನ್ವೀರ್ ಅಹ್ಮದ್ ಮಾತ್ರ ವೈಭವ್ ವಯಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, "ಆತ 15 ವರ್ಷದ ಹುಡುಗನಲ್ಲ, ಕನಿಷ್ಠ 20-21 ವರ್ಷದವನಿರಬೇಕು" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯುಎಇ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರ ವಿನಾಶಕಾರಿ ಬ್ಯಾಟಿಂಗ್ ಕಂಡು ಬೆರಗಾಗಿರುವ ಪಾಕಿಸ್ತಾನದ ಮಾಜಿ ವೇಗಿ ತನ್ವೀರ್ ಅಹ್ಮದ್, ಪಾಕಿಸ್ತಾನದ ಟಿವಿ ಚಾನೆಲ್ ಒಂದರಲ್ಲಿ ಮಾತನಾಡುತ್ತಾ ತಮ್ಮ ಅಸಮಾಧಾನ ಮತ್ತು ಅನುಮಾನವನ್ನು ಹೊರಹಾಕಿದ್ದಾರೆ. ಆತನಿಗೆ 15 ವರ್ಷ ವಯಸ್ಸಲ್ಲ, ಕನಿಷ್ಠ 20 ರಿಂದ 21 ವರ್ಷ ವಯಸ್ಸಾಗಿರಬೇಕು. ಎಷ್ಟೇ ದೊಡ್ಡ ಪ್ರತಿಭೆಯಾಗಿದ್ದರೂ 15 ವರ್ಷದ ಹುಡುಗ ಈ ರೀತಿಯಾಗಿ 28 ಸಿಕ್ಸರ್‌ಗಳನ್ನು ಬಾರಿಸಲು ಸಾಧ್ಯವೇ ಇಲ್ಲ. 15 ವರ್ಷದ ಬಾಲಕನ ದೇಹದ ಬುನಾದಿ (ಬೇಸ್) ಇಷ್ಟೊಂದು ಗಟ್ಟಿಯಾಗಿರಲು ಸಾಧ್ಯವಿಲ್ಲ ಹಾಗೂ ಆತನ ತೋಳು ಮತ್ತು ಭುಜಗಳಲ್ಲಿ ಇಷ್ಟೊಂದು ಶಕ್ತಿ ಇರಲು ಸಾಧ್ಯವಿಲ್ಲ. ಇದನ್ನು ನಾನು ನಂಬುವುದೇ ಇಲ್ಲ ಎಂದು ತನ್ವೀರ್ ಅಹ್ಮದ್ ಹೇಳಿದ್ದಾರೆ.

Also Read
52 ಎಸೆತ, 28 ಸಿಕ್ಸರ್​, 204 ರನ್​... ವೈಭವ್ ಆರ್ಭಟದ​ ಬಗ್ಗೆ ಅಖ್ತರ್​ ಆಡಿದ ಮಾತುಗಳಿಗೆ ತಲೆಬಾಗಿದ ಕ್ರೀಡಾ ಜಗತ್ತು! Vaibhav Suryavanshi
Vaibhav Suryavanshi

ಇದೇ ವೇಳೆ ಕಾರ್ಯಕ್ರಮದ ನಿರೂಪಕರು ವೈಭವ್ ಅವರಿಗೆ ಮಣಿಕಟ್ಟಿನ ಪರೀಕ್ಷೆ (Wrist Test) ನಡೆಸಬೇಕು ಎಂದಾಗ, ತಕ್ಷಣವೇ ಪ್ರತಿಕ್ರಿಯಿಸಿದ ತನ್ವೀರ್, "ಹೌದು, ಖಂಡಿತವಾಗಿಯೂ ವಯಸ್ಸಿನ ಪರೀಕ್ಷೆ ನಡೆಸಿ, ಆಗ ನಿಜಾಂಶ ಹೊರಬರುತ್ತದೆ. ಆದರೆ, ಆತ 15 ವರ್ಷದ ಹುಡುಗ ಎಂದು ನಾನು ಒಪ್ಪುವುದಿಲ್ಲ" ಎಂದು ತನ್ವೀರ್​ ಅಚ್ಚರಿ ಹೇಳಿಕೆ ನೀಡಿದ್ದಾರೆ. ಕೇವಲ 8 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ತನ್ವೀರ್ ಅಹ್ಮದ್, ವೈಭವ್ ಅವರ ಅಸಾಧಾರಣ ಸಾಧನೆಯನ್ನು ಮೆಚ್ಚುವ ಬದಲು ವಯಸ್ಸಿನ ತನಿಖೆಗೆ ಒತ್ತಾಯಿಸಿರುವುದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಾಸ್ತವವಾಗಿ, ಭಾರತೀಯ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ವಯಸ್ಸಿನ ವಿಚಾರವಾಗಿ ಈಗಾಗಲೇ ಎಲ್ಲಾ ರೀತಿಯ ಸ್ಪಷ್ಟನೆ ಮತ್ತು ದಾಖಲೆಗಳು ಲಭ್ಯವಿವೆ. 2011ರ ಮಾರ್ಚ್ 27ರಂದು ಜನಿಸಿರುವ ವೈಭವ್ ಅವರಿಗೆ ಇನ್ನೂ 15 ವರ್ಷ ವಯಸ್ಸಾಗಿದ್ದು, ಇನ್ನು ನಾಲ್ಕು ತಿಂಗಳು ಕಳೆದರೆ 16ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅವರ ಜನನ ಪ್ರಮಾಣಪತ್ರ ಹಾಗೂ ಶಾಲಾ ದಾಖಲೆಗಳಲ್ಲೂ ಇದೇ ವಯಸ್ಸು ದಾಖಲಾಗಿದ್ದು, ಇನ್ನೂ 10ನೇ ತರಗತಿಯ ಪರೀಕ್ಷೆಯನ್ನೂ ಬರೆದಿಲ್ಲ. ಅಷ್ಟೇ ಅಲ್ಲದೆ, ಬಿಸಿಸಿಐ ನಿಯಮಗಳ ಪ್ರಕಾರ ಅವರ ಮೂಳೆ ಪರೀಕ್ಷೆ (Bone Test) ಕೂಡ ಈಗಾಗಲೇ ನಡೆದಿದ್ದು, ಅವರ ನಿಜವಾದ ವಯಸ್ಸು 15 ವರ್ಷ ಎಂಬುದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.

Also Read
ಪಾಕಿಸ್ತಾನದಲ್ಲಾಗಿದ್ರೆ 15 ವರ್ಷದ ಆಟಗಾರನನ್ನು...ವೈಭವ್​ ಬಗ್ಗೆ ಅಚ್ಚರಿ ಮಾತುಗಳಾಡಿದ ಪಾಕ್​ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್! Vaibhav Suryavanshi
Vaibhav Suryavanshi

ಮತ್ತೊಂದೆಡೆ, ಪಾಕಿಸ್ತಾನದ ಕ್ರಿಕೆಟ್‌ನಲ್ಲಿ ಆಟಗಾರರ ವಯಸ್ಸನ್ನು ಕಡಿಮೆ ಮಾಡಿ ತೋರಿಸುವ (Age Fudging) ಕೆಟ್ಟ ಸಂಪ್ರದಾಯ ಮೊದಲಿನಿಂದಲೂ ಇರುವುದರಿಂದ ತನ್ವೀರ್ ಅಹ್ಮದ್ ಅವರಿಗೆ ಎಲ್ಲರೂ ಹಾಗೆಯೇ ಕಾಣಿಸುತ್ತಿದ್ದಾರೆ ಎಂದು ನೆಟ್ಟಿಗರು ತಿರುಗೇಟು ನೀಡುತ್ತಿದ್ದಾರೆ. ಸ್ವತಃ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ತಮ್ಮ ಆತ್ಮಚರಿತ್ರೆಯಲ್ಲಿ ತಮ್ಮ ನಿಜವಾದ ವಯಸ್ಸಿಗಿಂತ 5 ವರ್ಷ ಕಡಿಮೆ ದಾಖಲಿಸಲಾಗಿತ್ತು ಎಂಬ ಸತ್ಯವನ್ನು ಬಹಿರಂಗಪಡಿಸಿದ್ದರು.

ಅಲ್ಲದೆ, ಪಾಕಿಸ್ತಾನದ ಅಂಡರ್-19 ತಂಡ ಆಡುವಾಗಲೆಲ್ಲಾ ಆಟಗಾರರ ಮುಖ ನೋಡಿದರೆ ಅವರು 19 ವರ್ಷಕ್ಕಿಂತ ತುಂಬಾ ದೊಡ್ಡವರಂತೆ ಕಾಣುತ್ತಾರೆ ಎಂಬುದು ಇಡೀ ಜಗತ್ತಿಗೆ ತಿಳಿದಿರುವ ಸತ್ಯವಾಗಿದ್ದು, ಇಂತಹ ಹಿನ್ನೆಲೆಯ ಪಾಕ್ ಮಾಜಿ ಆಟಗಾರ ಈಗ ಭಾರತದ ಯುವ ಪ್ರತಿಭೆಯ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ, (ಏಜೆನ್ಸೀಸ್​).